ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸದೃಡ ದೇಹ, ಶಾಂತಿ, ಮನಸ್ಸು ನೆಲೆಗೊಳ್ಳಲು ಕ್ರೀಡೆಗಳು ಮಕ್ಕಳಿಗೆ ಅಗತ್ಯವಾಗಿವೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಹೇಳಿದರು.
ತಾಲ್ಲೂಕಿನ ಮಣೂರ ಗ್ರಾಮದ ಕೆಎಸ್‌ಎಲ್‌ಎ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವ್ಹಾಲಿಬಾಲ್ ಪಂದ್ಯಾವಳಿಯ ಅಧ್ಯಕ್ಷತೆ ವಹಿಸಿ, ಚಾಲನೆ ನೀಡಿ ಮಾತನಾಡಿದರು. ಕ್ರೀಡಾಚಟುವಟಿಕೆಗಳಿಂದ ನಮಗೆ ಆರೋಗ್ಯ ಭಾಗ್ಯ ದೊರೆಯಬಲ್ಲದು. ಆದ್ದರಿಂದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳತ್ತಲೂ ಗಮನ ಹರಿಸುವಂತೆ ಸಲಹೆ ನೀಡಿದರು.
ಸಾನಿಧ್ಯ ವಹಿಸಿದ್ದ ದೇವೂರ ಹಿರೇಮಠದ ಮರುಳಾರಾಧ್ಯಶ್ರೀಗಳು ಮಾತನಾಡಿದರು.
ಪಂದ್ಯಾವಳಿಯಲ್ಲಿ ಮಣೂರ ಗ್ರಾಮದ ಕೆಎಸ್‌ಎಲ್‌ಎ ಪ್ರೌಢಶಾಲೆ ಬಾಲಕರು ಹಾಗೂ ಇಂಡಿ ತಾಲ್ಲೂಕಿನ ಲಚ್ಯಾಣದ ಜಿಎಚ್‌ಎಸ್ ಬಾಲಕಿಯರು ಪ್ರಥಮ ಸ್ಥಾನ ಪಡೆದರೆ, ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇಂಡಿ ಎಂಡಿಆರ್‌ಎಸ್ ಬಾಲಕರು ಹಾಗೂ ಆಲಮಟ್ಟಿ ಡ್ಯಾಸೈಟಿನ್ ಶಾರದಾ ಕನ್ನಡ ಪ್ರಾಥಮಿಕ ಶಾಲೆಯ ಬಾಲಕಿಯರು ಪ್ರಥಮ ಸ್ಥಾನ ಪಡೆದು ವಿಜೇತರಾದರು.
ಸಿಂದಗಿ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ, ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಲ್.ಆರ್.ಅಂಗಡಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಾಮದೇವ ಚವ್ಹಾಣ, ಮುಖ್ಯಶಿಕ್ಷಕ ಎಸ್.ಸಿ.ಕಿತ್ತೂರ, ದೈಹಿಕ ಶಿಕ್ಷಕ ಎಸ್.ಡಿ.ಆನೆಗುಂದಿ, ಶಿಕ್ಷಕರಾದ ಪ್ರಕಾಶ ನಾಯಿಕ, ಎಂ.ಜಿ.ಸಜ್ಜನ, ಆರ್.ಯು.ಜಾಧವ, ಡಿ.ಜಿ.ಜಾಡರ ಹಾಗೂ ದೈಹಿಕ ಶಿಕ್ಷಕರು, ಕ್ರೀಡಾಳುಗಳು ಭಾಗವಹಿಸಿದ್ದರು.

