ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ನಾದ ಕೆಡಿ ಗ್ರಾಮದ ಕಾಶಿಬಾಯಿ ತೆನೆಹಳ್ಳಿ ಪ್ರಥಮ ಹೆರಿಗೆ ನೋವಿನಿಂದ ಮಧ್ಯಾನ್ಹ ನರಳುತ್ತಿದ್ದರು.
ಕಾಶಿಬಾಯಿ ಗಂಡ ಪರಶುರಾಮ ಆಶಾ ಕಾರ್ಯಕರ್ತೆ ಜ್ಯೋತಿ ಇಂಡಿ ಮತ್ತು ಎಸ್.ಎ. ಶೇಖ ಇವರನ್ನು ಸಂಪರ್ಕಿಸಿದರು.
ಆಗ ಆಶಾ ಕಾರ್ಯಕರ್ತೆಯರು ಕ್ಷೇತ್ರ ಆರೋಗ್ಯ ಮೇಲ್ವಿಚಾರಕ ವೈ.ಎಂ.ಪೂಜಾರಿ ಇವರನ್ನು ಸಂಪರ್ಕಿಸಿದರು.
ಆಗ ವೈ.ಎಂ.ಪೂಜಾರಿಯವರು ಖಾಸಗಿ ವಾಹನದಲ್ಲಿ ಹೆರಿಗೆ ವೇಳೆ ಬೇಕಾಗುವ ಸಲಕರಣೆ ಗಳೊಂದಿಗೆ ಬರಲು ಜ್ಯೋತಿ ಇಂಡಿ, ಶೇಖ ಆಶಾ ಕಾರ್ಯಕರ್ತರಿಗೆ ಬರಲು ತಿಳಿಸಿದರು.
ಇಂಡಿ ಬರುವ ಮಧ್ಯೆ ಸಾಲೋಟಗಿ ಗ್ರಾಮದ ತೋಟದ ಹತ್ತಿರ ನೋವು ಹೆಚ್ಚಾದಾಗ ತೋಟದ ಮಾಲಿಕರ ಪರವಾನಿಕೆ ಪಡೆದು ಅಲ್ಲಿಯೇ ವಾಹನ ನಿಲ್ಲಿಸಿ ಅವರಿಂದ ಆಸರೆಗೆಂದು ಸೀರೆ ಪಡೆದು ಕಾರಿನಲ್ಲಿಯೇ ಹೆರಿಗೆ ಮಾಡಿದ ಘಟನೆ ನಡೆದಿದೆ.
ಹೆರಿಗೆ ನಂತರ ತಾಯಿ ಮತ್ತು ಮಗುವನ್ನು ಇಂಡಿಯ ಸರಕಾರಿ ಆಸ್ಪತ್ರೆಗೆ ತಂದಿದ್ದಾರೆ.
ಅಲ್ಲಿ ಚಿಕ್ಕ ಮಕ್ಕಳ ತಜ್ಞ ಡಾ.ವಿಪುಲ್ ಕೋಳೆಕರ, ಡಾ.ಪ್ರಶಾಂತ ಧೂಮಗೊಂಡ, ಶುಶ್ರಿಕೆ ವಿಜಯಲಕ್ಷ್ಮಿ ಹಾದಿಮನಿ ಮತ್ತು ವೈ.ಎಂ.ಪೂಜಾರಿ ತಪಾಸಣೆ ಮಾಡಿ ಮಗು ೧ ಕೆ.ಜಿ ೫೦೦ ಗ್ರಾಂ ಇದ್ದದ್ದು ಕಂಡು ಬಂದ ಹಿನ್ನೆಲೆ ಮಗುವಿಗೆ ಸುರಕ್ಷತೆಗಾಗಿ ನಿಗಾವಣೆ ಇಟ್ಟಿದ್ದು ಮಗು ಮತ್ತು ತಾಯಿ ಆರಾಮವಾಗಿದ್ದು ಅಪಾಯವಿಲ್ಲ ಎಂದು ಡಾ.ವಿಪುಲ್ ಕೋಳೆಕರ ತಿಳಿಸಿದ್ದಾರೆ.
