ತಿಕೋಟಾ: ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಯಿತು.
ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಅವರು, ಕೆಂಪೇಗೌಡರು ನವ ನಾಡಿನ ಅಭಿವೃದ್ಧಿ ಚಿಂತಕರಾಗಿದ್ದರು. ನಾಡು ಕಟ್ಟುವಲ್ಲಿ ಇವರ ಪಾತ್ರ ಹಿರಿದಾಗಿದೆ. ಇವರ ಆದರ್ಶಗಳನ್ನು ಇಂದಿನ ಕಾಲದಲ್ಲಿ ಸರ್ವರೂ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಸಹಾಯಕ ನಿರ್ದೇಶಕರಾದ ಶೋಭಕ್ಕ ಶೀಳಿನ, ವಿಜಯ ಶೇಗುಣಸಿ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಅಪರ್ಣಾ ಬದಾಮಿ, ಜಯಶ್ರೀ ಕೆಂಗಲಗುತ್ತಿ, ಸಾವಿತ್ರಿ ಲವಗಿ, ವಿಜಯ ಯರಗಟ್ಟಿ, ಜಯಶ್ರೀ ಪೂಜಾರಿ, ಸುನೀಲ ಬನಸೋಡೆ, ಮಹಾಶಾಂತ ಬಂದಿ, ಸಿಬ್ಬಂದಿಗಳು ಸೇರಿ ಇತರರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

