Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದಸಾಪ ವಿಭಾಗೀಯಸಂಯೋಜಕರಾಗಿ ಕಟ್ಟಿಮನಿ ನೇಮಕ

ದೇವರಹಿಪ್ಪರಗಿಯಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ

ಶ್ರೇಷ್ಠ ಆಧ್ಯಾತ್ಮಿಕ ಸಂತ ಆದಿ ಶಂಕರಾಚಾರ್ಯರು :ಡಾ.ನಾಯಿಕ್

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದೇವಣಗಾಂವ ಸೇತುವೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
(ರಾಜ್ಯ ) ಜಿಲ್ಲೆ

ದೇವಣಗಾಂವ ಸೇತುವೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸೇತುವೆಯ ಮೇಲೆ ಸಿಸಿ ರಸ್ತೆಗೆ ಆಗ್ರಹ | 4 ಗಂಟೆ ರಸ್ತೆ ತಡೆ | ಸಂಚಾರ ಅಸ್ತವ್ಯಸ್ತ

ಉದಯರಶ್ಮಿ ದಿನಪತ್ರಿಕೆ

ಆಲಮೇಲ: 65 ವರ್ಷಗಳ ಹಳೆಯದಾದ ದೇವಣಗಾಂವ ಐತಿಹಾಸಿಕ ಸೇತುವೆ ಕಳೆದ ಹಲವಾರು ವರ್ಷಗಳಿಂದ ಸೇತುವೆಯ ಮೇಲ್ಭಾಗ ಮಾತ್ರ ಕುಸಿಯುತ್ತ ಸಾಗಿದ್ದು ಕೆಳಗಿನ ಭಾಗ ಸಂಪೂರ್ಣ ಇನ್ನೂ ಗಟ್ಟಿಮುಟ್ಟಾಗಿದೆ ಆದ್ದರಿಂದ ಮೇಲ್ಭಾಗದ ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿ ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಸೋಮವಾರ 4 ತಾಸು ರಸ್ತೆ ತಡೆದು ಬೃಹತ್ ಪ್ರತಿಭಟನೆ ಮಾಡಿದರು.
ಸಾಮಾಜಿಕ ಹೋರಾಟಗಾರ ದತ್ತಾತ್ರೇಯ ಸೊನ್ನ ಮಾತನಾಡಿ ಕಳೆದ 15 ವರ್ಷದಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಐತಿಹಾಸಿಕ ಭೀಮಾ ನದಿಗೆ ಅಡ್ಡಲಾಗಿರುವ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ನಾವು ಈ ಪ್ರತಿಭಟನೆ ಮಾಡುವ ಉದ್ದೇಶ ಸೇತುವೆಯ ಮೇಲೆ ಸಿಸಿ ರಸ್ತೆ ಮಾಡಬೇಕು ಹಾಗೂ ತಾಲ್ಲೂಕಾ ಕೇಂದ್ರವಾದ ಆಲಮೇಲ ಪಟ್ಟಣಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ ಈ ರಸ್ತೆಯ ಮೇಲೆ ಸಂಚಾರ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೇತುವೆ ವಿಜಯಪುರ ಮತ್ತು ಕಲ್ಬುರ್ಗಿ ಜಿಲ್ಲೆಗಳ ಸಂಪರ್ಕದ ಕೊಂಡಿಯಾಗಿದೆ. ಪಕ್ಕದ ಕಲಬುರ್ಗಿ ಜಿಲ್ಲೆಯ ಅಫಜಲಪೂರ ಹೋಗಬೇಕಾದರೆ ಸೇತುವೆಯ ಮೇಲೆ ನರಕಯಾತನೆಯಾಗುತ್ತಿದೆ ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸದಿದ್ದರೆ ನಾನು ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಮುಖಂಡ ಸಿದ್ಧಾರ್ಥ ಮೇಲಿನಕೇರಿ ಮಾತನಾಡಿ, ಔರಾದದಿಂದ ಸದಾಶಿವಗಡಕ್ಕೆ ಸಂಪರ್ಕ ಕಲ್ಪಿಸಿವು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆರಿಸಬೇಕು ಮತ್ತು ಭೀಮಾನದಿಗೆ ಅಡ್ಡಲಾಗಿರುವ ದೇವಣಗಾಂವ ಐತಿಹಾಸಿಕ ಸೇತುವೆಯು ಇನ್ನೂ ಗಟ್ಟಿಮುಟ್ಟಾಗಿದೆ ಸೇತುವೆಯ ಮೇಲೆ ಸಿಸಿ ರಸ್ತೆ ಮಾಡಬೇಕು ಈ ಸೇತುವೆಯ ಮಾರ್ಗವಾಗಿ ಕಬ್ಬು ಸಾಗಿಸಲು ನಾವು ಹರಸಾಹಸ ಪಡಬೇಕಾಗಿದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಸಿಂದಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ(ಎಇಇ)ರಾದ ಅರುಣಕುಮಾರ ವಡಗೇರಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದೊಳಗಾಗಿ ಸೇತುವೆಯ ಮೇಲಿನ ರಸ್ತೆ ಹಾಗೂ ದೇವಣಗಾಂವ ಗ್ರಾಮದಿಂದ ಆಲಮೇಲ ಪಟ್ಟಣದವರೆಗೆ ರಸ್ತೆಯನ್ನು ದುರಸ್ತಿ ಮಾಡಲಾಗುವುದು ಎಂದು ಹೇಳಿದ ಪ್ರತಿಭಟನಾಕಾರ ಮನವೊಲಿಸಿ ಪ್ರತಿಭಟನೆಯನ್ನು ಹಿಂಪಡೆಯಲು ಸೂಚಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ ಸದಸ್ಯ ಎಸ್.ಎಸ್. ನಾಗೂರ, ಕೆ.ಕೆ.ಜೋಶಿ,ಎಸ್.ಎಸ್.ಗುಬ್ಬೆವಾಡ, ಪುಂಡಲೀಕ ನಡುವಿನಕೇರಿ, ಮುತ್ತುರಾಜ್ ಕಲಶೆಟ್ಟಿ, ವಿಠ್ಠಲ ಯರಗಲ, ಎಸ್.ಎಸ್.ಸೋಮನಾಯಕ್, ಸಿದ್ದು ಹಿರಾಪುರ, ವಿನೋದ್ ಮಾಸ್ಟರ್, ಹರೀಶ ಎಂಟಮಾನ, ಸಿದ್ದು ಹಂಗರಗಿ, ಕಾಂತಪ್ಪ ಅತಾಪಿ, ಮಲ್ಲಪ್ಪ ಕುಂಬಾರ್, ಪ್ರಭುಲಿಂಗ ಕಡ್ಲೆವಾಡ, ಜಗು ಯಂಕಂಚಿ, ವಿಠೋಬಾ ಬೊಮ್ಮನಹಳ್ಳಿ, ಸಿದ್ದು ಗಂಗನಹಳ್ಳಿ, ಬಲರಾಮ್ ಸಿಂಗ್ ರಜಪೂತ, ಶಿವಪುತ್ರ ಬಗಲಿ, ಸಂಗನಬಸವ ಸುತಾರ, ಶಂಕರ್ ನಡುವಿನಕೇರಿ ಸೇರಿದಂತೆ ಗಾ.ಪಂ ಸದಸ್ಯ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.

