ಸಿಂದಗಿ: ಶಿಕ್ಷಕರು ಕೇವಲ ವರ್ಗ ಕೋಣೆಗೆ ಸೀಮಿತವಾಗಿರದೆ ಜಗತ್ತಿನ ಎಲ್ಲ ಜ್ಞಾನವನ್ನು ಅರಿತುಕೊಂಡು ಕ್ರಿಯಾಶೀಲತೆಯನ್ನು ಮೆರೆಯಬೇಕು ಎಂದು ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಜೆ.ಎಚ್ ಪಟೇಲ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಸಿಂದಗಿ ಸಾಧಕರ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರ ಪ್ರಾರಂಭದ ಬದುಕು ಅತ್ಯಂತ ಕಷ್ಟಕರವಾಗಿರುತ್ತದೆ. ಅವರು ಮಾಡಿದ ಕಾರ್ಯಗಳು, ಅನುಭವಗಳು, ಸಾಧನೆಗಳು ಇಂದಿನ ಶಿಕ್ಷಕರಿಗೆ ಅವಶ್ಯಕವಾಗಿ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಮಾತನಾಡಿ, ಶಿಕ್ಷಕರಲ್ಲಿ ಕ್ರಿಯಾಶೀಲತೆ ಸೃಜನಶೀಲತೆಗಳಂತ ಮೌಲ್ಯಗಳು ಇದ್ದಲ್ಲಿ ಮಕ್ಕಳ ಪ್ರತಿಭೆ ಹೊರಹೊಮ್ಮುತ್ತದೆ. ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಬೋಧಿಸಿದ್ದಲ್ಲಿ ಬೋಧನೆ ಪರಿಣಾಮಕಾರಿಯಾಗುತ್ತದೆ. ಈ ಕ್ಷೇತ್ರದ ಅರಿವನ್ನು ಎಲ್ಲ ಪ್ರಶಿಕ್ಷಣಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಶಿಕ್ಷಕ ಸಿದ್ದಲಿಂಗ ಚೌಧರಿ ಮಾತನಾಡಿ, ಸಿಂದಗಿ ಜ್ಞಾನದ ಬಿಂದಿಗೆಯನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ದೊಡ್ಡ ಚಾಪನ್ನು ಮೂಡಿಸಿರುವ ಸಿಂದಗಿ ಅನೇಕ ಸಾಧಕರನ್ನ ಒಳಗೊಂಡಿದೆ. ಇಲ್ಲಿನ ಬಹುದೊಡ್ಡ ಸಾಧಕರನ್ನ ನೆನೆಯುವುದು, ಅವರು ಮಾಡಿದ ಕಾರ್ಯವನ್ನು ಸ್ಮರಿಸುವುದು ಇಂದು ಪ್ರಸ್ತುತವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಬಿ. ಎಂ. ಹುರಕಡ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆ ಮೇಲೆ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚನ್ನಪ್ಪ ಕತ್ತಿ ಇದ್ದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಂದಗಿ ಸಾಧಕರಾದ ಲಿಂ.ಚನ್ನವೀರ ಮಹಾಸ್ವಾಮಿಗಳು, ಲಿಂ.ಶಾಂತವೀರ ಪಟ್ಟಾಧ್ಯಕ್ಷರು, ಲಿಂ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಮಾಜಿ ಸಚಿವ ಎಂ. ಸಿ. ಮನಗೂಳಿ, ರೇ.ಚ. ರೇವಡಿಗಾರ, ಡಾ. ಎಂ.ಎA ಕಲಬುರ್ಗಿ, ಹಂದಿಗನೂರು ಸಿದ್ದರಾಮಪ್ಪ, ಆಯ್.ಬಿ. ಅಂಗಡಿ ವಕೀಲರು, ಸ್ವಾಮಿ ರಮಾನಂದ ತೀರ್ಥರು, ಕಡಣಿ ಕಲ್ಲಪ್ಪ, ರಂಗ ಪರಿಕರ ಗಂಗಾಧರ ಉಪ್ಪಿನ್, ಮಕ್ಕಳ ಸಾಹಿತಿ ಹ.ಮ. ಪೂಜಾರ ಹೀಗೆ ಒಟ್ಟು ೧೨ ಸಾಧಕರ ವಿಚಾರಗಳನ್ನು ಪ್ರತಿದಿನ ಒಬ್ಬರAತೆ ಸಾಧಕರ ಪರಿಚಯ ಮಾಡಲಾಗುತ್ತದೆ ಎಂದರು.
ಈ ವೇಳೆ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment