Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರದ ಸಿಂದಗಿ ರಸ್ತೆಯಲ್ಲಿರುವ ಶ್ರೀ ಗವಿಸಿದ್ದೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಸೌಹಾರ್ದ ಭೇಟಿ ನೀಡಿದರು.ಅವರನ್ನು ಆಡಳಿತಮಂಡಳಿ ಸದಸ್ಯರು ಸತ್ಕರಿಸಿದರು.ಈ ಸಂದರ್ಭದಲ್ಲಿ ಡಾ. ಶ್ರೀಶೈಲ ಕೋಳಿ, ಬಾಳು ಮುಳಜಿ, ಮಹೇಶ ಹೂಗಾರ, ಡಾ. ರಾಜಕುಮಾರ ಮಾಳಿ, ಶಶಿಕಾಂತ ಕುಂಬಾರ, ಡಾ. ಶಿವಪ್ರಕಾಶ ಹೊರಪೇಟೆ ಸೇರಿದಂತೆ ಇನ್ನಿತರರು ಇದ್ದರು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಅನಧೀಕೃತ ಶಾಲೆಗಳ ಕಡಿವಾಣಕ್ಕೆ ಸಂಘಟನೆಯ ವತಿಯಿಂದ ನಡೆದ ಹೋರಾಟದ ಹಿನ್ನೆಲೆ ಪಟ್ಟಣದ ವಿದ್ಯಾನಗರದ ವಿದ್ಯಾಸ್ಪೂರ್ತಿ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಅನುಮತಿ ರದ್ದು ಪಡಿಸಿದ ಆದೇಶ ಸ್ವಾಗತಾರ್ಹ. ಶಿಕ್ಷಣ ಇಲಾಖೆಯ ದಿಟ್ಟ ಅಧಿಕಾರಿಗಳಿಗೆ ಮತ್ತು ಹೋರಾಟಕ್ಕೆ ಬೆಂಬಲಿಸಿದ ಬಡಾವಣೆಯ ನಿವಾಸಿಗಳಿಗೆ ನಮ್ಮ ಸಂಘಟನೆಯ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿಯ ಚಂದ್ರಕಾಂತ ಕಾದ್ರೊಳ್ಳಿ ಬಣದ ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಈ ಕಾರ್ಯ ಸಂತಸ ತಂದಿದ್ದರೂ ದೂರು ನೀಡಿದ ತಕ್ಷಣವೇ ಈ ಕಾರ್ಯವಾಗಿಲ್ಲವಲ್ಲ ಎಂಬ ನೋವು ಇದೆ. ದಾಖಲೆಗಳು ಖೊಟ್ಟಿ ಇವೆ ಅಂತಾ ತಿಳಿದರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಹೋರಾಟದ ಬಗ್ಗೆ ಕೆಲವರು ನಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದರು. ನಾವು ಹೋರಾಟ ಮಾಡುವವರು ಹೊರತು ಮಾರಾಟವಾಗುವವರಲ್ಲ. ಅಂಬೇಡ್ಕರ್ ಸಾಹೇಬರ ತತ್ವ ಸಿದ್ಧಾಂತಗಳನ್ನು ಪಾಲನೆ ಮಾಡುತ್ತೇವೆ ಹೊರತು ಕಂಡವರ ದುಡ್ಡಿಗೆ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಈ ಭಾರಿ ಮುನಿಸಿಕೊಂಡಿರುವ ವರುಣದೇವ ಕೃಪೆಗಾಗಿ ಮುಸ್ಲಿಂ ಬಾಂದವರು ಶುಕ್ರವಾರರಂದು ಪಟ್ಟಣದಲ್ಲಿ ಮುಸ್ಲಿಂ ಬಾಂದವರು ಪ್ರಾರ್ಥನೆ ಸಲ್ಲಿಸಿದ್ದಾರೆ.