Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕ್ರಾಂತಿಕಾರಿ ಕವಿ ಸರ್ವಜ್ಞ

ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ

ವಿಳ್ಯದೆಲೆ-ಈರುಳ್ಳಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗ್ರಾಹಕರ ಜೇಬಿಗೆ ಹೊರೆಯಾದ ನಿಂಬೆಹಣ್ಣಿನ ದರ
(ರಾಜ್ಯ ) ಜಿಲ್ಲೆ

ಗ್ರಾಹಕರ ಜೇಬಿಗೆ ಹೊರೆಯಾದ ನಿಂಬೆಹಣ್ಣಿನ ದರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬೇಸಿಗೆಯಲ್ಲಿ ಗ್ರಾಹಕರಿಗೆ ಮತ್ತಷ್ಚು ಬಿಸಿಯೇರಿಸಿದ ನಿಂಬೆ | ನಿಂಬೆಯೊಂದಕ್ಕೆ 8 ರೂ.ಗಿಂತ ಹೆಚ್ಚು ಬೆಲೆ | ಇಳುವರಿ ಕಡಿಮೆ ಬಂದದ್ದೇ ಕಾರಣ

ಉದಯರಶ್ಮಿ ದಿನಪತ್ರಿಕೆ

ವರದಿ: ಸಿದ್ರಾಮ್ ಎಮ್ ಇಟ್ಟಿ
ಜಮಖಂಡಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಏರಿಕೆಯಾಗುವ ನಿಂಬೆಹಣ್ಣಿನ ದರ ಈ ಬಾರಿ ಕೂಡಾ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಬಿಸಿಲು ಬೇಗೆಯ ನಡುವೆ ನಿತ್ಯ ಬಳಸುವ ನಿಂಬೆ ದರವೂ ಗ್ರಾಹಕರಿಗೆ ಬಿಸಿಯೇರಿಸಿದೆ.
ಪಟ್ಟಣದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ಕಂಡಿತೆಂದು ಖರೀದಿಗೆ ತೆರಳಿದರೆ ದರ ಬಲು ದುಬಾರಿಯಾಗಿದೆ. ನಿಂಬೆವೊಂದಕ್ಕೆ ಸುಮಾರು 7ರಿಂದ 8 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಸಣ್ಣ ಗಾತ್ರದ ನಿಂಬೆ ಹಣ್ಣು ಮಾತ್ರ ಕಡಿಮೆ ದರಕ್ಕೆ ಲಭ್ಯವಿದೆ.
ನಿಂಬೆ ಹಣ್ಣು ಸಿಗುವುದು ಕಷ್ಟ
ಬಿಸಿಲ ಬೇಗೆಯ ನಡುವೆ ಗ್ರಾಹಕರಿಗೆ ಬಿಸಿಯೇರಿಸಿದೆ ನಿತ್ಯ ಬಳಸುವ ನಿಂಬುವಿನ ದರ ಸದ್ಯ ಗರಿಷ್ಠ ದರಲ್ಲಿ ಮಾರಾಟ ಮಾಡಲಾಗುತ್ತಿದೆ. ಉತ್ತಮ ಗುಣಮುಟ್ಟದ ನಿಂಬೆ ಹಣ್ಣು ಸಿಗುವುದು ಕಡಿಮೆಯಾಗಿದೆ. ಇದರಿಂದ ಅಗತ್ಯದಷ್ಟು ಕೊಳ್ಳಲೂ ಆಗದೇ ಬಿಡಲೂ ಆಗದೇ ಗ್ರಾಹಕರು ಪರಿತಪಿಸುವಂತಾಗಿದೆ.
ನಿಂಬೆಹಣ್ಣಿನ ದರ ಜೇಬಿಗೆ ಕುತ್ತು
ಆರೋಗ್ಯಕ್ಕೆ ಹಿತಕಾರಿಯಾದ ನಿಂಬೆಯನ್ನು ಆಹಾರ ಪದಾರ್ಥಗಳಲ್ಲಿಅಗತ್ಯವಾಗಿ ಬಳಕೆ ಮಾಡಲಾಗುತ್ತದೆ. ಊಟಕ್ಕೆ ಉಪ್ಪಿನ ಕಾಯಿ ಇಲ್ಲದಿದ್ದರೆ ಹೇಗೆ ಸಪ್ಪೆಯೋ ಹಾಗೇ ಕೆಲವು ಅಡುಗೆ ಪದಾರ್ಥ ತಯಾರಿಯಲ್ಲಿ ನಿಂಬೆ ಇರುವಿಕೆ ಬಹಳ ಮುಖ್ಯ. ಅದರಲ್ಲೂಈ ಬೇಸಿಗೆಯಲ್ಲಿ ಜ್ಯೂಸ್‌ ಮಾಡಿಕೊಳ್ಳಲು ಇದು ಇರಲೇಬೇಕು. ಅದಕ್ಕಿಂತ ಹೆಚ್ಚಾಗಿ ಉಪ್ಪಿನಕಾಯಿಗೆ ನಿಂಬೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಈ ಹಣ್ಣಿನ ದರ ಜೇಬಿಗೆ ಕುತ್ತು ತಂದಿಟ್ಟಿದೆ. ಒಳ್ಳೆಯ ಗುಣಮಟ್ಟದ ನಿಂಬೆಯೊಂದಕ್ಕೆ 8 ರೂ.ಗಿಂತ ಹೆಚ್ಚು ಬೆಲೆಯಿಂದೆ. ಸಣ್ಣಸಣ್ಣ ನಿಂಬೆ ಕೊಂಡೊಯ್ದರೆ ಅದರಲ್ಲಿ ರಸವೇ ಇರುವುದಿಲ್ಲ ಎನ್ನುತ್ತಾರೆ ಜ್ಯೂಸ್ ವ್ಯಾಪಾರಿ ಕಾಶೀನಾಥ ಜನಗೌಡ.
ಈ ಬಾರಿ ಇಳುವರಿ ಕಡಿಮೆ
ಗ್ರಾಮಗಳ ತೊಟಗಳ ಬದುವು, ತಗ್ಗು ಪ್ರದೇಶದಲ್ಲಿ ಮನೆಯಂಗಳದಲ್ಲಿ ಹೆಚ್ಚಾಗಿ ನಿಂಬೆ ಗಿಡಗಳಿರುತ್ತವೆ. ಮನೆ ಖರ್ಚಿಗೆ ಸಾಕಾಗುವಷ್ಟು ನಿಂಬೆ ಹಣ್ಣು ಈ ಗಿಡಗಳಲ್ಲೇ ಸಿಗುತ್ತವೆ. ಆದರೆ, ಈ ಬಾರಿ ಮಳೆಗಾಲದಲ್ಲಿ ಅತಿಯಾದ ಮಳೆಯಿಂದಾಗಿ ಇದರ ಇಳುವರಿ ಮೇಲೆ ಹೊಡೆತ ಬಿದ್ದಿದೆ. ಗಿಡಗಳಲ್ಲಿ ನಿಂಬೆ ಪ್ರಮಾಣ ತೀರಾ ಕಡಿಮೆಯಾಗಿದೆ. ಅದರಲ್ಲೂ ಬೇಸಿಗೆಯ ಅಬ್ಬರಕ್ಕೆ ಗಿಡಗಳನ್ನು ಬದುಕಿಸಿಡುವುದೇ ಸವಾಲಾಗಿದೆ.

