Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಿಂದಗಿ ನಗರ-೨ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಸಿಂದಗಿ ನಗರ-೨ ಮಾರ್ಗದ ಮೇಲೆ ಬರುವ ವಿದ್ಯಾನಗರ, ಇಂಡಸ್ಟ್ರಿಯಲ್ ಏರಿಯಾ, ಆರ್.ಡಿ.ಪಾಟೀಲ ಕಾಲೇಜ, ಹೊನ್ನಪ್ಪಗೌಡ ಲೇಔಟ್, ಬೂದಿಹಾಳ ಲೇಔಟ್, ರಾಜರಾಜೇಶ್ವರಿ ಕಲ್ಯಾಣ ಮಂಟಪ, ಶುಭಂ ನಗರ, ಮೊಗಲಾಯಿ ಲೇಔಟ್, ಲೋಯೊಲಾ ಶಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಬಂದಾಳ ಎನ್‌ಜೆವಾಯ್ & ಬ್ಯಾಕೋಡ ಐಪಿ ಮಾರ್ಗಗಳಲ್ಲಿ ಜು.೧೦ರಂದು ಬೆಳಿಗ್ಗೆ ೧೧:೦೦ ಗಂಟೆಯಿಂದ ಮದ್ಯಾಹ್ನ ೪:೦೦ ಗಂಟೆಯವರೆಗೆ ವಿದ್ಯುತ್ ವ್ಯತ್ಯೆಯವಾಗುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರ ಚಂದ್ರಕಾಂತ ನಾಯಕ ಪತ್ರಿಕಾ ಪ್ರಕಟಣೆಯ ಮೂಲಕ ತಿಳಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ವಿದ್ಯಾರ್ಥಿಗಳು ಈ ದೇಶದ ಅಮೂಲ್ಯ ರತ್ನಗಳಾಗಿವೆ ಮತ್ತು ದೇಶದ ಮುಂದಿನ ಭವಿಷ್ಯ ರೂಪಿಸುವಂತವರಾಗಿದ್ದಾರೆ ಅವರನ್ನು ಶಾಲಾ ವಾಹನಗಳಲ್ಲಿ ಕರೆದುಕೊಂಡು ಹೋಗುವ ಚಾಲಕರು ಸುರಕ್ಷತೆಯನ್ನು ಕಾಪಾಡಿಕೊಂಡು ಸಾಗಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ಹೇಳಿದರು.ಗುರುವಾರ ಪಟ್ಟಣದ ಮೈಲೇಶ್ವರ ಕ್ರಾಸ್‌ನಲ್ಲಿರುವ ಬ್ರಿಲಿಯಂಟ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಆಗಮಿಸಿದ ಅವರು ವಾಹನಗಳ ಫಿಟ್ನೆಸ್ ಪ್ರಮಾಣ ಪತ್ರ, ವಿಮೆ, ವೇಗ ನಿಯಂತ್ರಕಗಳನ್ನು ಪರಿಶೀಲಿಸಿ, ಎಲ್ಲ ವಾಹನಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಂಡ ನಂತರ ಚಾಲಕರಿಗೆ ತಿಳಿ ಹೇಳಿದ ಅವರು ಶಾಲಾ ವಾಹನದಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಗೆ ತುಂಬಿಕೊಂಡು ಹೋಗುವಂತಾಗಬಾರದು ಸುರಕ್ಷತೆ ನೀಯಮವನ್ನು ಪಾಲನೆ ಮಾಡಬೇಕು ವಾಹನಗಳು ಸುಸ್ಥಿರದಲ್ಲಿರುವದನ್ನು ಖಚಿತ ಪಡಿಸಿಕೊಂಡು ವಾಹನವನ್ನು ಚಲಾಯಿಸುವಂತಾಗಬೇಕು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವಾಗ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸದೇ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಸಮೀಪದ ಮೈದಾನ ಮತ್ತು ವಾಹನ ದಟ್ಟನೆ ಇಲ್ಲದ ಜಾಗೆಯನ್ನು ಆಯ್ಕೆ ಮಾಡಿಕೊಂಡು ಇಳಿಸುವಂತಹ ಕಾರ್ಯ ಮಾಡಬೇಕೆಂದು ಕಾನೂನು ನೀಯಮ ಪಾಲನೆ…

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಪಿ. ತ್ಯಾಗರಾಜ್, ಜಯಪ್ರಕಾಶ್ ಹಾಗೂ ರಾಘವೇಂದ್ರ ಭಟ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಅಭಿನಂದನೆ ಸಲ್ಲಿಸಿದೆ.ಇವರ ಅವಧಿಯಲ್ಲಿ ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳು ಜಾರಿಯಾಗಲಿ ಹಾಗೂ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶುಭ ಹಾರೈಸಿದ್ದಾರೆ.ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೂವರು ಮಾಧ್ಯಮ ಕಾರ್ಯದರ್ಶಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ಹಿತಾಸಕ್ತಿಗೆ ಸಹಕಾರಿಯಾಗುವ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಪಿ. ತ್ಯಾಗರಾಜ್, ಜಯಪ್ರಕಾಶ್ ಹಾಗೂ ರಾಘವೇಂದ್ರ ಭಟ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಅಭಿನಂದನೆ ಸಲ್ಲಿಸಿದೆ.ಇವರ ಅವಧಿಯಲ್ಲಿ ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳು ಜಾರಿಯಾಗಲಿ ಹಾಗೂ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸಕ್ಕೆ ಹೆಚ್ಚಿನ ಆದ್ಯತೆ ದೊರೆಯಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಶುಭ ಹಾರೈಸಿದ್ದಾರೆ.ಸರ್ಕಾರ ಮತ್ತು ಮಾಧ್ಯಮಗಳ ನಡುವೆ ಸಮನ್ವಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮೂವರು ಮಾಧ್ಯಮ ಕಾರ್ಯದರ್ಶಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ಹಿತಾಸಕ್ತಿಗೆ ಸಹಕಾರಿಯಾಗುವ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Read More

ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಹೇಳಿಕೆ ಬೆಂಗಳೂರು: ರಾಜ್ಯದಾದ್ಯಂತ ಶೇ.80.85ರಷ್ಟು ಎಣಿಕೆ ಫಾರಂಗಳನ್ನು ಈಗಾಗಲೇ ಮತದಾರರಿಗೆ ವಿತರಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿ ವಿ ಅನ್ಬುಕುಮಾರ್ ಹೇಳಿದ್ದಾರೆ.ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ಪಟ್ಟಿಯ ಎಸ್‌ಐಆರ್ ಅಡಿಯಲ್ಲಿ ಮನೆ-ಮನೆಗೆ ತೆರಳಿ ಎಣಿಕೆ ಕಾರ್ಯ ಜೂನ್ 30ರಂದು ಪ್ರಾರಂಭವಾಗಿದ್ದು ಜುಲೈ 29ರವರೆಗೆ ಮುಂದುವರಿಯುತ್ತದೆ ಎಂದರು.ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನ್ಬುಕುಮಾರ್, ನಾವು ಕರ್ನಾಟಕದ ಪ್ರತಿಯೊಂದು ಮನೆಗೆ, ಪ್ರತಿಯೊಬ್ಬ ಮತದಾರರಿಗೆ ಎಣಿಕೆ ಫಾರಂಗಳನ್ನು ವಿತರಿಸುತ್ತೇವೆ. ಆ ಪ್ರಕ್ರಿಯೆಯಲ್ಲಿ ಶೇ.80.85ರಷ್ಟು ಎಣಿಕೆ ಫಾರಂಗಳನ್ನು ಈಗಾಗಲೇ ಕರ್ನಾಟಕದ ಮತದಾರರಿಗೆ ವಿತರಿಸಲಾಗಿದೆ ಎಂದರು. 