ಪೋಲೀಸ್ ಬಂದೋಬಸ್ತ್
ನಾಲ್ಕು ತಾಸು ರಸ್ತೆ ತಡೆ ಮಾಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಆರಕ್ಷಕರು ಆಲಮೇಲ ಪಿಎಸ್ಐ ಅರವಿಂದ ಅಂಗಡಿ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಿ, ಸುಗಮ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದಸಾಪ ವಿಭಾಗೀಯಸಂಯೋಜಕರಾಗಿ ಕಟ್ಟಿಮನಿ ನೇಮಕ

ದೇವರಹಿಪ್ಪರಗಿಯಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ

ಶ್ರೇಷ್ಠ ಆಧ್ಯಾತ್ಮಿಕ ಸಂತ ಆದಿ ಶಂಕರಾಚಾರ್ಯರು :ಡಾ.ನಾಯಿಕ್

ಸಕಲ ಜೀವಿಗಳಿಗೂ ಲೇಸನ್ನೆ ಬಯಸಿದ ಬಸವಣ್ಣನವರು :ಗುಮಶೆಟ್ಟಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದಸಾಪ ವಿಭಾಗೀಯಸಂಯೋಜಕರಾಗಿ ಕಟ್ಟಿಮನಿ ನೇಮಕ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ
    In (ರಾಜ್ಯ ) ಜಿಲ್ಲೆ
  • ಶ್ರೇಷ್ಠ ಆಧ್ಯಾತ್ಮಿಕ ಸಂತ ಆದಿ ಶಂಕರಾಚಾರ್ಯರು :ಡಾ.ನಾಯಿಕ್
    In (ರಾಜ್ಯ ) ಜಿಲ್ಲೆ
  • ಸಕಲ ಜೀವಿಗಳಿಗೂ ಲೇಸನ್ನೆ ಬಯಸಿದ ಬಸವಣ್ಣನವರು :ಗುಮಶೆಟ್ಟಿ
    In (ರಾಜ್ಯ ) ಜಿಲ್ಲೆ
  • ಧರ್ಮದ ಕಾರ್ಯಕ್ರಮ ಪ್ರತಿ ಮನುಷ್ಯನ ದಾರಿದೀಪ :ಶಂಕರಾನಂದ ಶ್ರೀ
    In (ರಾಜ್ಯ ) ಜಿಲ್ಲೆ
  • ಸೃಜನಶೀಲ ಪ್ರತಿಭೆ ಸಾಹಿತಿ ಸುಧಾ ಪಾಟೀಲ
    In ವಿಶೇಷ ಲೇಖನ
  • ’ವಚನ ಗಾನ ಕೋಗಿಲೆ’ ನೈನಾ ಗಿರಿಗೌಡರ ಮುಡಿಗೆ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 21, 2026
    In ದಿನಪತ್ರಿಕೆ
  • ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ
    In (ರಾಜ್ಯ ) ಜಿಲ್ಲೆ
  • ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.