Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಾಲಾಯ ತಸ್ಮೈ ನಮಃ

ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ

ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡವರೇ ಶ್ರೇಷ್ಠರು
(ರಾಜ್ಯ ) ಜಿಲ್ಲೆ

ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡವರೇ ಶ್ರೇಷ್ಠರು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಅಭಿಮತ

ಉದಯರಶ್ಮಿ ದಿನಪತ್ರಿಕೆ

ಇಂಡಿ: ಸಾಮೂಹಿಕ ವಿವಾಹಗಳು ನಿರ್ಗತಿಕರ ಮದುವೆಗಳಲ್ಲ. ಅವು ಭಾಗ್ಯವಂತರ ಮದುವೆಗಳು ಇಂತಹ ವಿವಾಹ ಮಾಡಿಕೊಂಡವರೇ ಶ್ರೇಷ್ಠರು ಎಂದು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯ ಹೇಳಿದರು.
ಅವರು ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಶ್ರೀ ಅಲ್ಲಮಪ್ರಭು, ಹನುಮ ಜಯಂತಿ ಹಾಗೂ ಗೈಬುಸಾಬ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸರಳ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇಲ್ಲಿ ಮದುವೆಯಾಗುವ ವಧು ವರರಿಗೆ ಹರ ಗುರು ಚರಮೂರ್ತಿಗಳು, ಸಹಸ್ರಾರು ಜನ ಅಕ್ಷತೆ ಹಾಕಿ ಹರಸುತ್ತಾರೆ. ಇಂತಹ ಭಾಗ್ಯ ಬೇರೆಡೆ ಸಿಗುವುದಿಲ್ಲ. ಹೀಗಾಗಿ ಇವು ಭಾಗ್ಯವಂತರ ಮದುವೆಗಳು ಎಂದು ಹೇಳಿದರು.
ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವದಂಪತಿಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೇರುವ ಶಪಥ ಮಾಡಬೇಕು.
ನಿಮ್ಮ ಉದರದಿಂದ ಜನಿಸಿದ ಒಂದು ಮಗು ದೇಶ ಸೇವೆಗಾಗಿ, ಒಂದು ಮಗು ಧರ್ಮ ರಕ್ಷಣೆಗಾಗಿ, ಇನ್ನೊಂದು ಮಗು ಸಮಾಜದ ರಕ್ಷಣೆಗಾಗಿ ಮತ್ತೊಂದು ಮಗು ನಿಮ್ಮ ರಕ್ಷಣೆಗೆ ಹೀಗೆ ನಾಲ್ಕು ಮಕ್ಕಳನ್ನು ಹೆರಬೇಕು ಎಂದರು.
ಸಾನಿಧ್ಯ ವಹಿಸಿದ್ದ ಇಂಡಿ ಓಂಕಾರ ಆಶ್ರಮದ ಡಾ. ಸ್ವರೂಪಾನಂದ ಸ್ವಾಮೀಜಿ, ಆಳೂರ-ಚಳಕಾಪುರ ಸಿದ್ದಾರೂಢ ಆಶ್ರಮದ ಶಂಕರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಸರಳ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಿರುವ ಮದುಮಕ್ಕಳಿಗೆ ಆ ಭಗವಂತನ ಕೃಪಾಶೀರ್ವಾದ ಇರಲಿ, ತಾವೆಲ್ಲರೂ ಉತ್ತಮ ಜೀವನ ನಡೆಸಿ ಎಂದು ಶುಭ ಹಾರೈಸಿದರು.
ಶಾಸಕರ ಸಹೋದರ ಬಸವಂತರಾಯಗೌಡ ಪಾಟೀಲ ಮಾತನಾಡಿ, ಇಂಗಳಗಿ ಒಂದು ಚಿಕ್ಕ ಗ್ರಾಮವಾದರೂ ಸಹಿತ ಹಲವು ವರ್ಷಗಳಿಂದ ಪ್ರತಿ ವರ್ಷವೂ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಮಪ್ರಭು ದೇವಸ್ಥಾನ ಕಮಿಟಿಯವರು ಕಾರ್ಯನಿರ್ವಹಿಸುತ್ತಿದ್ದು, ಅವರ ಈ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭು ಹೊಸಮನಿ ಮಾತನಾಡಿದರು,
ವೇದಿಕೆಯಲ್ಲಿ ಕಲ್ಲನಗೌಡ ಬಿರಾದಾರ, ವಜ್ರಕಾಂತ ಹೂಗಾರ, ಅಶೋಕ ಕುಲಕರ್ಣಿ, ಯಲ್ಲಪ್ಪ ಸಾತಲಗಾಂವ, ಅರ್ಜುನ ಜಾಧವ, ಗುರುಬಾಳ ಪೂಜಾರಿ, ಜಲದಪ್ಪ ಪೂಜಾರಿ, ಅಶೋಕ ಬಳಬಟ್ಟಿ, ಭೀಮು ರಾಠೋಡ ಇದ್ದರು.
ಜಾತ್ರಾ ಮಹೋತ್ಸವದಲ್ಲಿ ಅಣ್ಣಪ್ಪ ಅಹಿರಸಂಗ, ಸುಭಾಸ ಥೋರಾತ, ಬಸವರಾಜ ಜಾಧವ, ಉಮೇಶ ಬಳಬಟ್ಟಿ, ಭೀಮ ವಾಲೀಕಾರ, ಉಮೇಶ ಚವ್ಹಾಣ, ರಾಜು ಚಾಬುಕಸವಾರ, ಪ್ರಭು ಚಾಬುಕಸವಾರ, ಜಕ್ಕಪ್ಪ ಪೂಜಾರಿ, ಸದಾಶಿವ ಅಹಿರಸಂಗ, ವಿಷ್ಣು ವಾಘಮೋರೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ೭ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕಾಲಾಯ ತಸ್ಮೈ ನಮಃ

ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ

ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು

ಏ.4 ರಂದು ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕಾರ್ಯಾಗಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಾಲಾಯ ತಸ್ಮೈ ನಮಃ
    In ಭಾವರಶ್ಮಿ
  • ಸ್ವಲ್ಪ ಸಮಯ ಸಿಕ್ಕರೂ ಸಾಕು ಅದು ರಸಮಯ
    In ವಿಶೇಷ ಲೇಖನ
  • ಬಿಳಿಜೋಳ ಮತ್ತು ಕಣಿಕೆಗೆ ಹೆಚ್ಚಿದ ಬೇಡಿಕೆ :ಸಾಗಣೆ ಜೋರು
    In (ರಾಜ್ಯ ) ಜಿಲ್ಲೆ
  • ಏ.4 ರಂದು ನಿರಂತರ ವೈದ್ಯಕೀಯ ಶಿಕ್ಷಣ ಮತ್ತು ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಯತ್ನಾಳ ಆಪ್ತ ನಂದು ಗಡಗಿ ಬಿಜೆಪಿ ಸೇರ್ಪಡೆ
    In (ರಾಜ್ಯ ) ಜಿಲ್ಲೆ
  • ಚಿದಂಬರ ಸೇವಾ ಸಮಿತಿಯಿಂದ ಹನುಮಾನ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಅಡಿಪಾಯದ ಶಿಕ್ಷಣ ಬಹಳ ಮುಖ್ಯ :ಶಂಕರಗೌಡ
    In (ರಾಜ್ಯ ) ಜಿಲ್ಲೆ
  • ತಾಪಮಾನ ಹಿನ್ನೆಲೆ ಬದಲಾದ ಸರ್ಕಾರಿ ಕಚೇರಿ ಸಮಯ
    In (ರಾಜ್ಯ ) ಜಿಲ್ಲೆ
  • ಹಿಂಗಾರು ಹಂಗಾಮಿಗೆ ಏ.೭ ವರೆಗೆ ಕಾಲುವೆ ಜಾಲಕ್ಕೆ ನೀರು
    In (ರಾಜ್ಯ ) ಜಿಲ್ಲೆ
  • ವಜ್ರಹನುಮಾನ ದೇಗುಲದಲ್ಲಿ ಹನುಮಾನ ಜಯಂತಿ ಆಚರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.