ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಎಚ್‌ಐವಿ ಸೋಂಕು ಮತ್ತು ಏಡ್ಸ್ ರೋಗದ ಕುರಿತು ಯುವಜನತೆ ಅರಿಯುವುದು ಅಗತ್ಯವಾಗಿದೆ ಎಂದು ಡಾಪ್ಕೋ ಅಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.
ಪಟ್ಟಣದ ಬಿ.ಎಲ್.ಡಿ..ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿ ಸೋಮವಾರ ಜರುಗಿದ ಏಡ್ಸ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನತೆ ಭವಿಷ್ಯದ ದೃಷ್ಠಿಯಿಂದ ವಿವಿಧ ರೋಗಗಳ ಮೂಲ, ಕಾರಣ, ಎಚ್ಚರಿಕೆ ವಹಿಸಬೇಕಾದ ಕ್ರಮಗಳು ಹಾಗೂ ರಕ್ತದಾನದ ಕುರಿತು ತಿಳಿಯಬೇಕಾಗಿದೆ ಎಂದರು.
ಸ್ಥಳೀಯ ಕಾಲೇಜು ಉಪನ್ಯಾಸಕಿ ವ್ಹಿ.ಆರ್.ವಿಜಯಲಕ್ಷ್ಮಿ ಮಾತನಾಡಿ, ದೇಶದ ಯುವ ಸಂಪತ್ತು ಆರೋಗ್ಯಪೂರ್ಣವಾಗಿದ್ದಲ್ಲಿ ಮಾತ್ರ ದೇಶ ಭದ್ರ ಹಾಗೂ ಸದೃಡವಾಗಿರಲು ಸಾಧ್ಯ ಎಂದು ಹೇಳುತ್ತಾ, ರೋಗಿಗಳ ಕುರಿತು ಮಾನವೀಯತೆ ಇರಲಿ ಎಂದರು.
ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಡಾ.ಮಂಜುನಾಥ ಮಠ, ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಪಾಟೀಲ, ಕೆಸಾಪ್ಸ್ ಜಿಲ್ಲಾ ಮೇಲ್ವಿಚಾರಕ ಬಾಬುರಾವ್ ತಳವಾರ, ಸಮಾಲೋಚಕ ಕಲ್ಲೂರ, ಟೆಕ್ನಷಿಯನ್ ಜಯಶ್ರೀ ಸುರಪೂರ, ಬಿ.ಎಲ್.ಡಿ.ಇ ಆಸ್ಪತ್ರೆಯ ಸಮಾಲೋಚಕಿ ಅರ್ಚನಾ ಏಳಕೋಟಿ, ಆಶಾ ಧಾರವಾಡಕರ, ಉಪನ್ಯಾಸಕ ನವೀನಕುಮಾರ, ಗಾಯಕಿ ಸವಿತಾ ಮೇಲಿನಮನಿ, ಎನ್‌ಟಿಇಪಿ ಸಿಬ್ಬಂದಿ ಅಷ್ಟಪುತ್ರೆ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನೀಯರು, ಸಿಬ್ಬಂದಿ ಇದ್ದರು.

