ವಿಜಯಪುರ: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ. ಆಧುನಿಕ ಬೆಂಗಳೂರಿನ ನಿರ್ಮಾತೃ ಆಗಿರುವ ಇವರು ವಿಜಯನಗರ ಸಾಮ್ರಾಜ್ಯದಲ್ಲಿ ಮುಖ್ಯಸ್ಥರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಗೌಡ ವಂಶಸ್ಥರಾದ ಇವರು ಆ ಕಾಲದಲ್ಲಿ ಅತ್ಯಂತ ವಿದ್ಯಾವಂತ ಯಶಸ್ವಿ ಆಡಳಿತಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದರು ಎಂದು ಬಂಜಾರಾ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರು ಎಸ್.ವ್ಹಿ.ದೇಶಪಾಂಡೆ ಹೇಳಿದರು.
ಗುರುವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ನಾಡಪ್ರಭು ಕೆಂಪೇಗೌಡರ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜ್ಯಧಾನಿ ಬೆಂಗಳೂರು ಇವತ್ತು ಕೋಟ್ಯಂತರ ಜನರ ಆಶ್ರಯತಾಣವಾಗಿದೆ. ಇಲ್ಲಿಯವರಿಗಿಂತ ಹೆಚ್ಚು ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅತ್ಯಂತ ಸುರಕ್ಷಿತ, ಸುಂದರ ಮತ್ತು ಸುಸಜ್ಜಿತ ನಗರವಾಗಿ ಬೆಂಗಳೂರು ಬೆಳೆಯಲು ಕೆಂಪೇಗೌಡಅವರ ವಿವೇಚನೆ ಮತ್ತು ದೂರದೃಷ್ಟಿಯೇ ಮುಖ್ಯಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಕೆ.ಶಿಂಧೆಯವರು ಮಾತನಾಡುತ್ತ, ಕೆಂಪೇಗೌಡರು ೧೫೩೭ ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಯಶಸ್ವಿಯಾಗಿ ಜೀವಂತಗೊಳಿಸಿದರು. ಹಲವಾರು ಕನ್ನಡ ಶಾಸನಗಳನ್ನು ನಿರ್ಮಿಸಲು ಅವರನ್ನು ರಾಜ್ಯದ ಮತ್ತು ಇಡೀ ರಾಷ್ಟ್ರದ ಜನರು ನೆನಪಿಸಿಕೊಳ್ಳುತ್ತಾರೆ. ಪ್ರವರ್ಧಮಾನಕ್ಕೆ ಬರುತ್ತಿರುವ ಆಡಳಿತಗಾರನನ್ನು ಅವನ ಕಾಲದ ಸುಶಿಕ್ಷಿತ ಆಡಳಿತಗಾರ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವನ್ನು ಇಂದಿಗೂ ವೈಭವೀಕರಿಸುವ ಅನೇಕ ದೇವಾಲಯಗಳು ಮತ್ತು ನೀರಿನ ಜಲಾಶಯಗಳ ಪ್ರಾರಂಭಕ್ಕೆ ಅವರ ಹಲವಾರು ಸಾಮಾಜಿಕ ಸುಧಾರಣೆಗಳು ಮತ್ತು ಸಮರ್ಪಣೆಗಾಗಿ ಅವರು ಸಮಾನವಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ಹೇಳಿದರು.
ಈ ವೇಳೆಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಪೂಜೆಯನ್ನು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿ ಹಾಗೂ ಎಚ್.ಎಂ.ಬೋರಾವತ್ ಶಿಕ್ಷಕರುಗಳು ನೇರವೇರಿಸಿದರು.
ಈ ವೇಳೆ ಆರ್.ವಿ.ಭುಜಂಗನವರ, ಎಸ್.ಎಲ್.ದೊಡ್ಡಮನಿ, ಎಂ.ಎಲ್.ಚವ್ಹಾಣ್, ಎಸ್.ಬಿ.ಒಡೆಯರ, ಎಸ್.ಪಿ.ದಡೇಕರ, ಎಸ್.ಡಿ.ಚವ್ಹಾಣ್, ರೇಖಾರಜಪೂತ, ಪಿ.ಎ.ಕೌಲಗಿ, ಆರ್.ಎಸ್.ಹಿರೇಮಠ, ಬಿ.ಎಸ್.ದ್ಯಾಬೇರಿ, ಎಸ್.ಎಂ.ಮಾಳಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಎಲ್ಲ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

