ಬ್ರಹ್ಮದೇವನಮಡು: ಭಾರತೀಯ ಸಾಂಸ್ಕ್ರತಿಕ ಪರಂಪರೆಯಲ್ಲಿ ಮಹಿಳೆ ಮಹತ್ವದ ಸ್ಥಾನ ಹೊಂದುವ ಮೂಲಕ ಧಾಮಿ೯ಕವಾಗಿಯೂ ಆದಶ೯ವಾಗಿದ್ದಾಳೆ ಎಂದು ಪ್ರವಚನಕಾರ ಸಿದ್ದರಾಮ ಸ್ವಾಮೀಜಿ ಹೇಳಿದರು.
ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಶ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ದೇವಿ ಹಾಗೂ 401 ಮುತ್ತೈದಿಯರಿಗೆ ಉಡಿ ತುಂಬುವ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಪರಂಪರೆಯಲ್ಲಿ ಮಹಿಳೆಯರ ಸಾಮಥ್ಶ೯ ಇತಿಹಾಸದ ತುಂಬೆಲ್ಲ ಕಾಣಸಿಗುತ್ತದೆ. ಅಂತಹ ಮಹಿಳೆಯರು ನೀವಾಗಬೇಕು ಎಂದರು.
ಶ್ರೀಮಠದ ಕಲ್ಶಾಣದಯ್ಶಾ ಸ್ವಾಮೀಜಿ ಆಶೀವ೯ಚನ ನೀಡಿ, ನಾರಿಯ ಗೌರವದಲ್ಲಿಯೇ ಭಗವಂತನ ಕರುಣೆಯ ಕೃಫೆ ಅಡಗಿದೆ. ಮಹಿಳೆಯಲ್ಲಿನ ಸಂಸ್ಕಾರ ಒಂದು ಪೀಳಿಗೆಯ ಪರಂಪರೆ ಉದ್ದರಿಸಲು ಸಹಕಾರಿ.ಜಾಗೃತ ಮಹಿಳೆ ಸಮಾಜದ ಮೊದಲ ಮೆಟ್ಟಿಲಾಗಬಲ್ಲಳು ಎಂದು ಹೇಳಿದರು. ನಾಲ್ಕುನೂರಕ್ಕೂ ಹೆಚ್ಚು ಮುತೈದೆಯರಿಗೆ ಬಳೆ,ಕುಪ್ಪಸ ಸೇರಿ ಐದು ಬಗೆಯ ವಸ್ತುಗಳಿಂದ ಉಡಿ ತುಂಬಿ ಪ್ರಸಾದ ವಿತರಿಸಲಾಯಿತು.
ಶ್ರೀಮಠದ ರಾಜೇಶ್ವರಿ ವೀರಘಂಟಯ್ಶ ಗದ್ದಗಿಮಠ, ಚನ್ನಮಲ್ಲಯ್ಶ ಹಿರೇಮಠ, ಸಿಂದಗಿ ಕಾಂಗ್ರೆಸ್ ಅಭ್ಶಥಿ೯ ಅಶೋಕ ಮನಗೂಳಿ ಪತ್ನಿ ನಾಗರತ್ನ ಮನಗೂಳಿ, ಅರವಿಂದ ಸಾಹು ಕುರಳಗೇರಾ, ಅಪ್ಪಯ್ಶ ಹಿರೇಮಠ ಅಲ್ಲಾಪೂರ, ಪವನ ಕುಲಕಣಿ೯ ಚಾಮನಾಳ ಸೇರಿದಂತೆ ಹಲವರಿದ್ದರು.
ಈ ವೇಳೆ ಪತ್ರಕತ೯ ಮಲ್ಲಿಕಾಜು೯ನ ಕೆಂಭಾವಿ ಅವರನ್ನು ಶ್ರೀಮಠದ ಒಡೆಯ ಕಲ್ಶಾಣದಯ್ಶಾ ಸ್ವಾಮೀಜಿ ಸನ್ಮಾನಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment