ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ‘ಉರ್ದು ಭಾಷಣ’ ವಿಭಾಗದಲ್ಲಿ ಸರ್ಕಾರಿ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಾ ಹೊನ್ನುಟಗಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ವಿದ್ಯಾರ್ಥಿನಿ ಸತತ ಎರಡನೇ ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅವಳ ಸಾಧನೆಗೆ ಉರ್ದು ಭಾಷಾ ಶಿಕ್ಷಕ ಯಾಸೀನ್ ಗರಡಿಮನಿ, ಮುಖ್ಯಶಿಕ್ಷಕ ಆರ್.ಎಲ್.ರಾಠೋಡ, ಎಸ್‌ಡಿಎಮ್‌ಸಿ ಅಧ್ಯಕ್ಷ ಅಬ್ದುಲ್ಲಾ ಚೌಧರಿ, ಉಪಾಧ್ಯಕ್ಷ ಸಾಧಿಕಪಾಷಾ ಮಾಲಿಪಾಟೀಲ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

