ಸಿಂದಗಿ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಿಷಾದ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಸಾಯನಿಕ ರಸಗೊಬ್ಬರಗಳ ಅತೀಯಾದ ಬಳಕೆಯಿಂದ ಭೂಮಿಯು ಬಂಜರುಗೊಳ್ಳುತ್ತಿದ್ದು, ನಾವು ಭೂಮಿಗೆ ವಿಷ ಉಣ್ಣಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಿಷಾದ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಸಾರಂಗಮಠದ ಆವರಣದಲ್ಲಿ ವಿನಾಯಕ್ ಸಾವಯವ ರೈತಮಿತ್ರ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಕಾಯಕ ಮಾಡುವುದು ಅತ್ಯಂತ ದುಬಾರಿಯಾಗಿದೆ. ರಸಗೊಬ್ಬರಗಳ ಬೆಲೆ, ದುಡಿಯುವ ಆಳುಗಳ ದಿನಗೂಲಿ ಹಲವು ಪಟ್ಟು ಹೆಚ್ಚಾಗಿದ್ದು, ರೈತ ಬೆಳೆದ ಬೆಳೆಗೆ ಬೆಲೆ ಮಾತ್ರ ಹೆಚ್ಚಾಗದೇ ಇರುವುದರಿಂದ ಕೃಷಿಕ ಸಾಲಗಾರನಾಗುತ್ತಿದ್ದಾನೆ. ಇದೆಲ್ಲವೂ ಹೋಗಲಾಡಿಸಿ ಸುಸ್ಥಿರ ಮತ್ತು ಸ್ವಾವಲಂಬಿ ಕೃಷಿಯತ್ತ ಹೆಚ್ಚೆ ಇಡಬೇಕಾದರೆ ಸಾವಯವ ಕೃಷಿಯನ್ನು ರೈತರು ಅಪ್ಪಿಕೊಂಡು ಒಪ್ಪಿಕೊಳ್ಳಲೆಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಪ್ರತಿಯೊಬ್ಬರು ಗೋವು ಆಧಾರಿತ ಕೃಷಿಯನ್ನು ಕೈಗೊಳ್ಳಬೇಕು. ಹೊಲದಲ್ಲಯೇ ಸಿಗುವ ಕೃಷಿತ್ರಾö್ಯಜ್ಯ ಸಂಪನ್ಮೂಲಗಳಿAದ ಗೊಬ್ಬರ ತಯಾರಿಸಿ ಭೂಮಿಯ ಆರೋಗ್ಯವನ್ನು ಹೆಚ್ಚಿಸಬೇಕು ಎಂದರು.
ಈ ವೇಳೆ ಆಲಮೇಲದ ಸಾವಯವ ಕೃಷಿಕ ಸುನೀಲ ನಾರಾಯಣಕರ ಮಾತನಾಡಿ, ನಾವು ಬೆಳೆದ ಬೆಳೆಗೆ ನಾವೇ ಬೆಲೆ ನಿರ್ಧರಿಸುವಂತಾದಾಗ ಮಾತ್ರ ನಮ್ಮ ಏಳ್ಗೆ ಸಾಧ್ಯ. ಪ್ರತಿಷ್ಠೆ ಮತ್ತು ರಾಜಕಾರಣಿಳ ಬೆನ್ನು ಹತ್ತುವದನ್ನು ಬಿಟ್ಟಾಗ ರೈತನ ಏಳಿಗೆ ಸಾಧ್ಯ. ನಮ್ಮ ಕಾರ್ಯಕ್ಕಾಗಿ ಅಧಿಕಾರಿಗಳ ಎದುರು ಕೈ ಒಡ್ಡುವುದನ್ನು ನಾವು ಬಿಡಬೇಕು. ಜಿಲ್ಲಾಧಿಕಾರಿಗಳ ಹತ್ತಿರ ನಾವು ಹೋಗದೇ ನಾವು ಬೆಳೆದ ಬೆಳೆ ನೋಡಿ ಜಿಲ್ಲಾಧಿಕಾರಿಯೇ ನಮಗೆ ಸೇಲ್ಯುಟ್ ಹೊಡೆಯಬೇಕು. ಹಾಗೆ ರೈತರು ಬೆಳೆಯಬೇಕು. ಹೊಲದಲ್ಲಿ ಬೆಳೆದ ಬೆಳೆಗಳಿಂದ ವಿವಿಧ ರೀತಿಯ ವಸ್ತುಗಳನ್ನು ಉತ್ಪಾದಿಸಿ ಮಾರಟ ಮಾಡಿದಾಗ ಅಧಿಕ ಉತ್ಪನ್ನ ಗಳಿಸಲು ಸಾಧ್ಯ. ಕುರಿ, ಕೋಳಿ ಮತ್ತು ಮೇಕೆ ಸಾಕಾಣಿಕೆಗಳಂತ ಉಪ-ಕಸುಬುಗಳಿಂದ ಹೆಚ್ಚಿನ ಆದಾಯ ಪಡೆಯಬಹುದು. ಒಟ್ಟಾರೆ ಸಾವಯವ ಕೃಷಿ ಇಂದಿನ ಅಗತ್ಯತೆಯಾಗಿದೆ. ಮುಂದಿನ ಪೀಳಿಗೆ ಕೃಷಿಯತ್ತ ವಾಲಬೇಕಾದ ಅನಿವಾರ್ಯತೆ ಒದಗುವುದರಿಂದ ಆರೋಗ್ಯವಂತ ಭೂಮಿಯನ್ನು ಬಳುವಳಿಯಾಗಿ ಕೊಡುವುದೊಂದೆ ನಮನಗಿರುವ ದಾರಿ ಒಂದೆ ಎಂದರು.
ಈ ವೇಳೆ ಅಶೋಕ ಅಲ್ಲಾಪೂರ, ರೈತ ಸಂಘದ ಸಿದ್ರಾಮಪ್ಪ ರಂಜುಣಗಿ ಮಾತನಾಡಿದರು. ನಿಂಗಣ್ಣ ಜೇರಟಗಿ, ಭಾರತೀಯ ರೈತ ಕಿಸಾನ್ ಸಂಘದ ಅಧ್ಯಕ್ಷ ಬಸವರಾಜ ಐರೋಡಗಿ, ವಿಕ್ಟರಿ ಲೈಫ್ ಪ್ರೆöÊವೇಟೆ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಪಾಟೀಲ, ಕಲ್ಲಪ್ಪ ಬಡಿಗೇರ, ಸಂಗಮೇಶ ಡಿಗ್ಗಿ, ಶಂಕರ ಹುಕ್ಕೇರಿ, ವಿಠ್ಠಲಗೌಡ ಪಾಟೀಲ ಸೇರಿದಂತೆ ತಾಲೂಕಿನ ರೈತ ಬಾಂದವರು ಇದ್ದರು.

