ವಿಜಯಪುರ: ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾಳಿಂಬೆ, ಲಿಂಬೆ, ಹಾಗೂ ದ್ರಾಕ್ಷಿ ಬೆಳೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿವಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ.
ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಆಧಾರ್ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್‌ಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ, ಸಿಎಸ್‌ಸಿ ಸೆಂಟರ್‌ಗಳಲ್ಲಿ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು.
ದ್ರಾಕ್ಷಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಜಿಲೈ ೧೫ ಕೊನೆಯ ದಿನವಾಗಿರುತ್ತದೆ. ರೈತರು ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ೧೪೦೦ ರೂ.ಗಳಾಗುರುತ್ತದೆ. ದಾಳಿಂಬೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಜುಲೈ ೧ ಕೊನೆಯದಿನವಾಗುದ್ದು, ರೈತರು ೬,೩೫೦ರೂ.ಗಳನ್ನು ವಿಮಾಕಂತು ತುಂಬಬೇಕು. ಹಾಗೂ ಲಿಂಬೆ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಲು ಜುಲೈ ೧ ಕೊನೆಯದಿನವಾಗಿದ್ದು, ವಿಮಾ ಕಂತಿನ ಮೊತ್ತ ೨೮೦೦ರೂ ಗಳನ್ನು ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್, ಹಾಗೂ ಪವಿತ್ರಾ, ಅಗ್ರಿಕಲ್ಚರಲ್ ಇನ್ಸುರನ್ಸ್ ಕಂಪನಿ ವಿಮಾ ಸಂಸ್ಥೆಯ ಪ್ರತಿನಿಧಿ (೮೮೯೯೮೮೭೮೭೩), ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ವಿಜಯಪುರ(೯೫೩೫೧೮೫೯೯೯), ಇಂಡಿ(೯೦೦೮೪೦೪೦೪೧), ಸಿಂದಗಿ(೮೧೯೭೪೬೪೬೭೫), ಬಸವನ ಬಾಗೇವಾಡಿ (೯೮೪೫೨೧೫೩೬೨) ಮುದ್ದೇಬಿಹಾಳ(೮೧೨೩೬೮೬೯೦೩) ಸಂರ್ಪಕಿಸಬಹುದು ಎಂದು ವಿಜಯಪುರ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
