ದೇವರಹಿಪ್ಪರಗಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆ | ಕಾಂಗ್ರೆಸ್ ನಿಂದ ಲಿಂಗಾಯತರಿಗೆ ಅವಮಾನ
ದೇವರಹಿಪ್ಪರಗಿ: ಕರ್ನಾಟಕದ ಸಮಗ್ರ ಅಭಿವೃದ್ಧಿ ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಜರುಗಿದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ವಿಜಯಪುರ ಜಿಲ್ಲೆಯ ಜನತೆಯೇ ನಿಮಗೆ ಪೂರ್ಣ ಬಹುಮತದ ಸರ್ಕಾರ ಬೇಕೆ? ಬೇಡವೇ? ಎಂಬ ಪ್ರಶ್ನೇಯಿಂದ ಮಾತು ಆರಂಭಿಸಿದ ಸಚಿವರು ಪಟ್ಟಣದ ಆರಾಧ್ಯ ದೇವರುಗಳಾದ ರಾವುತರಾಯ, ಮಲ್ಲಯ್ಯ, ಕಲ್ಮೇಶ್ವರನನ್ನು ನೆನೆದು ಪ್ರಣಾಮ ಸಲ್ಲಿಸಿದರು. ಜೊತೆಗೆ ಬಸವಣ್ಣ, ಸಿದ್ಧೇಶ್ವರಸ್ವಾಮೀಜಿ ನೆನೆದು ಮುಂದಿನ ಚುನಾವಣೆ ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿದೆ. ಕರ್ನಾಟಕದಲ್ಲಿ ಮೀಸಲಾತಿ ವಿಷಯ ಪ್ರಮುಖವಾಗಿ ಚರ್ಚಿತ ವಿಷಯವಾಗಿದೆ.
ನಮ್ಮ ಬಿಜೆಪಿ ಸರ್ಕಾರ ಮುಸ್ಲೀಂ ಸಮುದಾಯದ ಶೇ೪ ರ ಮೀಸಲಾತಿ ರದ್ದು ಮಾಡಿ ಅದನ್ನು ಲಿಂಗಾಯತ, ಒಕ್ಕಲಿಗ, ತಳವಾರ ಪರಿವಾರ ಸಮುದಾಯಗಳ ಅಭಿವೃದ್ಧಿಗಾಗಿ ಬಳಕೆ ಮಾಡಿದೆ, ಇದು ಉತ್ತಮ ಕಾರ್ಯವಲ್ಲವೇ ಎಂದು ಪ್ರಶ್ನಿಸಿ, ಆದರೆ ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಲ್ಲಿ ಮೊದಲಿನ ಮೀಸಲಾತಿ ಜಾತಿಗೆ ತರುತ್ತಾರೆ ಎಂದು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವುದೇ ಇಲ್ಲ. ನೆನಪಿರಲಿ ಇನ್ನೂ ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾದ ಪಿ.ಎಫ್.ಆಯ್ ಆಟ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷ ಹಿಂದಿನಿAದಲೂ ಲಿಂಗಾಯತ ಸಮುದಾಯದ ನಾಯಕರನ್ನು ಅವಮಾನಿಸುತ್ತಿದೆ. ಇದಕ್ಕೆ ಸಿದ್ಧರಾಮಯ್ಯ ಹೇಳಿಕೆಯೇ ಉದಾಹರಣೆಯಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಬಿಜೆಪಿ ಸರ್ಕಾರ ಕೈಗೊಂಡ ಪ್ರಮುಖ ಯೋಜನೆ ಹಾಗೂ ನಿರ್ಧಾರಗಳ ಕುರಿತು ಅಂಕಿಅAಶಗಳ ಸಹಿತ ಮಾತನಾಡಿ, ಕಾಶ್ಮೀರ ಹಾಗೂ ಭಯೋತ್ಪಾದನೆ ಕುರಿತಾದ ಕಾಂಗ್ರೆಸ್ ನೀತಿ, ರಾಮಮಂದಿರ ನಿರ್ಮಾಣದ ಅಗತ್ಯತೆ ಕುರಿತು ಸಭೆಯ ಗಮನ ಸೆಳೆದರು. ಕೊನೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಿಶ್ಚಿತ ಅದಕ್ಕಾಗಿ ವಿಜಯಪುರ ಜಿಲ್ಲೆಯ ೮ ಜನ ಬಿಜೆಪಿ ಅಭ್ಯರ್ಥಿಗಳಲ್ಲಿ ಕನಿಷ್ಟ ೭ ಜನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಮಾತನಾಡಿ, ನರೇಂದ್ರ ಮೋದಿ ಹಾಗೂ ಅಮೀತ ಶಾ ಈ ದೇಶದ ಸುಭಾಶ್ಚಂದ್ರ ಭೋಸ್ ಹಾಗೂ ಸರ್ದಾರ ವಲ್ಲಭಬಾಯಿ ಪಟೇಲರು ಇದ್ದಂತೆ ಇವರ ಆಡಳಿತದ ಅವಧಿಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಹೇಳುತ್ತಾ, ಬೊಮ್ಮಾಯಿ ಸರ್ಕಾರ ಮೀಸಲಾತಿ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ದಲಿತರಿಗೆ ನ್ಯಾಯ ದೊರಕಿಸಿಕೊಟ್ಟಿದೆ. ತಳವಾರ ಪರಿವಾರ ಸಮಾಜಕ್ಕೆ ಎಸ್.ಟಿ ಮೀಸಲಾತಿ ನೀಡಿ, ಬಿಜೆಪಿ ಸರ್ಕಾರ ಎಲ್ಲ ಸಮುದಾಯದ ಏಳಿಗೆಗೆ ಶ್ರಮಿಸಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಹಾಲುಮತ ಸಮಾಜಕ್ಕೆ ಏನಾದರೂ ಎಸ್.ಟಿ ಮೀಸಲಾತಿ ದೊರಕುವುದಿದ್ದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿ ಬಿಜೆಪಿಗೆ ಹಾಗೂ ಸೋಮನಗೌಡ ಪಾಟೀಲರಿಗೆ ಮತ ನೀಡಲು ಕೋರಿದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸದ ಬಸವನಬಾಗೇವಾಡಿ ಕ್ಷೇತ್ರದ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ, ಉತ್ತರ ಪ್ರದೇಶ ಮಾಜಿಸಚಿವ ಆನಂದ ಸ್ವರೂಪ ಶುಕ್ಲಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ದೇವರಹಿಪ್ಪರಗಿ ಮತಕ್ಷೇತ್ರದ ಉಸ್ತುವಾರಿ ಅನೀಲ ಜಮಾದಾರ, ಶಂಕರಗೌಡ ಕೋಟಿಖಾನಿ(ಹರನಾಳ) ಇದ್ದರು.

ಕಾರ್ಯಕ್ರಮದ ಮಧ್ಯೆದಲ್ಲಿ ಆಗಮಿಸಿದ ಸಿಂದಗಿಯ ಶಾಸಕ ರಮೇಶ ಭೂಸನೂರ ಅವರನ್ನು ಭದ್ರತಾ ಸಿಬ್ಬಂದಿ ಗುರುತಿಸದೇ ಸ್ಟೇಜ್ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಆಗ ರಮೇಶ ಭೂಸನೂರ ಅವರು ಅನಿವಾರ್ಯವಾಗಿ ದೂರದಲ್ಲಿ ಉಳಿದಲ್ಲಿ ಉಳಿಯುವ ಪ್ರಸಂಗ ನಡೆಯಿತು.

