ವಿಜಯಪುರ: ಎಸ್.ಎಮ್.ಎನ್. ಸೌಹಾರ್ದದಲ್ಲಿ ಕೋಟ್ಯಾಂತರ ಹಣತೊಡಗಿಸಿ ಕೈಸುಟ್ಟುಕೊಂಡ ಠೇವಣಿದಾರರಿಗೆ ಶೀಘ್ರದಲ್ಲಿ ಕ್ಲೇಮ್ ಪಡೆದುಕೊಂಡು ಹಣ ಮರುಪಾವತಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಎಸ್.ಎಮ್.ಎನ್. ಸೌಹಾರ್ದದ ವಂಚಿತ ಠೇವಣಿದಾರರ ಹೋರಾಟ ಸಮಿತಿ ಹಾಗೂ ಗ್ರಾಹಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಎನ್.ಕೆ. ಮನಗೊಂಡ, ಎಸ್.ಜಿ. ಸಂಗೋದಿಮಠ ಮಾತನಾಡಿ, ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಎಸ್.ಎಮ್. ಎನ್. ಸೌಹಾರ್ದದಲ್ಲಿ ತೊಡಗಿಸಿದ ಹಣವನ್ನು ಆಡಳಿತ ಮಂಡಳಿ ೩೦ಕೋಟಿ ಹಣವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ. ಹೋರಾಟ ಪ್ರತಿಫಲವಾಗಿ ಸರಕಾರ ಎಚ್ಚೆತ್ತುಕೊಂಡು ಸಿಓಡಿ ತನಿಖೆ ನಡೆಸಿ ಸಕ್ಷಮ ಪ್ರಾಧಿಕಾರ ನೇಮಕ ಮಾಡಿ ಸಂಬಂಧಿಸಿದ ಸೌಹಾರ್ದದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಇನ್ನುಳಿದ ಸಿಬ್ಬಂಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಆಸ್ತಿಗಳನ್ನು ಶೀಘ್ರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಹಾರಾಜು ಮಾಡಿ ನೊಂದ ಠೇವಣಿದಾರರಿಗೆ ಬಡ್ಡಿ ಸಮೇತ ಹಣ ಮರುಪಾವತಿಸಬೇಕು. ಈಗಾಗಲೇ ಎಸ್.ಎಮ್.ಎನ್. ಸೌಹಾರ್ದದ ವಿಶೇಷ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ ಅವರು ವಂಚಿತ ಠೇವಣಿದಾರರಿಂದ ಕ್ಲೇಮ್ ಪಡೆದುಕೊಳ್ಳಲು ಜಿಲ್ಲಾಡಳಿತಕ್ಕೆ ಆದೇಶ ಮಾಡಿರುವುದು ಸಮಾಧಾನಕರ ವಿಷಯವಾಗಿದೆ. ಶೀಘ್ರದಲ್ಲಿ ಠೇವಣಿದಾರರ ಬಾಂಡ್‌ಗಳನ್ನು ಪಡೆದುಕೊಂಡು ಹಣವನ್ನು ಹಿಂದುರುಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಅವಟಿ, ಬಸವರಾಜ ಚಿಕ್ಕೊಂಡ, ಈಶ್ವರ ಸಾರವಾಡ, ಬಸವರಾಜ ಬಾಡಗಿ, ಕೆ.ಡಿ. ನರಗುಂದ ಸೇರಿದಂತೆ ನೂರಾರು ಠೇವಣಿದಾರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
