ಮುದ್ದೇಬಿಹಾಳ: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಕಳೆದ 35 ವರ್ಷಗಳಿಂದ ಬಡವರಿಗೆ ದಿನಸಿ ಕಿಟ್ ನೀಡುತ್ತ ಬಂದಿರುವ ಸಮಾಜ ಸೇವಕ ಅಯೂಬ ಮನಿಯಾರ ಈ ವರ್ಷವೂ ಕೂಡ ತಮ್ಮ ನಿವಾಸದ ಎದುರು ೨೫೦ ದಿನಸಿ ಕಿಟ್‌ಗಳನ್ನು ಮತ್ತು ಹಾಲು ಖರೀದಿಸಲೆಂದು ಪ್ರತೀ ಕಿಟ್ ನ ಜೊತೆಗೆ 100 ರೂ.ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ವಿತರಣಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ, ಸಾಕಷ್ಟು ಜನರಲ್ಲಿ ಅಪಾರ ಹಣವಿದ್ದರೂ ದಾನ ಮಾಡುವ ಗುಣ ಇರಲ್ಲ. ಕೆಲವರು ದಾನ ಮಾಡಬೇಕೆಂದರೂ ಸ್ವೀಕರಿಸಲು ಯಾರೂ ಮುಂದೆ ಬರಲ್ಲ. ಇಂಥವರ ಮಧ್ಯೆ ಮನಿಯಾರ ಅವರ ಸೇವೆಯನ್ನು ಸ್ವೀಕರಿಸಲು ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ತಾಯಂದಿರು ಆಗಮಿಸುತ್ತಿರುವುದು ಮನಿಯಾರ್ ಅವರ ನಿಸ್ವಾರ್ಥ ಸೇವೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಲಾಲ್ ಹುಸೇನ ಕಂದಗಲ್,
ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎಂ.ಎಚ್.ಕ್ವಾರಿ ಮಾತನಾಡಿ,
ನ್ಯಾಯವಾದಿ ವಿ.ಎಸ್.ಸಾಲಿಮಠ ಮನಿಯಾರ ಅವರ ಪರೋಪಕಾರ ಕುರಿತು ಶ್ಲಾಘಿಸಿದರು.
ಸಮಾಜ ಸೇವಕ ಅಯೂಬ್ ಮನಿಯಾರ್ ಮಾತನಾಡಿ, ಬಡತನದ ಬೇಗೆಯಿಂದ ಬಳಲಿದ ನಾನು ಹಬ್ಬದ ದಿನಗಳು ಬಂದಾಗ ಮೊದಲು ನೆನಪಾಗುವುದೇ ಬಡವರು. ಅವರಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಹಂಬಲ ನನ್ನದು. ನಾನೊಬ್ಬನೇ ಹಬ್ಬ ಆಚರಿಸಿದರೆ ದೇವರು ಮೆಚ್ಚಲಾರ. ಹಾಗಾಗಿ ಪ್ರತೀ ವರ್ಷ ನನ್ನ ಕುಟುಂಬಕ್ಕೆ ಹಬ್ಬದ ದಿನಸಿ ಖರೀದಿಸುವಾಗಲೇ ನನ್ನವರಿಗೂ ಖರೀದಿಸಿ ಅವರಿಗೆ ತಲುಪಿಸಿದ ನಂತರವೇ ನನಗೆ ಸಮಾಧಾನ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ನನ್ನ ಕುಟುಂಬಕ್ಕೆ ಆಶೀರ್ವದಿಸಿದರೆ ಸಾಕು ಎಂದರು.
ಶಿಕ್ಷಕಿ ಗೀತಾ ಹುರಕಡ್ಲಿ ಮಾತನಾಡಿ, ತಮ್ಮ ಪತಿಯ ಕಿಡ್ನಿ ಆಪರೇಶನ್ ನಲ್ಲಿ ಸಹಾಯ ಮಾಡಿದ ಕ್ಷಣಗಳನ್ನು ನೆನೆದರು.
ಮೌಲಾನಾ ಅಫ್ತಾಬ್ ಮುಫ್ತಿ ದಿವ್ಯ ಸಾನಿಧ್ಯ ವಹಿಸಿದ್ದರು. ಮೌಲಾನಾ ಅಲ್ಲಾಭಕ್ಷ ಖಾಜಿ ಸಾನಿಧ್ಯ ವಹಿಸಿದ್ದರು. ಗಣ್ಯ ವ್ಯಾಪಾರಸ್ಥರಾದ ಬಸವರಾಜ ಮೋಟಗಿ, ನಿವೃತ್ತ ಪ್ರಾಶುಪಾಲ ಎಲ್.ಎಚ್.ಮಮದಾಪೂರ, ಡಾ|| ವಿರೇಶ ಇಟಗಿ, ಅಯೂಬ್ ಮನಿಯಾರ್ ಅವರ ಪತ್ನಿ ಪರ್ವೀನ್ ಮನಿಯಾರ್, ಮಗ ಅಫ್ತಾಬ್ ಮನಿಯಾರ್, ಶಿಕ್ಷಕ ಜೆ.ಡಿ.ಮುಲ್ಲಾ ಸೇರಿದಂತೆ ಇತರರು ಭಾಗಿಯಾಗಿದ್ದರು.
ಮುಜಾಹೀದ್ ನಮಾಜಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Related Posts
Add A Comment