ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೋರವಾರ ಗ್ರಾಮದ ೩ನೇವಾರ್ಡಿನಲ್ಲಿ ಕುಡಿಯುವ ನೀರನ್ನು ನಿಗದಿತವಾಗಿ ಪೂರೈಸಲು ಜೊತೆಗೆ ನೀರಿನ ಟ್ಯಾಂಕ್ ಅಳವಡಿಸಲು ಆಗ್ರಹಿಸಿ ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ವ್ಹಿ.ಪಟ್ಟಣಶೆಟ್ಟಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೋರವಾರ ಗ್ರಾಮದ ವಾರ್ಡ್ ೩ರ ಶ್ರೀಬಸವೇಶ್ವರನಗರದ ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಆಗಮಿಸಿ ನೀರಿನ ತೊಂದರೆ ಕುರಿತು ಗಮನ ಸೆಳೆದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಬಿರಾದಾರ ಮಾತನಾಡಿ, ವಾರ್ಡಿಗೆ ಎರಡು ತಿಂಗಳಿಗೊಮ್ಮೆ ಕುಡಿವ ನೀರು ಪೂರೈಕೆಯಾಗುತ್ತಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ನೀರಿನ ಸಮಸ್ಯೆಯ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಒಂದು ವೇಳೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಒಂದು ವಾರದೊಳಗಾಗಿ ನಿಗದಿತ ಪೂರೈಸುವುದು ಹಾಗೂ ಒಂದು ಕುಡಿಯುವ ನೀರಿನ ಟ್ಯಾಂಕ್ ಅಳವಡಿಸದಿದ್ದರೆ ಗ್ರಾಮ ಪಂಚಾಯಿತಿ ಕಾರ್ಯಲಯದ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ನಂತರ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಮಾದೇವ ಜಂಬುಗೋಳ, ಅಶೋಕ ಮಾಲಿ, ವಿಜಯಲಕ್ಷ್ಮಿ ಪಾಟೀಲ, ಬಸಮ್ಮ ಬಿರಾದಾರ, ಮಾನಂದಾ ಹೂಗಾರ, ಭಾರತಿ ಕೊಟಗಿ, ಲಕ್ಷ್ಮೀ ಬಿರಾದಾರ, ವನಜಾ ಬಿರಾದಾರ, ಸಾವಿತ್ರಿ ಹೂಗಾರ, ಭಾರತಿ ಹೊನಮಟ್ಟಿ, ಭಾಗ್ಯ ಬೂದಿಹಾಳ, ಶ್ರೀದೇವಿ ಮಲ್ಲಾಳ, ಉಮಾ ಬಿರಾದಾರ ಇದ್ದರು.

