ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಇಂದು ಸಂಜೆ (ಬುಧವಾರ ಅ.೨೩ ರ) ಸಂಜೆ ೫.೩೦ ಗಂಟೆಗೆ “ಮಾತುಕತೆ ವಿತ್ ವಸುಧೇಂದ್ರ” ಸಂವಾದ ಕಾರ್ಯಕ್ರಮ ಜರುಗಲಿದೆ.
“ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಆಯೋಜನೆಯ ಈ ಕಾರ್ಯಕ್ರಮದಲ್ಲಿ “ತೇಜೋ ತಂಗಭ್ರ” ಕಾದಂಬರಿಯ ಖ್ಯಾತಿಯ , ಜನಪ್ರಿಯ ಕಾದಂಬರಿಕಾರ “ವಸುಧೇಂದ್ರ” ಅವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಸುಧೇಂದ್ರ ಅವರು ಹೊಸ ಕಾದಂಬರಿ “ರೇಷ್ಮೆ ಬಟ್ಟೆ” ರಿಯಾಯಿತಿ ದರದಲ್ಲಿ ಕೊಡಲಾಗುವುದು ಮತ್ತು ಓದುಗರು, ಲೇಖಕರ ಹಸ್ತಾಕ್ಷರ ಮತ್ತು ಅವರೊಟ್ಟೆಗೆ ಸೆಲ್ಫಿ ಕೂಡ ಪಡೆಯಬಹದುದೆಂದು “ಅಭಾಸಾಪ ವಿಜಯಪುರ” ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪುಸ್ತಕಗಳಿಗಾಗಿ ಸಂಪರ್ಕಿಸಿ – 9880050818 ವಿವೇಕ ಕುಲಕರ್ಣಿ , 87480 03989 ರಂಜಿತ್ ಸಿಂಗ್ ರಜಪೂತ