ಪಟ್ಟಣ ಅಂಜುಮನ್ ಪ್ರೌಢ ಶಾಲೆಯ ಹಿಂಬಾಗದಲ್ಲಿರುವ ಬಾಪುಗೌಡ ಸಂಗನಗೌಡ ಪಾಟೀಲ ಅವರ ಜಮೀನಿನಲ್ಲಿ ಒಗ್ಗೂಡಿದ ನೂರಾರು ಮುಸ್ಲಿಂ ಬಾಂಧವರು ಸಾತೋ ಶಹೀದ ಜಾಮೀಯಾ ಮಸೀದಿಯಲ್ಲಿ ಶುಕ್ರವಾರ ನಮಾಜದ ಪ್ರಾರ್ಥನೆಯ ನಂತರ ಅಂಜುಮನ್ ಶಾಲೆಯ ಮೈದಾನದವರೆಗೆ ಪಾದಯಾತ್ರೆ ಮೂಲಕ ತೆರಳಿದ ನಂತರ ಈ ವಿಶೇಷ ಪ್ರಾರ್ಥನೆಯನ್ನು ಮೌಲಾನಾ ಮೊಹಮ್ಮದ್ ಅಜರುದ್ದೀನ ಖಾಸಮಿ ಅವರ ನೇತೃತ್ವದಲ್ಲಿ ನಿರ್ವಹಿಸಿದರು.ನಂತರ ದೇವರಲ್ಲ್ಲಿ ಸಮೃದ್ಧ ಮಳೆ ಸುರಿಸುವಂತೆ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರಾದ ಸೈಯದ್ ಶಕೀಲ ಅಹ್ಮದ್ ಖಾಜಿ ಅವರು ಮಾತನಾಡಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನಮ್ಮ ರೈತರನ್ನು ಬಧುಕು ಒಳಗೊಂಡು ಎಲ್ಲರೂ ತೊಂದರೆಯಲ್ಲಿದ್ದಾರೆ ಇಂಥ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ದೇವರ ಮೊರೆ ಹೋಗಿ ಅವನಲ್ಲಿ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ. ಪ್ರವಾದಿ ಮಹಮ್ಮದರು ಮಳೆ ಬಾರದೆ ಇದ್ದಾಗ ತಮ್ಮ ಅನುಯಾಯಿಗಳಿಗೆ ಈ ರೀತಿಯ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಕರ್ನಾಟಕ ಸರ್ಕಾರವು ರಜಪೂತ ಸಮುದಾಯಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗಾಗಿ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿ ಸಮಾಜ ಬಾಂದವರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ತಾಳಿಕೋಟೆಯ ರಜಪೂತ ಸಮಾಜದ ಕ್ಷೇಮಾಭಿವೃದ್ದಿ ಸಂಘ ರಾಜ್ಯ ಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಶುಕ್ರವಾರರಂದು ತಹಶಿಲ್ದಾರರ ಮುಖಾಂತರ ರವಾನಿಸಿದೆ.ಕರ್ನಾಟಕ ರಜಪೂತ ಸಮೂದಾಯಗಳ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದಲ್ಲಿ ಆರ್ಥಿಕವಾಗಿ ಸಮುದಾಯದವರನ್ನು ಸ್ವಾವಲಂಬಿಗಳನ್ನಾಗಿಸಲು ಅನುಕೂಲವಾಗಲಿದೆ ಇದು ಅಲ್ಲದೇ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೆರವಾಗುವ ನಿಟ್ಟಿನಲ್ಲಿ ಸಮೂದಾಯ ಉದ್ದೇಶವನ್ನು ಹೊಂದುವ ಕುರಿತು ಹಾಗೂ ಸಮಾಜದ ಸರ್ವತೋನ್ಮುಖ ಅಭಿವೃದ್ದಿಗಾಗಿ ಶ್ರಮಿಸುವ ಕುರಿತು ನಿಗಮ ಸ್ಥಾಪನೆಯು ಅಗತ್ಯವಾಗಿದೆ ಎಂದು ರಜಪೂತ ಸಮಾಜದ ಕ್ಷೇಮಾಭಿವೃದ್ದಿ ಸಂಘ ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ನಮೂದಿಸಿದೆ.ಈ ವಿಷಯ ಕುರಿತು ರಜಪೂತ ಸಮಾಜ ಕ್ಷೇಮಾಭಿವೃದ್ದಿ ಸಂಘ ಸಮಾಜಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸುವ ಮೂಲಕ ರಜಪೂತ ಸಮಾಜದ ಮಹಾ ರಾಣಾಪ್ರತಾಪಸಿಂಹ ಸರ್ಕಲ್‌ದಿಂದ ಬಸ್ ನಿಲ್ದಾಣ ಮಾರ್ಗವಾಗಿ ತಾಲೂಕಾ ತಹಶಿಲ್ದಾರ ಕಚೇರಿಗೆ ತೆರಳಿ ಸಮಾಜದ ಎಲ್ಲ…
ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಆರ್ಥಿಕ ತಜ್ಞ ಜಾಕ್ವೆಸ್ ಕೂಸ್ಟೋ ಅವರು “ಮಿತಿಮೀರಿದ ಬೆಳೆಯುವ ಜನಸಂಖ್ಯೆಯಿಂದ ಇಂದು ನಾವು ಎದುರಿಸುತ್ತಿರುವ ಪ್ರತಿಯೊಂದು ಪರಿಸರ ಸಮಸ್ಯೆಗೆ ಮೂಲ ಕಾರಣವಾಗಿದೆ”. ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗುವ ಸಮಸ್ಯೆಗಳಾದ ಬಡತನ, ನಿರುದ್ಯೋಗ ಮತ್ತು ಸಂಪನ್ಮೂಲಗಳ ಕೊರತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಇಂದಿನ ಅಗತ್ಯತೆಯಾಗಿದೆ.ಜಗತ್ತಿನಾದ್ಯಂತ ಜನಸಂಖ್ಯೆ ನಿಯಂತ್ರಣದ ಜಾಗೃತಿ, ಅರಿವು ಮೂಡಿಸುವುದು ಹಾಗೂ ಸಾರ್ವಜನಿಕರಲ್ಲಿ ಜನಸಂಖ್ಯಾ ಸ್ಪೋಟ ಮತ್ತು ಅದರಿಂದುಂಟಾಗುವ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಮಾಡುವುದೇ ಈ ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಮುಖ ಉದ್ಧೇಶವಾಗಿದೆ. ಈ ದಿನಾಚರಣೆಯನ್ನು ಪ್ರತಿವರ್ಷ ಜುಲೈ ೧೧ ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.ಮೊಟ್ಟಮೊದಲು ಈ ದಿನಾಚರಣೆಯನ್ನು ೧೯೮೯ ರಲ್ಲಿ ಸಂಯುಕ್ತ ರಾಷ್ಟçಗಳ ಅಭಿವೃದ್ಧಿ ಕಾರ್ಯಕ್ರಮ ಆಡಳಿತ ಮಂಡಳಿಯ ವತಿಯಿಂದ ಆಚರಿಸಲಾಯಿತು.ಜಾಗೃತಿ ಆಂದೋಲನವಾಗಬೇಕುವಿಶ್ವ ಜನಸಂಖ್ಯಾ ದಿನಾಚರಣೆಯು ಒಂದು ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಆಂದೋಲನವಾಗಿದ್ದು, ಈ ದಿನದ ಆಚರಣೆಯ ಮೂಲಕ ವರ್ಷದಿಂದ ವರ್ಷಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಮತ್ತು ಗಂಭೀರ…
ಲೇಖನ- ಅವಿನಾಶ ಸೆರೆಮನಿಬೈಲಹೊಂಗಲಬೆಳಗಾವಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಜನಸಂಖ್ಯೆಯ ಬೆಳವಣಿಗೆ, ಅದರ ಸವಾಲುಗಳು, ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಸುಸ್ಥಿರ ಅಭಿವೃದ್ಧಿಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.