ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಚಾಲಿತ ಬೈಕ್ ನ ಹಿಂಬದಿ ಓಡಿ ಬಂದು ಬೈಕ್ ಬ್ಯಾಗ್‌ನಲ್ಲಿದ್ದ ರೂ.೨ ಲಕ್ಷ ರೂಪಾಯಿಗಳನ್ನು ಎಗರಿಸಿದ ಘಟನೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ಬಳಿ ಶುಕ್ರವಾರ ಮದ್ಯಾಹ್ನ ನಡೆದಿದೆ.
ಪಟ್ಟಣದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯೊಬ್ಬರು ಮಧ್ಯಾಹ್ನ ೧೨ರ ಸುಮಾರು ಕೆನರಾ ಬ್ಯಾಂಕ್ ನಲ್ಲಿ ೨ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ತಮ್ಮ ಸಿಟಿ ೧೦೦ ಬೈಕ್ ನ ಹಿಂಬದಿಯ ಬಟ್ಟೆಯ ಬ್ಯಾಗ್‌ನಲ್ಲಿಟ್ಟು ಹೋಗುವಾಗ ಬ್ಯಾಂಕ್ ಎದುರಿಗೆ ಕಾಯುತ್ತಿದ್ದ ಖದೀಮನೊಬ್ಬ ಬ್ಯಾಗ್‌ನಲ್ಲಿರುವ ಹಣ ಎಗರಿಸಿ ಪರಾರಿಯಾಗಿದ್ದಾನೆ. ಬ್ಯಾಂಕಿನ ಸಿಸಿಟಿವಿಯಲ್ಲಿ ಖದೀಮ ಹಣ ಕಬಳಿಸಿದ ವಿಡಿಯೋ ಸೆರೆಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳನ ಕೈಗೆ ಕೋಳ ತೊಡಿಸಲು ಪೊಲೀಸರು ಬಲೆ ಬೀಸಿದ್ದಾರೆ.
