ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇರುವದರಿಂದಲೇ ಜನ ಸಾಮಾನ್ಯರು ಜನ ಸಂಪರ್ಕ ಸಭೆಗೆ ತಮ್ಮ ಅಹವಾಲುಗಳನ್ನು ತೊಡಿಕೊಳ್ಳಲು ಬರುತ್ತಾರೆ. ಈ ರೀತಿ ಜನ ಸಾಮಾನ್ಯರು ಜನ ಸಂಪರ್ಕ ಸಭೆಗೆ ಬರದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಕೆಲಸ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಮಂಗಳವಾರ ಇಂಡಿ ಪಟ್ಟಣದ ವಿಧಾನಸೌಧ ಸಭಾಭವನದಲ್ಲಿ ಏರ್ಪಡಿಸಿದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನ ಸಂಪರ್ಕ ಸಭೆಗೆ ನೂರಾರು ಜನ ಸಾರ್ವಜನಿಕರು ಆಗಮಿಸಿ ಡಾ. ಬಿ.ಆರ್.ಅಂಬೇಡಕರ ನಿಗಮದಿಂದ ಸ್ವಯಂ ಸಾಲ ಯೋಜನೆ ಮಂಜೂರಿ ಮಾಡಿಸಬೇಕು. ಗೋಳಸಾರ ಗ್ರಾಮದ ೧೨೦ ಮನೆಗಳನ್ನು ಕಂದಾಯ ಗ್ರಾಮಕ್ಕೆ ಸೇರ್ಪಡೆ ಮಾಡುವ ಕುರಿತು ಜಮೀನು ಬೆಳೆ ಪರಿಹಾರ ಕೊಡಿಸಬೇಕು ಶ್ರೀ ನರಸಿಂಹ ದೇವಸ್ಥಾನ ಆಸ್ತಿ ಆಕ್ರಮವಾಗಿ ಮಾರಾಟ ಮಾಡಿದ ಬಗ್ಗೆ ತನಿಖೆ ಮಾಡಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯ ೨೭ ನೇ ಡಿಸ್ಟ್ರಿಬ್ಯೂಟರ್ ಗೆ ನೀರು ಹರಿಸುವ ಕುರಿತು ರಸ್ತೆ ತೆರವುಗೊಳಿಸುವ ಕುರಿತು ಸಾಲೋಟಗಿ ಗ್ರಾಮಕ್ಕೆ ತೆರಳುವ ಹಳೆ ರಸ್ತೆ ತೆರವು ಮಾಡಿಸಬೇಕೆಂದು ಮನವಿ ಮಾಡಿದರು.
ಇಂಡಿ ತಾಲೂಕಿನ ಮಿರಗಿ,ತೆನೆಹಳ್ಳಿ, ತಾಂಬಾ ಮತ್ತು ವಿಜಯಪುರಕ್ಕೆ ಹೋಗುವ ಬಸ್ ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಸರಕಾರ ಮನೆ ಕಟ್ಟಿಸುವ ಬಗ್ಗೆ ರೇವಪ್ಪ ನಗರದ ಆಶ್ರಯ ಕಾಲೋನಿ ಅಭಿವೃದ್ದಿ ಪಡಿಸುವ ಬಗ್ಗೆ ಹನುಮಾನ ದೇವಸ್ಥಾನ ದುರಸ್ತಿ ಕುರಿತು ತಾಂಬಾ ಗ್ರಾಮದ ಚಿತಾಗಾರ ಅಳತೆ ಮಾಡುವ ಬಗ್ಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಬಡವರಿಗೆ ಅವಕಾಶ ಕಲ್ಪಿಸುವ ಬಗ್ಗೆ ರೂಗಿ ಗ್ರಾಮದ ರೈತರಿಗೆ ಬೆಳೆ ಪರಿಹಾರ ಕುರಿತು ನೂರಾರು ಬೇಡಿಕೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು.
ಸಭೆಯಲ್ಲಿದ್ದ ತಾಲೂಕು ಅಧಿಕಾರಿಗಳಿಗೆ ಅವರವರಿಗೆ ಸಂಬಂದಪಟ್ಟ ಸಮಸ್ಯೆಗಳನ್ನು ಗಮನಕ್ಕೆ ತಂದು ಅರ್ಜಿದಾರರಿಗೆ ತೃಪ್ತಿಯಾಗುವಂತೆ ಕ್ರಮ ಜರುಗಿಸಬೇಕೆಂದು ಶಾಸಕರು ಸೂಚನೆ ನೀಡಿದರು.
ವೇದಿಕೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಡಿವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ ಇದ್ದರು.