ಜನಸಂಖ್ಯೆ ಒಂದು ದೇಶದ ಶಕ್ತಿಯೂ ಹೌದು, ಸವಾಲೂ ಹೌದು. ಅದು ಎಷ್ಟರ ಮಟ್ಟಿಗೆ ಅವಕಾಶವಾಗುತ್ತದೆ ಮತ್ತು ಎಷ್ಟರ ಮಟ್ಟಿಗೆ ಭಾರವಾಗುತ್ತದೆ ಎಂಬುದು ಆ ದೇಶದ ಯೋಜನೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಸಂಪನ್ಮೂಲ ನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. 2026ರ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯ”ಇಂದಿನ ಮತ್ತು ಭವಿಷ್ಯದ ಯುವಜನರ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು”ಎಂದರೆ ಪ್ರಸ್ತುತ ಇರುವ ಮತ್ತು ಮುಂದಿನ ಪೀಳಿಗೆಯ ಯುವಕರ ಕನಸುಗಳು, ಗುರಿಗಳು ಮತ್ತು ಆಸೆಗಳನ್ನು ಈಡೇರಿಸುವುದು ಎಂದರ್ಥ.ಒಂದು ಕಾಲದಲ್ಲಿ ಮನೆಯಲ್ಲಿ ಹೆಚ್ಚು ಜನಸಂಖ್ಯೆ ಇದ್ದರೆ ಹೆಚ್ಚು ಕೆಲಸದ ಕೈಗಳು” ಇವೆ ಎಂಬ ಮೂಢ ಅಭಿಪ್ರಾಯವಿತ್ತು. ಇಂದಿನ ಪರಿಸ್ಥಿತಿಯಲ್ಲಿ ಅನಿಯಂತ್ರಿತ ಜನಸಂಖ್ಯೆ ಹೆಚ್ಚಳವು ಅಭಿವೃದ್ಧಿಯ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆಯಲು ಶಿಕ್ಷಕರ ಭೋದನೆಗಳನ್ನು ಸರಿಯಾದ ರೀತಿಯಲ್ಲಿ ಕೇಳಿಸಿಕೊಂಡು, ಅವುಗಳನ್ನು ಸರಿಯಾಗಿ ಪಾಲಿಸಬೇಕೆಂದು ರಬಕವಿ-ಬನಹಟ್ಟಿ ತಾಲುಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಹೇಳಿದರು.ಸಮೀಪದ ಯರಗಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಯಲು ರಂಗಮAದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವ್ಯಸನ ವಿರೋಧಿ ದಿನಾಚರಣೆ ಹಾಗೂ ಶಾಲಾ ಕ್ರೀಢಾ ಮತ್ತು ಸಾಂಸ್ಕೃತಿಕ ಚಟುವಟಿಕೆ, ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳು ಕೇವಲ ಅಂಕಗಳ ಬೆನ್ನಟ್ಟದೆ ಗುಣಾತ್ಮಕ ಹಾಗೂ ಪ್ರಾಯೋಗಿಕ ಶಿಕ್ಷಣ ಪಡೆಯಬೇಕು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಢೆಗಳಲ್ಲಿ ಭಾಗವಹಿಸಬೇಕು, ಶಾಲೆಯಲ್ಲಿ ಲಭ್ಯವಿರುವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ಮಕ್ಕಳಿಗೆ ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಬನಹಟ್ಟಿ ಪೋಲಿಸ ಠಾಣಾಧಿಕಾರಿ ಶಿವರಾಜ ಧರಿಗೋಣ ಮಾತನಾಡಿ ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳಸಾಗಣೆಯಿಂದ ಸಮಾಜಕ್ಕೆ ಉಂಟಾಗುವ ಹಾನಿಯ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮದ ರಾಹುಲ್ ಸೋಮನಿಂಗ ಖವಿ ಎಂಬ ಯುವಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭವಾದ ಎಲ್.