ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ’ವಚನಗಳಲ್ಲಿ ವಿಜ್ಞಾನ’ ಉಪನ್ಯಾಸ
ವಿಜಯಪುರ: ೧೨ ನೇ ಶತಮಾನದ ಶರಣರ ವೈಜ್ಞಾನಿಕ ಚಿಂತನೆಗಳ ಒಲವು ವಚನ ಸಾಹಿತ್ಯ ಈ ನೆಲದ ಅಮೂಲ್ಯ ಸಂಪತ್ತು. ೧೨ ನೇ ಶತಮಾನದಲ್ಲಿಯೇ ಬಸವಾದಿ ಶರಣರು ವೈಜ್ಞಾನಿಕ ಚಿಂತನೆಗಳನ್ನು ತಮ್ಮ ವಚನಗಳಲ್ಲಿ ಬಹಳ ಸ್ಪಷ್ಠವಾಗಿ ಹೇಳಿದ್ದಾರೆ. ಅವುಗಳನ್ನು ಬಿತ್ತುವಂತಾಗಬೇಕು ಎಂದು ಸಾಹಿತಿ ಪ್ರೊ. ಸುಧಾ ಹುಚ್ಚಣ್ಣನವರ ಹೇಳಿದರು.
ನಗರದ ಬಿ.ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ’ವಚನಗಳಲ್ಲಿ ವಿಜ್ಞಾನ’ ಎಂಬ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯ ಈ ನೆಲದ ಅಮೂಲ್ಯ ಸಂಪತ್ತು. ೧೨ ನೇ ಶತಮಾನದಲ್ಲಿಯೆ ಬಸವಾದಿ ಶರಣರು ವೈಜ್ಞಾನಿಕ ಚಿಂತನೆಗಳನ್ನು ತಮ್ಮ ವಚನಗಳಲ್ಲಿ ಬಹಳ ಸ್ಪಷ್ಡವಾಗಿ ಹೇಳಿದ್ದಾರೆ. ಅಂದಿನ ಶರಣರು ಸಾಮಾಜಿಕ ಆಧ್ಯಾತ್ಮೀಕ ಸುಧಾರಣೆಗೆ ಒತ್ತು ನೀಡಿದ ಹಾಗೆ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳ ಕುರಿತು ಹೆಚ್ಚಿನ ಒಲವುಗಳನ್ನು ತೋರಿದ್ದರು ಎಂದು ಸೂಚಿಸುತ್ತದೆ. ಫಲವತ್ತಾದ ಭೂಮಿಗೆ ಬೀಜ ಎಷ್ಟು ಮುಖ್ಯವೋ ವಿಜ್ಞಾನವು ಮನುಷ್ಯನ ಹಸನಾದ ಬದುಕಿಗೆ ಅಷ್ಟೇ ಮುಖ್ಯ ಎಂಬುದನ್ನು ವೈದ್ಯ ಸಂಗಣ್ಣ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು ಮೊದಲಾದ ಶರಣರ ವಚನಗಳ ಹಿನ್ನೆಲೆಯಲ್ಲಿ ಈ ಎಲ್ಲಾ ವೈಜ್ಞಾನಿಕ ಚಿಂತನೆಗಳನ್ನು ಹೇಳಿ, ಪಂಚೇಂದ್ರೀಯಗಳ ಸದ್ಭಳಕೆಗೆ ವೈಜ್ಞಾನಿಕ ಅರಿವು ಅಗತ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆಯಾಗುವಂತೆ ವಿದ್ವತ್ಪೂರ್ಣ ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆರ್.ಎಂ. ಮಿರ್ದೆ ಮಾತನಾಡಿ, ಅರಿವು ಆಚಾರಗಳ ಕುರಿತು ಶರಣರು ಹೇಳಿರುವ ವೈಜ್ಞಾನಿಕ ವೈಚಾರಿಕ ಚಿಂತನೆಗಳನ್ನು ಇಂದಿನ ಯುವ ಜನಾಂಗ ತಿಳಿದುಕೊಳ್ಳುವುದು ಬಹಳ ಮಹತ್ವದ ಸಂಗತಿಯೆಂದು ಹೇಳಿದರು.
ಶ್ರೀಮತಿ ಸವಿತಾ ಕನಕರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಎಸ್.ಎಚ್.ಹೂಗಾರ ಅವರು ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಡಾ.ಉಷಾದೇವಿ ಹಿರೇಮಠ ಅವರು ನಿರೂಪಿಸಿದರು. ಉಪನ್ಯಾಸಕ ಎಸ್.ವಾಯ್.ಅಂಗಡಿ ವಂದಿಸಿದರು.

