ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಹಾತ್ಮಾಗಾಂಧೀಜಿಯವರಿಗೆ ಸತ್ಯವೇ ದೇವರು. ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವಲ್ಲಿ ಸದಾ ಗಾಂಧೀಜಿಯವರ ಮೌಲ್ಯಗಳನ್ನು ಯುವಕರು ಅಳವಡಿಕೊಳ್ಳಬೇಕು. ಅವರ ಸಂದೇಶಗಳು ಸರ್ವ ಕಾಲಿಕ ಸತ್ಯ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ಮಹಾತ್ಮಾ ಗಾಂಧೀಜಿಯವರ ಮತ್ತು ಲಾಲ ಬಹಾದ್ದೂರ ಶಾಸ್ತ್ರೀಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಲ ಬಹಾದ್ದೂರ ಶಾಸ್ತ್ರೀಜಿಯವರು ದೇಶಕ್ಕಾಗಿ ಊಟ ಬಿಟ್ಟು, ಪ್ರಾಣ ಕೊಟ್ಟ ಮಹಾನ ನಾಯಕ, ಜೈ ಜವಾನ ಜೈ ಕಿಸಾನ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ದಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ ಎಂದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ, ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ ಟಿ.ಎಸ್.ಅಲಗೂರ, ಎಸ್.ಆರ್.ನಡಗಡ್ಡಿ, ಎಸ್.ಆರ್.ರುದ್ರವಾಡಿ, ಎಸ್.ಆರ್.ಮುಜಗೊಂಡ, ಬಸವರಾಜ ರಾಹೂರ, ರಾಹುಲ್ ನಾಯಕ, ಫರೀನಾ ವಣಕ್ಯಾಳ, ತಾ.ಪಂ ವ್ಯವಸ್ಥಾಪಕ ನಾರಾಯಣಪುರ, ಪ್ರಕಾಶ ಕಾಂಬಳೆ, ವೀಣಾ ಕೊಳುರಗಿ, ಸುವರ್ಣಾ ಹಾವಿನಾಳ, ಸೌಮ್ಯ ಚಾಂದಕವಟೆ, ಎಸ್.ಎಸ್.ಪಾಟೀಲ, ಎಂ.ಪಿ.ಕೊಡತೆ ಮತ್ತಿತರಿದ್ದರು.

