ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ. ಹಿಂದಿನ ಅಡುಗೆ ಮನೆ ಇಂದು ಮಾಯವಾಗುತ್ತಿದೆ. ಜಾನಪದ ಅಡುಗೆಗಳನ್ನು ಇಡ್ಲಿ ದೋಸೆ ತಿಂದು ಹಾಕುತ್ತಿರುವುದು ದುರಂತಮಯ ಎಂದು ಕಾಂಗ್ರೆಸ್ ಮುಖಂಡ ಡಾ ಪ್ರಭುಗೌಡ ಲಿಂಗದಳ್ಳಿ ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ತಾಳಿಕೋಟೆ ವತಿಯಿಂದ ತಾಲೂಕಿನ ಬಳಗಾನೂರ ನಿಲಗಂಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ಏರ್ಪಡಿಸಿದ ” ಸಂಕ್ರಾಂತಿ ಜಾನಪದ ಸಂಬ್ರಮ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಜಾನಪದ ಸಂಸ್ಕೃತಿ ಮರೆತರೆ ದೈಹಿಕ ಮತ್ತು ಮಾನಸಿಕ ದುರ್ಬಲವಾಗುತ್ತದೆ ಎಂದರು.
ಅತಿಥಿಯಾಗಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ನಿರ್ಧೇಶಕ ಶಿವನಗೌಡ ಬಿರಾದಾರ ಮಾತನಾಡಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಬಾಳನಗೌಡ ಪಾಟೀಲ ಮತ್ತು ತಂಡ ಮಾಡುತ್ತಿರುವುದು ಮೆಚ್ಚುವಂತದ್ದು ಎಂದರು.
ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಜಾನಪದ ಸಂಸ್ಕೃತಿ ಹಾಳಾದರೆ ಜನರ ಬದುಕಿಗೆ ಅರ್ಥ ಇರುವದಿಲ್ಲ. ನಮ್ಮ ಮೂಲ ಸಂಸ್ಕೃತಿ ಉಳಿಯಬೇಕು ಎನ್ನುವುದು ನಮ್ಮ ಪರಿಷತ್ತಿನ ಆಶಯ ಎಂದರು
ಗ್ರಾಮ ಸಂಸ್ಕೃತಿ ಮತ್ತು ಯುವಜನತೆ ಕುರಿತು ಶಿಕ್ಷಕಿ ಶಿವಲೀಲಾ ಮುರಾಳ ಉಪಾನ್ಯಾಸ ನೀಡಿದರು. ಕೃಷಿ ಪಂಡಿತ ಅರವಿಂದ ಕೊಪ್ಪ ಮಾತನಾಡಿದರು.
ವೇದಿಕೆಯಲ್ಲಿ ನೀಲಕಂಠಯ್ಯ ಮಠ, ಸಾಹಿತಿ ಮಲ್ಲಿಕಾರ್ಜುನ ಧರಿ,ಸೋಮಶೇಖರ್ ಹೀರೆಮಠ , ಮಲ್ಲಣ್ಣ ದೋರನಳ್ಳಿ, ಚೆನ್ನಣ್ಣ ಅಲದಿ, ನ್ಯಾಯವಾದಿ ಎಂ ಬಿ ಅಲದಿ , ಸಂಗನಗೌಡ ಬಿರಾದಾರ, ಸಿದ್ಧರಾಮ ಬಿರಾದಾರ, ದುಂಡಯ್ಯ ಮಠಪತಿ, ಶ್ವೇತಾ ಯರಗಲ್ಲ , ಇದ್ದರು.
ಜಾನಪದ ಗೀತೆ, ಡೊಳ್ಳಿನ ವಾಲಗ, ಕೋಲಾಟ, ರಿವಾಯತ ಹಾಡು, ಹಂತಿ ಮೇಳ, ಚೌಡಕಿ ಮೇಳ, ಶೋಬಾನ ಪದ ಪ್ರದರ್ಶನ ನಡೆದವು.