224 ವಿಧಾನಸಭಾ ಕ್ಷೇತ್ರಗಳ ಪೈಕಿ 112 ಕ್ಷೇತ್ರಗಳಲ್ಲಿ ಶೇಕಡ 90ಕ್ಕೂ ಹೆಚ್ಚು ಫಾರ್ಮ್‌ಗಳನ್ನು ವಿತರಿಸಲಾಗಿದೆ. ಆದರೆ 169 ಕ್ಷೇತ್ರಗಳಲ್ಲಿ ಶೇಕಡ 80ಕ್ಕೂ ಹೆಚ್ಚು ಫಾರ್ಮ್‌ಗಳನ್ನು ಈಗಾಗಲೇ ವಿತರಿಸಲಾಗಿದೆ ಎಂದರು.ಗಣತಿ ಫಾರಂಗಳನ್ನು ಮತದಾರರಿಗೆ ಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನಗಳನ್ನು ನೀಡಲಾಗಿದೆ ಎಂದರು. ಬಿಎಲ್‌ಒಗಳು ಪ್ರತಿ ಮನೆಗೆ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿಯ ಹದಿನಾಲ್ಕು ವರ್ಷದ ವಿದ್ಯಾರ್ಥಿನಿಯರಿಗೆ ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ಎಚ್‌ವ್ಹಿಪಿ (ಹ್ಯೂಮನ್ ಪ್ಯಾಪಿ ಲೋನ್ ವೈರಸ್) ಲಸಿಕೆ ನೀಡಲಾಯಿತು.ಇದು ಗರ್ಭಕಂಟಕದ ಕ್ಯಾನ್ಸರ್ ತಡೆಗಟ್ಟಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯಾಗಿದೆ. ಅದಕ್ಕಾಗಿ ೧೪ ವರ್ಷ ಮೇಲ್ಪಟ್ಟು ೧೫ ವರ್ಷದ ಒಳಗಿನ ವಿದ್ಯಾರ್ಥಿನಿಯರಿಗೆ ಹಾಕಿಸಲಾಯಿತು.ಪ್ರಾಥಮಿಕ ಆರೋಗ್ಯ ಕೇಂದ್ರದ ಮಧು ಟಕ್ಕಳಕಿ, ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ನೂರ್ ಜಾನ್ ಬೋರಗಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿದ್ಯಾವತಿ ಬೂದಿಹಾಳ, ಆಶಾ ಕಾರ್ಯಕರ್ತೆಯರು, ಮತ್ತು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಬ.ಮಂಗಳೂರ, ಮುಖ್ಯಗುರುಗಳಾದ ಸಂತೋಷ ಪವಾರ, ಶಾಂತಗೌಡ ಬಿರಾದಾರ, ಚೇತನ ನಾವದಗಿ, ಮತ್ತು ವಿದ್ಯಾರ್ಥಿನಿಯರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಪಟ್ಟಣದ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮಣರಾವ್ ಮಹಿಂದ್ರಕರ ಅವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ ಕೆ ಎಸ್ ಡಿ ಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಮಂಗಳವಾರ ಅವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಶಾಸಕರು ದಿವಂಗತ ಲಕ್ಷ್ಮಣರಾವ್ ಮಹಿಂದ್ರಕರ ಅವರೊಂದಿಗಿನ ತಮ್ಮ ರಾಜಕೀಯ ಒಡನಾಟ, ಪಕ್ಷದ ಕುರಿತು ಅವರಿಗಿದ್ದ ನಿಷ್ಠೆ ಹಾಗೂ ಅವರಲ್ಲಿದ್ದ ಒಳ್ಳೆಯ ಮಾನವೀಯ ಗುಣಗಳನ್ನು ಮೆಲುಕು ಹಾಕಿದರು.ಈ ಸಮಯದಲ್ಲಿ ಮೃತ ಲಕ್ಷ್ಮಣ ಮಹಿಂದ್ರಕರ ಅವರ ಸಹೋದರ ದಿಲೀಪ ಮಹಿಂದ್ರಕರ, ಎಸ್ ಎಂ ಮಹಿಂದ್ರಕರ, ವಿ.ಬಿ.ಲೋಕರೆ, ತುಳಸಿದಾಸ ಹಂಚಾಟೆ, ಮೋತಿಲಾಲ್ ಮಹಿಂದ್ರಕರ, ಕಿಟ್ಟು ಮಹಿಂದ್ರಕರ, ವಿಜಯ ಮಹಿಂದ್ರಕರ, ಸುರೇಶಧಣಿ ನಾಡಗೌಡ(ಬಿಂಜಲಬಾವಿ), ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ, ಸಂಗನಗೌಡ ಅಸ್ಕಿ, ಶ್ರೀಮತಿ ನೀಲಮ್ಮ ಪಾಟೀಲ ಹಾಗೂ ಕುಟುಂಬದ ಸದಸ್ಯರು ಇದ್ದರು.

