ಉದಯರಶ್ಮಿ ದಿನಪತ್ರಿಕೆ
ಬೀಳಗಿ: ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡಿದ್ದೇನೆ. ವೃತ್ತಿಯಲ್ಲಿ ಸಮಯ ಪಾಲನೆ, ಶಿಸ್ತುಬದ್ಧತೆ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅಕ್ಷರ ಕಲಿಸಿದ್ದೇನೆ ಎಂದು ಸಾಹಿತಿ – ಶಿಕ್ಷಕ ಬಾಳನಗೌಡ ಎಸ್ ಪಾಟೀಲ ಹೇಳಿದರು.
ಬೀಳಗಿ ತಾಲೂಕು ಯಡಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ, ವರ್ಗಾವಣೆಗೊಂಡ ಪ್ರಯುಕ್ತ ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ೨೬ ವರ್ಷಗಳ ಕಾಲ ಯಡಹಳ್ಳಿಯಲ್ಲಿ ಕೈಗೊಂಡ ಶಿಕ್ಷಕ ವೃತ್ತಿ ನನಗೆ ತೃಪ್ತಿ ತಂದಿದೆ. ವರ್ಗ ಕೋಣೆಯಲ್ಲಿ ದೇವಾಲಯ ಮತ್ತು ಸಮಾಜ ಕಂಡಿದ್ದೇನೆ. ೨೬ ವರ್ಷದ ಸೇವೆಗೆ ಅವಕಾಶ ನೀಡಿದ ಯಡಹಳ್ಳಿ ನಾಗರಿಕರಿಗೆ, ಸಹೋದ್ಯೋಗಿಗಳಿಗೆ ಮತ್ತು ಅಧಿಕಾರಿಗಳಿಗೆ ಋಣಿಯಾಗಿದ್ದೇನೆ ಎಂದರು.
ಹಿಂದಿನ CRP ಶಿಕ್ಷಕ ಜಗದೀಶ ಮುಚ್ಚಂಡಿ ಮಾತನಾಡಿ, ಬಾಳನಗೌಡ ಪಾಟೀಲ ಶಿಕ್ಷಕರು ಕೇವಲ ಶಿಕ್ಷಣ ಅಷ್ಟೆ ಅಲ್ಲ ಸಾಂಸ್ಕೃತಿಕವಾಗಿಯೂ ವಿದ್ಯಾರ್ಥಿಗಳನ್ನು ಬೆಳೆಸುತ್ತ ಬೋಧನೆ ಮಾಡಿದ್ದಾರೆ ಎಂದು ತಮ್ಮ ಭಾವನಾತ್ಮಕ ಮಾತುಗಳನ್ನಾಡಿದರು.
ಪ್ರಭಾರಿ ಮುಖ್ಯಗುರು ಆನಂದ ಬಿರಾದಾರ, DPEP ಶಾಲೆಯ ಮುಖ್ಯ ಗುರು ಎಚ್ ಜಿ ಜಡಿಮಠ ಮಾತನಾಡಿದರು.
ಶಿಕ್ಷಕರಾದ ಓ ಎಸ್ ಹರದೊಳ್ಳಿ , ಪಿ ಎಲ್ ಪಾಟೀಲ, ಮಂಜುನಾಥ ಅಂಬಿ, ರಂಗಮ್ಮ ಕಂಬಾರ ಮತ್ತು ಪುಷ್ಪಾ ಗಿರೆವ್ವಗೋಳ ಉಪಸ್ತಿತರಿದ್ದರು.

