ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪೂಜ್ಯ ನಿರಂಜನ ಸ್ವಾಮಿಜಿಯವರ ಯೋಗ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ಜರುಗಿತು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ಮಂಗಳವಾರ ಸಾಯಂಕಾಲ ಆರಂಭಗೊಂಡ ಸಭೆಯಲ್ಲಿ ಅ.೨೫ ರಿಂದ ನವೆಂಬರ್ ೧೦ ವರೆಗೆ ಜರುಗಲಿರುವ ಹಿಮಾಲಯನ್ ಧ್ಯಾನಯೋಗ ಹಾಗೂ ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಬಗ್ಗೆ ಚರ್ಚೆ ಆರಂಭಗೊಂಡಿತು.
ಸಭೆಯಲ್ಲಿ ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ (ಚಬನೂರ), ಆಲಮೇಲ ಪಟ್ಟಣದ ವೈದ್ಯ ಶ್ರೀಶೈಲ ಪಾಟೀಲ, ಸಿಂದಗಿ ಪಟ್ಟಣದ ಹಿರಿಯ ಧುರೀಣರಾದ ಮಾಂತೇಶ ಪಟ್ಟಣಶೆಟ್ಟಿ, ಅಶೋಕ ಅಲ್ಲಾಪೂರ, ಡಾ.ಮಹಾಂತೇಶ ಹಿರೇಮಠ ಹಾಗೂ ದೇವರಹಿಪ್ಪರಗಿ ತಾಲ್ಲೂಕು ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿದರು.
ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರ ಶ್ರೀಗಳು ಹಾಗೂ ರಾಮಪುರ ಆರೂಢಮಠದ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು.
ಹಿಮಾಲಯದಲ್ಲಿ ೬ ವರ್ಷಗಳ ಕಾಲ ಯೋಗ ಸಾಧನೆ ಮಾಡಿದ ನಿರಂಜನಶ್ರೀಗಳು ದಿ: ೨೫ ರಿಂದ ನವೆಂಬರ್ ೧೦ ವರೆಗೆ ನಿರಂತರವಾಗಿ ಬೆಳಿಗ್ಗೆ ೫.೩೦ ರಿಂದ ೬.೩೦ ರವರೆಗೆ ಧ್ಯಾನಯೋಗ ಸಂಜೆ ೬.೩೦ ರಿಂದ ೭.೩೦ ವರೆಗೆ ಪ್ರವಚನ ನಡೆಸಿಕೊಡಲಿದ್ದಾರೆ.
ಸಭೆಯಲ್ಲಿ ಪರದೇಶಿಮಠ ಹಾಗೂ ಗದ್ದಿಗೆಮಠಶ್ರೀಗಳು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಸಮೃದ್ಧಿ ಸಹಕಾರಿ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಜಲಕತ್ತಿ, ಬಸವರಾಜ ದೇವಣಗಾಂವ, ಕಾಶೀನಾಥ ಜಮಾದಾರ, ಕಾಶೀನಾಥ ಬಜಂತ್ರಿ, ವೈದ್ಯರುಗಳಾದ ಮಂಜುನಾಥ ಮಠ, ಸತೀಶ ನಾಡಗೌಡ, ಸುರೇಶ ಸಜ್ಜನ, ಮೇತ್ರಿ, ವಿಲಾಸ ಬಿರಾದಾರ ಎಸ್.ಎನ್.ಬಿರಾದಾರ, ಆಯ್.ಎಸ್.ಹಿರೇಮಠ, ಕಾಶೀನಾಥ ಯಾಳಗಿ, ಉದ್ಯಮಿಗಳಾದ ಕಾಶೀನಾಥ ಸಾಲಕ್ಕಿ, ಕೆ.ಎಸ್.ಕೋರಿ, ಪ್ರಕಾಶ ಮಲ್ಲಾರಿ, ಕಾಶೀನಾಥ ಕೋರಿ, ಬಸವರಾಜ ತಾಳಿಕೋಟಿ ಸೋಮಶೇಖರ ಹಿರೇಮಠ, ಕಾಶೀನಾಥ ವಡ್ಡೋಡಗಿ, ಶ್ರೀಶೈಲ ಕಬ್ಬಿನ, ರಾಜಕುಮಾರ ಸಿಂದಗೇರಿ, ಶಿವಪದ್ಮ ಕೂಟನೂರ, ಗಂಗಣ್ಣ ಬಬಲೇಶ್ವರ, ಯೋಗಪಟು ಪಂಚಾಕ್ಷರಿ ಮಿಂಚನಾಳ, ಎಂ.ಆರ್. ಮಠ, ಎಸ್.ಎನ್.ಬಸವರೆಡ್ಡಿ, ಮಡ್ಡೆಪ್ಪಗೋಳ, ಪ್ರವೀಣ ಹುಗ್ಗಿ ಸಹಿತ ಪಟ್ಟಣದ ಯುವಕರು ಇದ್ದರು.