Read More

ಜೀವನೋಪಾಯಕ್ಕಾಗಿ ವಲಸೆ, ಮನೆಗಳಿಗೆ ಬೀಗ, ದಾಖಲಾತಿ ಇಲ್ಲದೆ ತ್ರಿಶಂಕುಸ್ಥಿತಿಯಲ್ಲಿ ಆದಿವಾಸಿಗಳು ಉದಯರಶ್ಮಿ ದಿನಪತ್ರಿಕೆ ವರದಿ: ಶ್ರೀಕಂಠ ಈಶ್ವರ್ಎಚ್.ಡಿ.ಕೋಟೆ: ಹಳ್ಳಿಗಳಿಂದ ಆವೃತವಾಗಿರುವ ಹೆಚ್ ಡಿ ಕೋಟೆ ತಾಲೂಕಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕಬ್ಬಿಣದ ಕಡಲೆಯಾಗಿದೆ. ಅದರಲ್ಲೂ ಆದಿವಾಸಿಗಳು ವಾಸಿಸುತ್ತಿರುವ ಹಾಡಿಗಳಲ್ಲಿ ಬಿಎಲ್ ಒ ಗಳ ಪರಿಸ್ಥಿತಿ ಹೇಳತೀರದಾಗಿದೆ. ಹಾಡಿಗಳಿಗೆ ಹೋದ್ರೆ ಜನ ಇರೋದಿಲ್ಲ, ಮನೆಗಳಿಗೆ ಬೀಗ ಹಾಕಿಕೊಂಡು ಕೊಡಗಿನ ಎಸ್ಟೇಟ್ ಗಳಿಗೆ ವಲಸೆ ಹೋಗಿರುತ್ತಾರೆ. ಇದರಿಂದ ವಿಶೇಷ ತೀವ್ರ ಪರಿಷ್ಕರಣೆ ಮ್ಯಾಪಿಂಗ್ ಪ್ರಕ್ರಿಯೆ ಮಾಡುವುದೇ ಬಿಎಲ್ ಒ ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಜೊತೆಗೆ ಚುನಾವಣಾ ಆಯೋಗ ವಾಸಸ್ಥಳ ದೃಢೀಕರಣ, ಜನ್ಮ ಪ್ರಮಾಣಪತ್ರ ಹಾಗೂ ಆಸ್ತಿ ಹಕ್ಕುಪತ್ರಗಳಂತಹ ಕಠಿಣ ದಾಖಲೆಗಳನ್ನು ಕೇಳುತ್ತಿದ್ದು, ಪುನರ್ವಸತಿ ಕಲ್ಪಿಸದ ಹಿನ್ನೆಲೆ, ತಲೆಮಾರುಗಳ ದಾಖಲೆ ತರುವುದಾದರೂ ಎಲ್ಲಿಂದ ಎಂಬ ಚಿಂತೆ ಆದಿವಾಸಿ ಕುಟುಂಬಗಳಿಗೆ ಕಾಡುತ್ತಿದೆ.