ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾರಾಷ್ಟ್ರದ ಜತ್ತ ತಾಲೂಕಿನ ಹುಲುಜಂತಿ ಗ್ರಾಮದಲ್ಲಿ ದಿನಾಂಕ ೨೮-೧೦-೨೦೨೪ರಿಂದ ೦೩-೧೧-೨೦೨೪೭ರವರೆಗೆ ಶ್ರೀ ಮಾಳಿಂಗರಾಯ ದೇವರ ಜಾತ್ರೆ ಜರಗುವ ನಿಮಿತ್ಯ ಕಕರಸಾ ವಿಜಯಪುರ ನಿಗಮದಿಂದ ಹೆಚ್ಚುವರಿ ಬಸ್‌ಗಳ ಕಾರ್ಯಚರಣೆ ಮಾಡಲಾಗುವುದು ಎಂದು ಕಕರಸಾ ನಿಗಮ ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ೧ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೩), ಇಂಡಿ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೫), ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೭), ಬಸವನ ಬಾಗೇವಾಡಿ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೯), ವಿಜಯಪುರ ೨ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೪), ಸಿಂದಗಿ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೬), ತಾಳಿಕೋಟೆ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೮), ಕೇಂದ್ರ ಬಸ್ ನಿಲ್ದಾಣದ ದೂ.೦೮೩೫೨-೨೫೧೩೪೪, ಮೊ.೭೭೬೦೯೯೨೨೫೮ಕ್ಕೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
