ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನೂರಾರು ವಿಕಲಚೇತನರಿಗೆ ಸಂಗೀತ, ಪುರಾಣ-ಪ್ರವಚನ ಕಲೆಗಳನ್ನು ಕಲಿಸಿ ಸ್ವತಂತ್ರವಾಗಿ ಬದುಕು ಸಾಗಿಸಲು ಆತ್ಮವಿಶ್ವಾಸ ತುಂಬಿದ್ದ ಗಾನಯೋಗಿ ಪುಟ್ಟರಾಜ ಗವಾಯಿಗಳ ಶರೀರ ಮಾತ್ರ ನಮ್ಮನ್ನ ಅಗಲಿದೆ. ಆದರೆ ಅವರ ಆದರ್ಶ ತತ್ವಗಳು ಸದಾ ಜೀವಂತವಾಗಿವೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಪಟ್ಟಣದ ಪುರಸಭೆ ಎದುರಿಗೆ ಪುಟ್ಟರಾಜ ಗವಾಯಿಗಳ ಕನ್ನಡ ಸಾಂಸ್ಕೃತಿಕ ಕಲಾ ಬಳಗ, ವಿಕಲಚೇತನರ ಕಲಾಬಳಗ, ಡಾ.ಪುನೀತ್ ರಾಜಕುಮಾರ ಮೆಲೋಡೀಸ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ ಪುಟ್ಟರಾಜ ಗವಾಯಿಗಳ ೧೪ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತರ ಸಂತಸದಲ್ಲಿ ತೃಪ್ತಿ ಕಾಣುತ್ತಿದ್ದ ಗವಾಯಿಗಳು ಸಂಗೀತ, ಸಾಹಿತ್ಯ, ಆಧ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದದ್ದು. ಕಲಾವಿದರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವಂತಾಗಬೇಕು ಎಂದರು.
ಸಾನಿಧ್ಯ ವಹಿಸಿದ್ದ ಶರಣ ಸೋಮನಾಳದ ಮಹಾದೇವ ಶಾಸ್ತ್ರಿಗಳು ಆಶೀರ್ವಚನ ನೀಡಿದರು.
ಸಮಾಜ ಸೇವಕ ಸಿಬಿ ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಂಗ್ರೇಸ್ ಮುಖಂಡ ಅಶೋಕ ನಾಡಗೌಡ, ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ ನಡಹಳ್ಳಿ, ಕಲಾ ಬಳಗದ ಅಧ್ಯಕ್ಷ ವಿ.ಆಯ್.ಹಿರೇಮಠ, ಗೌರವಾಧ್ಯಕ್ಷ ಚಂದ್ರು ಅಂಬಲಿ, ವಿರೇಶಗೌಡ ಹಿರೇಗೌಡರ, ಮಂಜುನಾಥ ಪಾಟೀಲ, ನಾಗೇಶ ಅಮರಾವತಿ, ಸಿ.ಬಿ.ಮಂಕಣಿ, ಶಿವಾನಂದ ಚಿನಿವಾರ, ಅಡಿವೆಪ್ಪ ಕೊಡಗಾನೂರ, ಬಸವರಾಜ ಹಂದ್ರಾಳ, ವಿನಾಯಕ ಗುರಿಕಾರ, ಗೀತಾ ಗೋಂಧಳೆ, ಎಂ.ಆಯ್.ಖಾಜಿ, ಅಕ್ಬರ್ ಗುರಿಕಾರ, ಶಾಂತು ಪಾಟೀಲ, ಶರಣು ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.

