ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಭಾನುವಾರ ಅಮವಾಸ್ಯೆಯ ನಿಮಿತ್ತ ಇಲ್ಲಿಯ ಸಮೀಪದ ಯಲಗೂರುದ ಯಲಗೂರೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಕೊಂಡರು.
ಅಮವಾಸ್ಯೆಯ ದಿನ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ, ಭಾನುವಾರ ಅಮವಾಸ್ಯೆ ಬಂದರೆ ಭಕ್ತರ ಸಂಖ್ಯೆ ಇನ್ನೂ ಹೆಚ್ಚು.
ಬೆಳಿಗ್ಗೆಯಿಂದಲೇ ಕೃಷ್ಣಾ ತಟದಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದರು. ಚಂದ್ರಗಿರಿ ಚಂದ್ರಮ್ಮಾ ದೇವಿ, ಯಲಗೂರದ ಹನುಮಾನ ದೇವಸ್ಥಾನ ಭಕ್ತರ ಸಂಖ್ಯೆ ಹೆಚ್ಚಿತ್ತು.
ಎಲ್ಲೆಡೆಯೂ ಜಾತ್ರೆಯೇ ನೆರೆದಿತ್ತು. ಕಾಯಿ, ಕರ್ಪೂರ, ಹಾರ ಖರೀದಿಯ ಭರಾಟೆ ಜೋರಾಗಿತ್ತು.
ಯಲಗೂರದಲ್ಲಿ ಬಂದ ಭಕ್ತರಿಗೆ ಅನ್ನ ಸಾಂಬಾರು, ಶಿರಾ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ೧೪ ಕ್ಷಿಂಟಲ್ ಅಕ್ಕಿಯ ಅನ್ನ ಮಾಡಲಾಗಿತ್ತು ಎಂದು ಯಲಗೂರೇಶ್ವರ ಅನ್ನದಾಸೋಹ ಕಮಿಟಿಯ ಅಧ್ಯಕ್ಷ ಶ್ಯಾಮ ಪಾತರದ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಕಾರಣ ಸುತ್ತಲಿನ ಪ್ರದೇಶವನ್ನೆಲ್ಲಾ ಸ್ವಚ್ಛಗೊಳಿಸಲಾಗಿತ್ತು.

