ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಒಂದೇ ಬೆಂಚ್‌ನಲ್ಲಿ ಮೂರು ವಿದ್ಯಾರ್ಥಿಗಳನ್ನ ಕೂರಿಸಿ ಪರೀಕ್ಷೆ ನಡೆಸಿ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ತರಲಾಗಿತ್ತು. ಈ ಬಗ್ಗೆ ’ಉದಯರಶ್ಮಿ’ ಪತ್ರಿಕೆಯು “ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ” ಎಂಬ ತಲೆಬರಹದಡಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನಸೆಳೆದಿದೆ.
ಜೂ.30 ರವಿವಾರ ಇರೋದರಿಂದ
ಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯದಿದ್ದರೂ ಸಾರ್ವಜನಿಕರಿಂದ ಈ ಶಾಲೆಯ ಬಗ್ಗೆ ಇನ್ನಷ್ಟು ದೂರುಗಳು ಕೇಳಿ ಬಂದಿವೆ.
ಈ ಹಿಂದೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ಮಕ್ಕಳು ಮತ್ತು ಸಧ್ಯ ಓದುತ್ತಿರುವ ಮಕ್ಕಳಲ್ಲಿ ಕೆಲವರು ಶಿಕ್ಷಕರ ಮಕ್ಕಳೇ ಆಗಿದ್ದಾರೆ ಎಂದು ಕೆಲವರು ದೂರಿದರೆ, ಇನ್ನೂ ಕೆಲವರು ಜೂ29 ರಂದು ನಡೆದ ಪರೀಕ್ಷೆಯಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಎನ್.ಬಿ.ತೆಗ್ಗಿನಮಠ ಇವರ ಪುತ್ರ ಕೂಡ ಪರೀಕ್ಷೆ ಬರೆದಿದ್ದಾನೆ ಎಂದು ದೂರಿದ್ದಾರೆ. ಅಲ್ಲದೇ ಸದರಿ ಶಾಲೆಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಸಿಸಿಟಿವಿ ಅಳವಡಿಸಿದ್ದು ಪರೀಕ್ಷೆಯಲ್ಲಿ ಅದನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿತ್ತು ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. ಈ ಎಲ್ಲ ಆರೋಪಗಳನ್ನು ಹೊತ್ತಿರುವ ಈ ಶಾಲೆಗೆ ಕೂಡಲೇ ತನಿಖಾ ತಂಡವೊಂದು ರಚನೆಯಾಗಿ ಈ ಹಿಂದೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಗಳ ಮತ್ತು ನೇಮಕಾತಿಯಾದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಜೂ29 ರಂದು ನಡೆದ ಪರೀಕ್ಷೆಯನ್ನು ಮರು ನಡೆಸಬೇಕು ಅನ್ನೋ ಕೂಗುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿವೆ.
ಈ ಬಗ್ಗೆ ಶಿಕ್ಷಣ ಇಲಾಖೆ ಯಾವ ದಿಕ್ಕಿನತ್ತ ಹೆಜ್ಜೆ ಇಡುತ್ತೆ ಎಂಬ ಬಗ್ಗೆ ಕಾದು ನೋಡೋಣ.
Subscribe to Updates
Get the latest creative news from FooBar about art, design and business.
Related Posts
Add A Comment
