ಮತದಾರರಲ್ಲಿ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ತಾಲೂಕಾ ಸ್ವೀಪ್ ಸಮಿತಿ ಮತ್ತು ತಾಲೂಕಾ ಆಡಳಿತ ಸಹಯೋಗದಲ್ಲಿ ವಿಶೇಷ ಚೇತನರ ಬೈಕ ರ‍್ಯಾಲಿ ಜರುಗಿತು.
ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ವಿಶೇಷಚೇತನರಿಗೆ ಮತ ಚಲಾವಣೆಗೆ ಅನುಕೂಲ ವಾಗಲು ತಾಲೂಕಿನ ಎಲ್ಲ ಮತಗಟ್ಟೆಗಳಲ್ಲಿ ವ್ಹೀಲ್ ಚೇರ್ ಹಾಗೂ ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.
ರ‍್ಯಾಲಿಯಲ್ಲಿ ಭಾಗವಹಿಸಿದ್ದ ವಿಶೇಷಚೇತನರು ಮತದಾನ ಜಾಗೃತಿಯ ಭಿತಿ ಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.
ರ‍್ಯಾಲಿ ಮಿನಿ ವಿಧಾನಸೌಧದಿಂದ ಬಸವೇಶ್ವರ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಅಂಬೇಡ್ಕರ ವೃತ್ತ ತಲುಪಿ ವೃತ್ತದಲ್ಲಿ ವಿಶೇಷ ಚೇತನರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ತಹಸೀಲ್ದಾರ ನಾಗಯ್ಯ ಹಿರೇಮಠ, ಪುರಸಭೆಯ ಹುಚ್ಚಪ್ಪ ಶಿವಶರಣ, ಸೋಮಾನಾಯಕ, ಚುನಾವಣೆ ರಾಯಭಾರಿ ರಾಜೇಶ ಪವಾರ, ಚಂದು ಕಾಲೇಬಾಗ, ಸುರೇಶ ಅಮರಣ್ಣನವರ, ವಿಶೇಷಚೇತನ ತಾಲೂಕಾ ಅಧ್ಯಕ್ಷ ಸರ್ಪರಾಜ ಮಕಾನದಾರ, ಸಿದ್ದಪ್ಪ ಗುಲೆ, ಶಿವಲಿಂಗಪ್ಪ ನಾಯಿಕೊಡಿ, ಬಾಬು ಸಂಗೊಗಿ, ಕನ್ಹಯಸಿಂಗ ಹಜೇರಿ, ಪಾಂಡು ರಾಠೋಡ, ರಾಜೇಶ ಪವಾರ ಮತ್ತಿತರಿದ್ದರು.
Related Posts
Add A Comment