ಆಲಮೇಲ: ಕನ್ನಡ ಸಾರಸ್ವತ ಲೋಕಕ್ಕೆ ಎಂಟು ಜ್ಞಾನಪೀಠಗಳು ದೊರೆತಿವೆ, ಜಗತ್ತಿನ ಬಹುದೊಡ್ಡ ಸಾಹಿತ್ಯಧಾರೆಗಳಲ್ಲಿ ಒಂದಾದ ವಚನ ಸಾಹಿತ್ಯ ವಿಜಯಪುರ ನೆಲದಿಂದಲೇ ಜನ್ಮತಳೆದಿದೆ. ಈ ನೆಲ ಕಲೆ, ಸಾಹಿತ್ಯ ಸಂಸ್ಕೃತಿಯ ಶ್ರೀಮಂತಿಕೆಯಿAದ ಕೂಡಿದೆ ಎಂದು ಪ್ರಾಚಾರ್ಯ ಡಾ. ಎಸ್.ಎಸ್.ತಾವರಖೇಡ ಬಣ್ಣಿಸಿದರು.
ಅವರು ಆಲಮೇಲ ಪಟ್ಟಣದ ಎಚ್.ಎ.ನಂದಿ ಪದವಿ ಮಹಾವಿದ್ಯಾಲಯದಲ್ಲಿ ಕಡಣಿಯ ಬೆರಗು ಪ್ರಕಾಶನ ಹಮ್ಮಿಕೊಂಡ ಸಿದ್ಧರಾಮ ಉಪ್ಪಿನ ಸಾಹಿತ್ಯ ಉಪನ್ಯಾಸ ಮಾಲಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿದ್ಧರಾಮ ಉಪ್ಪಿನ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಅಪಾರ, ಅವರ ಕೊಡುಗೆಯನ್ನು ಗುರುತಿಸಿ ಮಹಾಪ್ರಬಂಧ ಮಂಡಿಸಿರುವ ಪ್ರೊ.ಮಿರಾಜಾಪಾಶಾ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪ್ರಾಧ್ಯಾಪಕ ಎಸ್. ಎಂ. ಉಪ್ಪಾರ ಮಾತನಾಡಿ ‘ಮಿರಾಜಪಾಶನಂತಹ ಯುವ ಸಂಶೋಧಕರು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರ ಕುರಿತಾದ ಸಂಶೋಧನೆ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಿದ್ದಾರೆ, ಇಂತಹ ಕಾರ್ಯಗಳು ಹೆಚ್ಚಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಸೈಯದ್ ದೇವರಮನಿ, ಬೆರಗು ಪ್ರಕಾಶನ ಸಂಸ್ಥೆಯ ಸಂಚಾಲಕ ಡಾ. ರಮೇಶ ಕತ್ತಿ “ಯುವ ಸಂಶೋಧಕ ಪ್ರೊ. ಮಿರಾಜಪಾಶಾ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಮಿರಾಜಪಾಶಾ ಹಸನಲ್ಲಿ ಯುವ ಸಂಶೋಧಕರ ಮೇಲೆ ಸಾಕಷ್ಟು ಗುರುತರ ಜವಾಬ್ದಾರಿಗಳಿವೆ, ಸೃಜಶೀಲವಾದ ಬರವಣಿಗೆಗೆ ಹುಡುಕಾಟದ ತುರ್ತು ಉತ್ತಮ ಲೇಖಕನಲ್ಲಿರಬೇಕಾದ ಬಹುಮುಖ್ಯ ಗುಣ ಎಂದರು.
ಉಪನ್ಯಾಸಕ ಅಮರ ನಾರಾಯಣಕರ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment