ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಚಡಚಣದ ರಾಷ್ಟೀಯ ಸೇವಾ ಯೋಜನಾ ಘಟಕವು ಚಡಚಣ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿತ್ತು.
ಎನ್ ಎಸ್ ಎಸ್ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಸಿದ್ದರಾಮೇಶ್ವರ ಪಟ್ಟದ ದೇವರುವರು (ಬೋರಚಿಂಚೋಳ್ಳಿ) ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಠ್ಠಲ ಬಿರಾದಾರ (ಗ್ರಾಂ ಪ ಅಧ್ಯಕ್ಷರು) ವಹಿಸಿಕೊಂಡಿದ್ದರು.
ಉದ್ಘಾಟನೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ ಎಸ್ ಗಿಡವೀರ ನೆರವೆರಿಸಿ ಮಾತನಾಡಿ, ಎನ್.ಎಸ್.ಎಸ್ ಶಿಬಿರದಿಂದ ಪುಸ್ತಕದ ಜ್ಞಾನದ ಜೊತೆಗೆ ಸಮಾಜದ ಬದುಕಿನ ಜ್ಞಾನ ಪಡೆಯಲು ಸಾಧ್ಯ. ವಿಶೇಷ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವನೆ ಮೂಡುತ್ತದೆ ಹಾಗೂ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಜಯಪುರ ಡಿಸಿಸಿ ಬ್ಯಾಂಕ ನಿರ್ದೇಶಕ ಕಲ್ಲಣಗೌಡ ಪಾಟೀಲ ಸ್ವಯಂ ಸೇವಕರಲ್ಲಿ ಪ್ರಾಮಾಣಿಕತೆ ಇರಬೇಕು. ದೇಶದ ಭದ್ರತೆ ಮತ್ತು ಅಭಿವೃದ್ದಿ ದೃಷ್ಟಿಕೊನದಲ್ಲಿರಿಸಿಕೊಂಡು ಸೇವೆಯನ್ನು ಇವತ್ತಿನ ಯುವಕರು ಮಾಡಬೇಕು. ಯಾವುದೇ ಸ್ವಚ್ಛತೆಯೇ ಈ ಶಿಬಿರದ ಮೂಲ ತತ್ವವಾಗಲಿ. ಪರಿಸರ ಕಾಳಜಿ ಯುವಕರ ಆಶಯವಾಗಲಿ ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ ಬಿ ರಾಠೋಡ ಪ್ರಾಸ್ತಾವಿಕ ಮಾತನಾಡುತ್ತಾ, ನಾಡಿನ ಭವಿಷ್ಯ ಯುವಕರ ಕೈಯಲ್ಲಿ ಇದೆ. ಸಂಸ್ಕಾರ ಮತ್ತು ಸಭ್ಯತೆಗಳನ್ನು ಕಲಿಯುವುದರ ಮೂಲಕ ಸ್ವಯಂ ಸೇವಕರು ಸಾಧನೆಯನ್ನು ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಎಂ ಕೆ ಬಿರಾದಾರ್, ಪ್ರೊ.ಎ ಎಸ್ ಪಾಟೀಲ್, ಎಸ ಎಸ್ ಪಾಟೀಲ್ ,ಪ್ರೊ. ಬಸವರಾಜ ಯಳ್ಳೂರು, ಪ್ರೊ.ಎಸ್ ಎಸ್ ಅವಟಿ, ಪ್ರೊ.ಪೂಜಾ ಬುರುಡ, ಪ್ರೊ.ಬಿ ಎಮ್ ಧೈವಾಡಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಹಿರಿಯರು ಮಹಾವಿದ್ಯಾಲಯದ ಸ್ವಯಂ ಸೇವಕರು ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿಗಳಾದ ಮಹಾಂತೇಶ ಜನವಾಡ ಸ್ವಾಗತಿಸಿದರು ಡಾ.ಎಸ್ ಎಸ್ ದೇಸಾಯಿ ವಂದಿಸಿದರು. ಕು. ಅಕ್ಷತಾ ಉಮರಾಣಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ಎನ್ನೆಸ್ಸೆಸ್ ಶಿಬಿರದಿಂದ ಸಮಾಜದ ಬದುಕಿನ ಜ್ಞಾನ ಪಡೆಯಲು ಸಾಧ್ಯ
Related Posts
Add A Comment

