ಸಿಂದಗಿ: ಚೈತ್ರ ಮಾಸದ ದವನದ ಹುಣ್ಣಿಮೆ ದಿನವಾದ ಗುರುವಾರ ಸಿಂದಗಿ ನಗರದೆಲ್ಲೆಡೆ ರಾಮನ ಪರಮಭಕ್ತ ಹನುಮನ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.
ಪಟ್ಟಣದ ಮಲ್ಲಿಕಾರ್ಜುನ ನಗರದ ದೇವಸ್ಥಾನದಲ್ಲಿ ಮಹಿಳೆಯರು ಹನುಮ ಜಯಂತಿಯನ್ನು ಸಂಭ್ರಮದಿAದ ಆಚರಿಸಿದರು. ಬಾಲ ಮಾರುತಿಯನ್ನು ತೆuಟಿಜeಜಿiಟಿeಜಟ್ಟಿಲಿಗೆ ಹಾಕಿ, ಜೋಗುಳ ಗೀತೆಗಳನ್ನು ಹಾಡಿದರು. ಸುಮಂಗಲೆಯರು ಹನುಮನನ್ನು ತೆuಟಿಜeಜಿiಟಿeಜಟ್ಟಿಲಿಗೆ ಹಾಕಿ ತೂಗಿ ನಾಮಕರಣ ಮಾಡಿ ಸಂಭ್ರಮಿಸಿದರು.
ನಗರದ ಬಂದಾಳ ರಸ್ತೆಯ ವರದಹಸ್ತ ಆಂಜನೇಯನ ದೇಗುಲದಲ್ಲಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಈ ದೇಗುಲದಲ್ಲಿ ಹನುಮ ಜಯಂತಿ ಪ್ರಯುಕ್ತ ಶ್ರೀರಾಮ ಯುವಕ ಮಂಡಳಿ ಗಧಾ ಪೂಜಾ ಕಾರ್ಯಕ್ರಮ ಆಯೋಜಿಸಿದರು. ಸುತ್ತಮುತ್ತಲಿನ ಬಡಾವಣೆಯಲ್ಲಿನ ಭಕ್ತರು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಬಂದಾಳ ರಸ್ತೆಯ ವರದ ಹಸ್ತ ಆಂಜನೇಯ ದೇವಸ್ಥಾನ, ಮಲ್ಲಿಕಾರ್ಜುನ ನಗರದ ವಜ್ರ ಹನುಮಾನ ದೇವಾಲಯ, ಹಳೆ ಬಜಾರದ ಆಂಜನೇಯ ದೇಗುಲದಲ್ಲಿ ಹನುಮ ಜಯಂತಿ ನಡೆಯಿತು. ನಗರದ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ನಗರದ ಅನೇಕ ಹನುಮ ಮಂದಿರಗಳಲ್ಲಿ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭದಲ್ಲಿ ರವಿ ದೇಸಂಗಿ, ಬಾಪೂ ಸಿಂದಗಿ, ಶಿವಾನಂದ ಬಡಿಗೇರ, ನಿಂಗಣ್ಣ ಯಾಳಗಿ ವಿಜಯಲಕ್ಷ್ಮಿ ನಂದಿಕೋಲ, ಚೈತನ್ಯ ಅಂಗಡಿ, ಗಂಗೂ ನಂದಿಕೋಲ, ಬೋರಮ್ಮ ನಂದಿಕೋಲ, ಶೃತಿ ಭೂಸನೂರ ಹಾಗೂ ರಾಜು ಸೇರಿದಂತೆ ಅನೇಕ ಭಕ್ತರು ಇದ್ದರು
Related Posts
Add A Comment