ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವರ್ಷದ ಅತ್ಯತ್ತಮ ಕಂದಾಯ ಅಧಿಕಾರಿ 2024 ರ ಪ್ರಶಸ್ತಿಗೆ ವಲಯ ಪ್ರಭಾರಿ ಕಂದಾಯ ನಿರೀಕ್ಷಕ ರಾಜಾಸಾಬ್ ಕಂದಗಲ್ ಆಯ್ಕೆಯಾಗಿದ್ದಾರೆ.
ರಾಜ್ಯಾದಾದ್ಯಂತ ಪ್ರಶಸ್ತಿ ಪುರಸ್ಕೃತ 36 ಗ್ರಾಮ ಆಡಳಿತ ಅಧಿಕಾರಿಗಳಲ್ಲಿ ರಾಜೇಸಾಬ್ ಒಬ್ಬರು. ಸೆಪ್ಟೆಂಬರ್ 27 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆಯಲ್ಲಿರುವ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶಸ್ತಿಯನ್ನು ನೀಡುವುದಾಗಿ ತಿಳಿದುಬಂದಿದೆ.