ಕೆ.ಜಿ ಹಾಗೂ ಯುಕೆಜಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ಸಿಲ್ ಕೊಡುವ ಮೂಲಕ ಜನ್ಮದಿನ ಆಚರಿಸಿಕೊಂಡರು.ದುಂದು ಅನವಶ್ಯಕ ವೆಚ್ಚ ಮಾಡದೇ ಸರ್ಕಾರಿ ಬಡ ಶಾಲೆಯ ಮಕ್ಕಳ ಕಲಿಕೆಗೆ ಅನೂಕೂಲವಾಗಲು ಕಲಿಕಾ ಸಾಮಗ್ರಿ ಕೊಡಲಾಗಿದೆ. ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದು ರಾಹುಲ್ ತಿಳಿಸಿದರು.ಈ ಸಂದರ್ಭದಲ್ಲಿ ಪೈಗಂಬರ್ ಜತ್ತಿ, ಅಂಜನಾ ದೇಶಮುಖ ರಮೇಶ ದೊಡಮನಿ, ಇಮಾಮಸಾಬ ಮುಲ್ಲಾ, ಸೋಮನಿಂಗ ಖವಿ, ವಿನಾಯಕ ಜಮಖಂಡಿ ಹಾಗೂ ಗೆಳೆಯರ ಬಳಗ ಇದ್ದರು.
ಕರಿ ಮಸೂತಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿ ಭರವಸೆ ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ರೈತರ ಬಹುದಿನದ ಬೇಡಿಕೆಯಾಗಿದ್ದ ಕರಿ ಮಸೂತಿ ಏತ ನೀರಾವರಿ ಯೋಜನೆಯ ಜಾಕ್ವೆಲ್ ಕಂ ಪಂಪ್‌ಹೌಸ್‌ನಲ್ಲಿ ಬುಧವಾರ ಹಲ್ಯಾಳ ಗ್ರಾಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರು ಪಂಪ್‌ಸೆಟ್‌ಗೆ ಚಾಲನೆ ನೀಡುವ ಮೂಲಕ ಕೆನಾಲ್‌ಗಳಿಗೆ ನೀರು ಹರಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.ಈ ವೇಳೆ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಕೆನಾಲ್‌ಗಳನ್ನು ಸುಮಾರು ಒಂದು ತಿಂಗಳ ಮೊದಲೇ ಆರಂಭಿಸುವ ಉದ್ದೇಶವಿತ್ತು. ಆದರೆ ಕೃಷ್ಣಾ ನದಿಗೆ ನೀರಿನ ಹರಿವು ತಡವಾಗಿ ಬಂದ ಕಾರಣ ಕೆನಾಲ್‌ಗಳಿಗೆ ನೀರು ಹರಿಸುವಲ್ಲಿ ವಿಳಂಬವಾಯಿತು. ಆದರೂ ಜೂನ್ ತಿಂಗಳಲ್ಲಿ ಎರಡು ಬಾರಿ ಉತ್ತಮ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆಯನ್ನು ಪೂರ್ಣಗೊಳಿಸಿದ್ದಾರೆ. ಈಗ ಕೆನಾಲ್ ನೀರನ್ನು ಮೊದಲ ಆದ್ಯತೆಯಾಗಿ ರೈತರ ಬೆಳೆಗಳಿಗೆ ತಲುಪಿಸಲಾಗುವುದು. ರೈತರು ತಮ್ಮ ಬೆಳೆಗಳಿಗೆ ಅಗತ್ಯವಿರುವಷ್ಟು ನೀರನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆಯಬೇಕು ಹಾಗೂ ಬೆಳೆಗಳಿಗೆ ನೀರು ಹರಿಸಿದ…
