ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳು ಹಾಗೂ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರವರ ಸೂಚನೆ ಮೆರೆಗೆ ಬೆಂಗಳೂರು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಲಿ. ವತಿಯಿಂದ ದಿ.20 ಬುಧವಾರ ಮತ್ತು 21 ಗುರುವಾರ ರಂದು ಬೃಹತ್ ಉದ್ಯೋಗ ಮೇಳ ಬಿ.ಎಲ್.ಡಿ.ಇ ಸಂಸ್ಥೆ ಸಂಗನಬಸವ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ವಿಜಯಪುರ ಜಿಲ್ಲೆಯ 2023 ರಲ್ಲಿ ಡಿಪ್ಲೋಮಾ ಮತ್ತು ಐಟಿಐ ಪಾಸಾದ ಹಾಗೂ 2024ರಲ್ಲಿ ಪ್ರಸ್ತುತ ಐದನೇ ಸೆಮಿಸ್ಟರ್ ನಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ತಮ್ಮ ಹೆಸರನ್ನು ಆನ್ ಲೈನ್ ಮೂಲಕ ನೋಂದಾಯಿಸಲು ದಿ.19 ಮಂಗಳವಾರ ಸಂ.5ಗಂ. ವರೆಗೆ ಇರುತ್ತದೆ ಹಾಗೂ ಮೇಳದ ದಿನದಂದೆ ಸ್ಥಳದಲ್ಲಿಯೇ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದಿ.20 ಬುಧವಾರ ಬೆ.9.30ಗಂ. ನೋಂದಣಿ ಮಾಡಿದ ವಿದ್ಯಾರ್ಥಿಗಳ ವಿಭಾಗವಾರು ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ದಿ.21 ಗುರುವಾರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಬಯೋಡಾಟಾ ಮತ್ತು ಅಂಕಪಟ್ಟಿಗಳ ಪ್ರತಿಗಳು ಕಡ್ಡಾಯವಾಗಿ ತರಬೇಕು ಎಂದು ಮೇಳದ ಆಯೋಜಕ ಪ್ರಾಚಾರ್ಯ ಪಿ.ಬಿ.ಕಳಸಗೊಂಡ ತಿಳಿಸಿದ್ದಾರೆ.
ನೋಂದಣಿ ಲಿಂಕ್: https://forms.gle/EEy3dQD1wxyaJggp8. ಮಾಹಿತಿಗಾಗಿ ಎಸ್.ವಿ.ಕುಲಕರ್ಣಿ 9449246255, ವಿ.ಎಸ್.ಮರಿಮಠ 9916853605 ಸಂಪರ್ಕಿಸಿ.
