ಸಿಂದಗಿ: ಆಳುವ ಬಿಜೆಪಿ ಸರ್ಕಾರದಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ದಸ್ತಗೀರ ಮುಲ್ಲಾ ಆರೋಪಿಸಿದರು.
ಬುಧವಾರ ಪಟ್ಟಣದ ಖಾಸಗಿ ಹೋಟೆಲನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಳಿತಾರೂಢ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಅಸಂವಿಧಾನಿಕವಾಗಿ ಮುಸ್ಲಿಂರ ಮೀಸಲಾತಿಯನ್ನು ಕಿತ್ತು ಎಸೆದು, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಬಿಜೆಪಿ ಸರ್ಕಾರ ಸಮುದಾಯಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಕೋಮುವಾದವನ್ನು ಪ್ರದರ್ಶನ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ನಮ್ಮ ಮೀಸಲಾತಿಯನ್ನು ಕಿತ್ತುಕೊಂಡಿದೆ. ಒಕ್ಕಲಿಗರಿಗೆ ಮತ್ತು ಪಂಚಮಸಾಲಿಗರಿಗೆ ಮೀಸಲಾತಿ ಕೊಟ್ಟಿದ್ದು ಸ್ವಾಗತಿಸುತ್ತೇವೆ. ಆದರೆ ಒಂದು ಸಮುದಾಯದ ಮೀಸಲಾತಿಯನ್ನು ಕಿತ್ತುಕೊಂಡು ಸರ್ಕಾರವು ಮುಸಲ್ಮಾನ್ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ವಿರೋಧಿಸಬೇಕಾದ ವಿರೋಧ ಪಕ್ಷಗಳು ಸುಮ್ಮನೆ ಇರುವುದು ಏಕೆ ? ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಮುಸ್ಲಿಮರ ವೋಟ್ ಬೇಕು, ಆದರೆ ಮುಸ್ಲಿಮರ ಸಮಸ್ಯೆಗಳು ಬೇಡವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ವಿಷಯವಾಗಿ ರಾಜ್ಯದಲ್ಲಿ ಮತ್ತು ಸಿಂದಗಿ ಮತಕ್ಷೇತ್ರದಲ್ಲಿ ಮುಸ್ಲಿಮರು ಎಚ್ಚರ ವಹಿಸಿ ತಮ್ಮ ನಿಲುವು ತೋರಿಸಬೇಕು. ನಮ್ಮ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು. ವಿಧಾನಸಭೆಯಲ್ಲಿ ಸಮುದಾಯದ ಪರ ಧ್ವನಿ ಎತ್ತುವವವರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.
ಈ ವೇಳೆ ಬಹು ಜನ ಪಕ್ಷದ ತಾಲೂಕು ಅಧ್ಯಕ್ಷ ರಮೇಶ ಐಹೊಳಿ ಮಾತನಾಡಿದರು.
ಅಸ್ಪಾಕ್ ಕರ್ಜಗಿ , ರಾಜು ಗುಬ್ಬೆವಾಡ , ಚಂದ್ರಶೇಖರ ದೇವುರ, ಏಕನಾಥ ದೊಸಿಹಾಳ ಇದ್ದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮುಸ್ಲಿಂರ ವೋಟ್ ಬೇಕು ಸಮಸ್ಯೆಗಳು ಬೇಡ :ದಸ್ತಗೀರ
Related Posts
Add A Comment