ಉದಯರಶ್ಮಿ ದಿನಪತ್ರಿಕೆ
ಇಂಡಿ: ನೌಕರರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರ್ಕಾರಿ ನೌಕರರ ಸಂಘದ ಇಂಡಿ ಶಾಖೆಯ ೨೦೨೫ ನೇ ಇಸವಿಯ ನೂತನ ಕ್ಯಾಲೆಂಡರ್ ಗಳನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದರು.
ಸರ್ಕಾರಿ ಎಲ್ಲ ಇಲಾಖೆಗಳ ನೌಕರರು ಭ್ರಷ್ಟಾಚಾರ ಮುಕ್ತವಾಗಿ ತಮ್ಮ ಕಾರ್ಯ ನಿರ್ವಹಿಸಿದ್ದೇ ಆದಲ್ಲಿ ಆಡಳಿತ ವ್ಯವಸ್ಥೆ ಚುರುಕುಗೊಳ್ಳುತ್ತದೆ, ಅಲ್ಲದೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಆ ನಿಟ್ಟಿನಲ್ಲಿ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ರಾವೂರ, ನಿಜಣ್ಣ ಕಾಳೆ, ಎಸ್.ವಿ. ಹರಳಯ್ಯ, ಜಿ.ಎಂ. ಬಿರಾದಾರ, ಎಂ.ಎಸ್. ಹರಿಜನ, ಯಮನೇಶ ಬಿರಾದಾರ, ರವಿ ಗಿಣ್ಣಿ, ದತ್ತಾತ್ರೇಯ ಲಾಳಸಂಗಿ, ಶಿವಶರಣ ಹಂಜಗಿ, ಅಲ್ಲಾಭಕ್ಷ ವಾಲಿಕಾರ, ಅಸ್ಲಾಂ ಪಟೇಲ, ವೈ.ಟಿ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.

