ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪಟ್ಟಣದ ಹೆಸ್ಕಾಂ ಕಚೇರಿ ಹತ್ತಿರದ ವಿದ್ಯುತ್ ಗುತ್ತಿಗೆದಾರರ ಕಾರ್ಯಾಲಯದಲ್ಲಿ ಭಾನುವಾರ ನೂತನ ತಾಲ್ಲೂಕು ಸಮಿತಿ ರಚನೆ ಮಾಡಲಾಯಿತು. ಪದಾಧಿಕಾರಿಗಳಾಗಿ ಅಬ್ಬಾಸಲಿ ಮಣ್ಣೂರ(ಕೇಂದ್ರ ಸಲಹಾ ಸಮಿತಿ ಸದಸ್ಯ), ರಾಜಶೇಖರ ಹಳ್ಳದಗೆಣ್ಣೂರ( ಅಧ್ಯಕ್ಷರು), ಸಿದ್ಧನಗೌಡ ಬಿರಾದಾರ, ಅಬ್ದುಲ್‌ಸತ್ತಾರ ಮುಲ್ಲಾ(ಉಪಾಧ್ಯಕ್ಷರು), ಬಂದಗೀಸಾಬ್ ಡೆಂಗಿ (ಕಾರ್ಯದರ್ಶಿ), ಬಸಪ್ಪ ಬೊಮ್ಮನಳ್ಳಿ(ಸಹಕಾರ್ಯದರ್ಶಿ), ಅಬ್ದುಲ್‌ಮಜೀದ್ ಮಳಖೇಡ (ಸಂಘಟನಾ ಕಾರ್ಯದರ್ಶಿ), ಲಕ್ಷಿö್ಮÃ ಸತೀಶಕುಮಾರ ಪಾಟೀಲ(ಖಜಾಂಚಿ) ಆಯ್ಕೆಯಾದರು.

