ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಬಸವಾದಿ ಶಿವಶರಣರಲ್ಲಿ
ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಶರಣರು ಶ್ರೇಷ್ಠ ವಚನಕಾರ ಅವರ ಬದುಕು ಬರಹ ನಮಗೆಲ್ಲ ಆದರ್ಶ ಎಂದು ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ್ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ವೃತ್ತದಲ್ಲಿ ಮಂಗಳವಾರ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ 853 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು 12ನೇ ಶತಮಾನ ಕಂಡ ಮಹಾಶರಣ ಶ್ರೀ ಸಿದ್ದರಾಮೇಶ್ವರರು ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕ ಯೋಗಿ ಎಂದವರು ಜಾತಿ, ಮತ, ಪಂಥಗಳೆನ್ನದೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಅವರ ತೋರಿದ ಹಾದಿಯಲ್ಲಿ ಇಂದಿನ ಭೋವಿ ಸಮಾಜ ತಮ್ಮನ್ನು ತಾವು ಅರಿತು ಬದಲಾಗಬೇಕಿದೆ ಎಂದರು.
ಮಾಜಿ ಪುರಸಭೆ ಸದಸ್ಯ ಮಹಿಪಾಲರೆಡ್ಡಿ ಡಿಗ್ಗಾವಿ ಮಾತನಾಡಿ ಶಿವಯೋಗಿ ಸಿದ್ದರಾಮೇಶ್ವರರು ಕೆರೆ, ಕಾಲುವೆ, ದೇವಸ್ಥಾನ, ಕಟ್ಟಿಸುವ ಮೂಲಕ ಕರ್ಮ ಮಾರ್ಗದಲ್ಲಿ ಸಾಗಿದರೆ ಮಾನವ ಜನ್ಮ ಸಾರ್ಥಕ ಎಂದು ನಿರೂಪಿಸಿದ್ದಾರೆ. ನಂತರದ ದಿನಗಳಲ್ಲಿ ಬಸವಣ್ಣ ಮತ್ತು ಸಾವಿರಾರು ಶರಣರ ಭೇಟಿಯಿಂದ ಜ್ಞಾನ ಮಾರ್ಗದಲ್ಲಿ ಸಾಗಿದ ಮಹಾ ಚೇತನ ಎಂದವರು, ಶ್ರೀಸಿದ್ದರಾಮೇಶ್ವರರ ವಚನಗಳು ಸಮಾಜದಲ್ಲಿರುವ ಸಕಲ ಜೀವಿಗಳಿಗೂ ಒಳಿತನ್ನು ಬಯಸುವುದಾಗಿದೆ. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು ಎಂದು ತಿಳಿಸುತ್ತವೆ. ಹೀಗಾಗಿ ಪ್ರತಿಯೊಬ್ಬರು ಕಾಯಕಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.
ಪ್ರಮುಖರಾದ ಪುರಸಭೆ ಸದಸ್ಯರಾದ ರಹೀಮಾನ ಪಟೀಲ್ ಯಲಗೋಡ, ಆರೀಫ ಹುಸೇನ್ ಖಾಜಿ, ರಾಜು ಬಾಂಬೆ, ಮಾಜಿ ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ. ಅರ್ಚಕ ಪ್ರಶಾಂತ ಹಿರೇಮಠ. ಪುರಸಭೆ ಮುಖ್ಯಾಧಿಕಾರಿ ಮಹಮದ್ ಯೂಸುಫ್, ಸಿಬ್ಬಂದಿಗಳಾದ ಸಿದ್ರಾಮಯ್ಯ ಇಂಡಿ, ಮಹಮದ್ ವಲಿ, ಹನೀಫ್ ಸಾಸನೂರ,ಶಿವು ಮಲ್ಲಿಬಾವಿ.
ಇದೇ ವೇಳೆ ಸಮಾಜದ ಮುಖಂಡರಾದ ರಂಗಪ್ಪ ವಡ್ಡರ, ಕುಮಾರ ಆರ್ ಭೋವಿ, ಸಿದ್ರಾಮ ಗೌಂಡಿ, ಮುದಕಪ್ಪ, ಗುರುನಾಥ ಚಂದಾಪುರ, ಲಕ್ಷ್ಮಣ ಎಚ್,ದುರ್ಗಾ ಪ್ರಸಾದ್, ಅಂಬರೀಶ, ಮಂಜುನಾಥ್ ಭೋವಿ, ಹುಸೇನಿ ಗೌಂಡಿ, ಮಾರುತಿ ಆರ್ ಭೋವಿ, ಹಣಮಂತ, ರಾಜು ಆಟೋ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