ಹಾಡಿಗಳ ಮನೆಮನೆಗೆ ತೆರಳಿ SIR ಅರ್ಜಿ ಫಾರಂ ವಿತರಿಸುವ ಜವಾಬ್ದಾರಿ ಹೊತ್ತ ಬಿಎಲ್‌ಒಗಳು ಬಹುತೇಕರ ಮನೆಗಳಲ್ಲಿ ಜನರಿಲ್ಲದೆ ಪರದಾಡುತ್ತಿದ್ದಾರೆ. ಇನ್ನು ಮತದಾರ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಉಪನೋಂದಣಾಧಿಕಾರಿಗಳು ಹಾಗೂ ವಿವಾಹ ನೋಂದಣಾಧಿಕರಿಗಳ ಕಾರ್ಯಾಲಯದ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಸತತ ಮೂರು ದಿನಗಳ ಕಾಲ ಕಚೇರಿಯಲ್ಲೇ ಅತ್ಯಂತ ವೇಗವಾಗಿ ಕಡತಗಳ ಪರಿಶೀಲನೆ ನಡೆಸಿದರು.ಈ ಬಿರುಸಿನ ತಪಾಸಣೆಯ ವೇಳೆಯಲ್ಲಿ ಸಾರ್ವಜನಿಕರಿಗೆ ಸೇರಿದ ಸುಮಾರು ೨,೨೬೫ ಕ್ಕೂ ಹೆಚ್ಚು ಪೇಡಿ (ಬಾಕಿ) ಪತ್ರಗಳು ಮತ್ತು ಪ್ರಮುಖ ಕಡತಗಳು ಕಚೇರಿಯಲ್ಲಿ ಧೂಳು ಹಿಡಿಯುತ್ತಿರುವುದು ಪತ್ತೆಯಾಯಿತು. ಅಧಿಕಾರಿಗಳ ಈ ತೀವ್ರ ಕ್ರಮವನ್ನು ಕಂಡು ಸಾರ್ವಜನಿಕರು ಭ್ರಷ್ಟಾಚಾರಕ್ಕೆ ಮುಕ್ತಿ ಸಿಗಬಹುದು ಎಂದು ಆಶಿಸಿದ್ದರು.ಆದರೆ ಆರಂಭದಲ್ಲಿದ್ದ ಬಿರುಸು ದೀರ್ಘಕಾಲ ಮುಂದುವರಿಯಲಿಲ್ಲ. ಮೂರು ದಿನಗಳ ನಿರಂತರ ಪರಿಶೀಲನೆಯ ನಂತರ ತನಿಖೆಗೆ ಇದ್ದಕ್ಕಿದ್ದಂತೆ ಎರಡು ದಿನಗಳ ವಿರಾಮ (ಬ್ರೇಕ್) ಬಿತ್ತು. ಈ ವಿರಾಮದ ಬಳಿಕ ಇಡೀ ಕಚೇರಿಯ ಕಡತಗಳ ಮಹಜರು ಮತ್ತು ಪರಿಶೀಲನೆ ನಡೆಸಲು ಕೇವಲ ಇಬ್ಬರು ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲಾಯಿತು. ನೂರಾರು ಪ್ರಮುಖ ಕಡತಗಳು ಮತ್ತು ಅಕ್ರಮದ ವಾಸನೆ ಇರುವ ದಸ್ತಾವೇಜುಗಳನ್ನು ಇಷ್ಟೊಂದು ಸಣ್ಣ ಮಟ್ಟದ ಸಿಬ್ಬಂದಿ ತಂಡ ಪರಿಶೀಲಿಸುತ್ತಿರುವುದು ತನಿಖೆಯ ವೇಗವನ್ನು…

Read More