ವಿಜಯಪುರ: ನ್ಯಾಯವಾದಿ, ಸಾಮಾಜಿಕ ಹೋರಾಟಗಾರ ಶ್ರೀನಾಥ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿದೆ ಎಂದು ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಹೆಚ್.ಪಿ. ಸುಧಾಮ್ ದಾಸ್ ಘೋಷಿಸಿದರು.
ನಗರದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಶ್ರೀನಾಥ ಅವರಿಗೆ ಆದೇಶ ಪ್ರತಿ ನೀಡಿ ಅವರು ಮಾತನಾಡಿದರು.
ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅದ್ಯಕ್ಷ ಎಂ.ಬಿ ಪಾಟೀಲ ಅವರ ಮಾರ್ಗದರ್ಶನದಲ್ಲಿ, ಸ್ಥಳೀಯ ನಾಯಕರ ಸಹಯೋಗದೊಂದಿಗೆ ಪಕ್ಷದ ಬಲವರ್ಧನೆ ಮಾಡುವಂತೆ ಈ ಜವಾಬ್ದಾರಿಯನ್ನು ನೀಡಲಾಗುತ್ತಿದೆ ಎಂದರು.
ಕೆ.ಪಿ.ಸಿ.ಸಿ ರಾಜ್ಯ ಉಪಾಧ್ಯಕ್ಷ ಡಿ.ಗೋಪಾಲ ಮಾತನಾಡಿ, ಹಿಂದಿನ ಸರಕಾರದಲ್ಲಿ ಎಸ್.ಸಿ, ಎಸ್.ಟಿ ಹಾಗೂ ಹಿಂದೂಳಿದÀ ವರ್ಗದವರಿಗೆ ಮಿಸಲಾತಿ ಭರವಸೆ ಕೊಟ್ಟು ಅನ್ಯಾಯ ಮಾಡಿರುವುದಲ್ಲದೇ, ಪದೇ ಪದೇ ಸಂವಿಧಾನ ತಿದ್ದುಪಡಿ ಮಾಡಲು ಹೋರಟಿರುವ ಬಿ.ಜೆ.ಪಿ ಪಕ್ಷ ಮುಂದೊAದು ದಿನ ಮತದಾನದ ಹಕ್ಕನ್ನು ಕಸಿದುಕೊಳ್ಳುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಬಿ.ಜೆ.ಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತರಬೇಕಿದೆ ಎಂದರು.
ಈ ವೇಳೆ ಡಿ.ಸಿ.ಸಿ ಜಿಲ್ಲಾಧ್ಯಕ್ಷರಾದ ರಾಜು ಆಲಗೂರ, ಅಲ್ಪಸಂಖ್ಯಾತರ ಘಟಕ ರಾಜ್ಯ ಉಪಾಧ್ಯಕ್ಷ ರಫೀಕ ಟಪಾಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಯುವ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

