ಮುದ್ದೇಬಿಹಾಳ: ಬಡತನ ರೇಖೆಗಿಂತ ಕಡಿಮೆ ಇರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಥಮ ಪಿಯುಸಿ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳಿಗೆ ಟ್ಯಾಲೇಂಟ್ ಅವಾರ್ಡ್ ಸ್ಪರ್ದೆ (ಅರ್ಹತಾ ಪರೀಕ್ಷೆ) ನಡೆಸುವ ಮೂಲಕ ಪ್ರವೇಶಾತಿ ಪಡೆಯಲಾಗುತ್ತಿದ್ದು, ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲನೇ ೧೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿ ಸೌಲಭ್ಯ ಕೂಡ ನೀಡಲು ತೀರ್ಮಾನಿಸಿದ್ದೇವೆ ಎಂದು ಅಭ್ಯೂದಯ ಪಿಯು ಸಾಯಿನ್ಸ್ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಹೇಳಿದರು.
ಪಟ್ಟಣದ ಅಹಿಲ್ಯಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಅಭ್ಯೂದಯ ಪಿಯು ಸಾಯ್ಸ್ ಕಾಲೇಜಿನಲ್ಲಿ ನಡೆದ ಟ್ಯಾಲೆಂಟ್ ಅವಾರ್ಡ್ ಸ್ಪರ್ದೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ ೫ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕೊರೋನಾ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಆ ವೇಳೆ ಸುಮಾರು ಎರಡು ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ ಹೆಮ್ಮೆ ನಮ್ಮ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಗಿದೆ. ಪ್ರತಿವರ್ಷ ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳಿಗೆ ಟ್ಯಾಲೆಂಟ್ ಅವಾರ್ಡ್ ಸ್ಪರ್ದೆ (ಅರ್ಹತಾ ಪರೀಕ್ಷೆ)ಯ ಮೂಲಕ ಪಿಯುಸಿ ಪ್ರಥಮ ವರ್ಷ ಪ್ರವೇಶಾತಿ ಪಡೆದುಕೊಳ್ಳುತ್ತಿದ್ದು ೨೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಲೇ ಬಂದಿದ್ದೇವೆ. ೨೦೨೩-೨೪ನೇ ಸಾಲಿನ ಪಿಯುಸಿ ಪ್ರಥಮ ವರ್ಷದ ಪ್ರವೇಶಾತಿಗಾಗಿ ನಡೆದ ಸ್ಪರ್ದೆಯಲ್ಲಿ ಒಟ್ಟು ೪೪೨ ವಿದ್ಯಾರ್ಥಿಗಳು ಬಾಗವಹಿಸಿದ್ದರು. ಇದರಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೊದಲನೇ ೧೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಶಿಕ್ಷಣ, ಮುಂದಿನ ೧೮ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ೫೦ ರಷ್ಟು ರಿಯಾಯತಿ, ಇನ್ನುಳಿದ ವಿದ್ಯಾರ್ಥಿಗಳು ಪ್ರವೇಶ ಪಡೇದುಕೊಳ್ಳಲು ಇಚ್ಚಿಸಿದಲ್ಲಿ ಪ್ರತಿ ವಿದ್ಯಾರ್ಥಿಗೆ ಶೇ೧೫ ರಷ್ಟು ರಿಯಾಯತಿ ನೀಡಲು ನಿರ್ಧರಿಸಿರುವದಾಗಿ ತಿಳಿಸಿದರು.
ಅತೀ ಕಡುಬಡತನದಿಂದ ಶಿಕ್ಷಣದಿಂದ ವಂಚಿರಾಗುತ್ತಿರುವ ವಿದ್ಯಾರ್ಥಿಗಳು ಮತ್ತು ವಿಕಲಚೇತನ ವಿದ್ಯಾರ್ಥಿಗಳು ಸ್ಪರ್ದೆಯಿಂದ ವಂಚಿತರಾಗಿದ್ದರೂ ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆಯಲು ಇಚ್ಛಿಸಿದಲ್ಲಿ ಅವರಿಗೂ ಕೂಡ ಉಚಿತ ಶಿಕ್ಷಣ ಕೊಡಿಸುವುದಾಗಿ ತಿಳಿಸಿದರು.
ಈ ವೇಳೆ ಪ್ರಾಂಶುಪಾಲರಾದ ಬಿ.ಜಿ.ಬಿರಾದಾರ, ಉಪನ್ಯಾಸಕರಾದ ಶಿವಾನಂದ ಮೇಟಿ, ರವಿ ಜಗಲಿ, ಯಮನಪ್ಪ ಕುರಿ, ಭೀಮಣ್ಣ ಪಣೇದಕಟ್ಟಿ, ಕಿರಣ ಮದರಿ, ಎಚ್.ಎಸ್.ಗೌಡರ, ರಮೇಶ ಹರನಾಳ, ಬಸವರಾಜ ಗೂಡಲಮನಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

