ಆಲಮಟ್ಟಿ: ದೇವರಹಿಪ್ಪರಗಿ ಮತಕ್ಷೇತ್ರದಿಂದ ವಿಧಾನಸಭೆಗೆ ಕೆಜಿಪಿ ಪಕ್ಷದಿಂದ ಸ್ಪರ್ಧಿಸುವುದಾಗಿ ನಿಡಗುಂದಿ ತಾಲ್ಲೂಕಿನ ಇಟಗಿ ಗ್ರಾಮದ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ ಸ್ಪರ್ಧಿಸುವುದಾಗಿ ಸೋಮವಾರ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಉದ್ದೇಶದಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಬಡ, ದಲಿತ, ಹಿಂದುಳಿದವರ ಏಳಿಗೆಯ ಜತೆ, ರೈತರ ಏಳಿಗೆಗೆ ಇಡೀ ಮತಕ್ಷೇತ್ರವನ್ನು ಸಮಗ್ರ ನೀರಾವರಿ ಮಾಡುವುದಾಗಿಯೂ ಅವರು ಘೋಷಿಸಿದರು. ನನ್ನ ಕನಸು ಎಂದರು. ಸಾಮಾಜಿಕ ಸೇವೆ ಸಲ್ಲಿಸುವ ಉದ್ದೇಶದಿಂದ, ಅಂವಿಕಲರ ಏಳಿಗೆಯ ಜತೆಗೆ ನೌಕರರ ಹಿತವನ್ನು ಕಾಪಾಡುವುದಾಗಿ ತಿಳಿಸಿದರು. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ಗೊಳಿಸಿ ನೌಕರರ ಬಾಳನ್ನು ಹಸನಾಗಿ ಮಾಡಲು ಪ್ರಯತ್ನಿಸುವೆ ಎಂದರು.
ಯಾರೂ ಹಣ, ಹೆಂಡ, ತುಂಡಿನ ಆಸೆಗಾಗಿ ತಮ್ಮ ಮತವನ್ನು ಮಾರಿಕೊಳ್ಳದೇ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರಿಗೆ ಮತ ನೀಡಿ ಎಂದರು.
ರಾಜಕೀಯ ಕ್ಷೇತ್ರ ಉಳ್ಳವರ ಪಾಲಾಗದೇ ಅದು ಎಲ್ಲರ ಪಾಲಾಗಬೇಕು ಎಂದರು. ಜೋಳಿಗೆ ಹಾಕಿಕೊಂಡೇ ಪ್ರತಿಯೊಂದು ಗ್ರಾಮದ ಪ್ರತಿ ಮನೆಗೂ ಮತ ಭಿಕ್ಷೆ ಬೇಡುವೆ ಎಂದರು.
ಬಿಜೆಪಿ, ಕಾಂಗ್ರೆಸ್ ಟಿಕೆಟ್ ಗಾಗಿಯೂ ಪ್ರಯತ್ನಿಸಿದ್ದೆ. ಆ ಪಕ್ಷದ ಮುಖಂಡರು ಚುನಾವಣೆಗಾಗಿ ಕೋಟ್ಯಂತರ ರೂ ಖರ್ಚು ಮಾಡಲು ಸಿದ್ಧವಿದ್ದರೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಅಷ್ಟು ಖರ್ಚು ಮಾಡುವಷ್ಟು ನನ್ನ ಜೋಳಿಗೆ ಗಟ್ಟಿಯಾಗಿಲ್ಲ ಎಂದು ಮಾರ್ಮಿಕವಾಗಿ ಸ್ವಾಮೀಜಿ ಹೇಳಿದರು. ಹೀಗಾಗಿ ಕೆಜಿಪಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದರು. ಯಾವುದೇ ಆಮೀಷಕ್ಕೆ ಒಳಗಾಗದೇ ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಿದ್ಧನಗೌಡ ಬಿರಾದಾರ, ಚನ್ನಯ್ಯ ಮಠ ಇದ್ದರು.
Related Posts
Add A Comment