ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಅ.೨೨ ರಂದು ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಜನಾಂದೋಲನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ದಲಿತ ಬಾಂಧವರು ಭಾಗಿಯಾಗಬೇಕು ಎಂದು ವಿವಿದ ದಲಿತಪರ ಸಂಘಟನೆಗಳ ಮುಖಂಡರು ವಿನಂತಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖಂಡರು ದೇಶಕ್ಕೆ ಸ್ವತಂತ್ರö್ಯ ಬಂದು ಸಾಕಷ್ಟು ವರ್ಷಗಳು ಗತಿಸಿದರೂ ಕೋಮುವಾದಿ, ಮನುವಾದಿ ಶಕ್ತಿಗಳ ಕುತಂತ್ರ ಪರಂಪರೆ ಇನ್ನಷ್ಟು ಬಲಗೊಳ್ಳುತ್ತಲೇ ಮುಂದುವರೆಯುತ್ತಿದೆ. ಆಡಳಿತಾರೂಢ ಸರ್ಕಾರಗಳು ಪ್ರಜಾಪ್ರಭುತ್ವದ ಆಸಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಮೂಲಭೂತ ಹಕ್ಕುಗಳೂ ಮರೀಚಿಕೆಯಾಗಿಯೇ ಉಳಿದಿವೆ. ಜನಸಾಮಾನ್ಯರ ಬದುಕು ಅತಂತ್ರ ಸ್ಥಿತಿಯಲ್ಲಿದ್ದು ಸರ್ವಾಧಿಕಾರಿ ಪರಜಾಪ್ರಭುತ್ವದ ಅಡಿಯಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ ಎಲ್ಲ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಜನಾಂದೋಲನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲ ದಲಿತ ಬಾಂಧವರು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು. ಈ ವೇಳೆ ಸಂಘಟನೆಯ ಜಿಲ್ಲಾ ಸಂಯೋಜನ ಮಂಜುನಾಥ ಕಟ್ಟಿಮನಿ ಪ್ರಮುಖರಾದ ಅಕ್ಷಯ ಅಜಮನಿ, ಸಂಗು ಚಲವಾದಿ, ರಾಜು ಮಸಿಬಿನಾಳ, ಸಂಗಮೇಶ ವಿಜಯಕರ, ದುರ್ಗಪ್ಪ ಲೊಟಗೇರಿ, ಮಹೆಬೂಬ ಸಣ್ಣಕ್ಕಿ, ಮಹೆಬೂಬ ಕುಳಗೇರಿ, ಆಸೀಫ ನಿಡಗುಂದಿ ಸೇರಿದಂತೆ ಇನ್ನಿತರರು ಇದ್ದರು.