“ಈಗ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಒಂದು ನಿಂಬೆ ಹಣ್ಣು 5 ರೂ.ದಿಂದ 6 ರೂ.ಗೆ ಮಾರಾಟವಾದರೆ, ದೊಡ್ಡ ಗಾತ್ರದ ನಿಂಬೆಹಣ್ಣಿನ ಬೆಲೆ 7 ರೂ.ದಿಂದ 10 ರೂ.ಇದೆ. ಮಾರುಕಟ್ಟೆಯ ಬೇಡಿಕೆಗೆ ಅನುಸಾರ ಬೆಳೆಗಾರರಿಂದ ನಿಂಬೆ ಸಿಗುತ್ತಿಲ್ಲ. ಕಳೆದ ವರ್ಷ ಇದ್ದ ದುಬಾರಿ ದರ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಹೆಚ್ಚಾಗಬಹುದು.”

– ನಿಂಬೆಹಣ್ಣಿನ ವ್ಯಾಪಾರಿಗಳು
ಜಮಖಂಡಿ

“ರಾಜ್ಯದಲ್ಲಿ ಹೆಚ್ಚಾಗಿ ನಿಂಬೆ ಪೂರೈಸುವ ನಮ್ಮ ವಿಜಯಪುರ ಜಿಲ್ಲೆಯಲ್ಲಿ ನಿಂಬೆ ಇಳುವರಿ ಕುಸಿತವಾಗಿರುವುದು ದರ ಹೆಚ್ಚಲು ಕಾರಣವಾಗಿದೆ. ಚಳಿಗಾಲದಲ್ಲಿ 10-12 ಚೀಲ ಸಿಗುವಲ್ಲಿ ಈಗ 2 ಚೀಲ ಅವರು ಹೇಳಿದ ದರಕ್ಕೆ ಸಿಗುತ್ತಿದೆ. ಇನ್ನು ಆಂಧ್ರದಿಂದ ಬರುತ್ತಿದ್ದರೂ ಅದು ಇನ್ನೂ ಸರಿಯಾಗಿ ಬರುತಿಲ್ಲ. ಅದು ಸರಿಯಾಗಿ ಮಾರುಕಟ್ಟೆಗೆ ಬರಲು ಶುರುವಾದಾಗ ಬೆಲೆ ಇಳಿಯಬಹುದು.”

– ಮಲ್ಲು ನಾವಿ
ಹೊಕುಂಡಿ ಗ್ರಾಮದ ನಿಂಬೆ ಬೆಳೆಗಾರ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕ್ರಾಂತಿಕಾರಿ ಕವಿ ಸರ್ವಜ್ಞ

ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ

ವಿಳ್ಯದೆಲೆ-ಈರುಳ್ಳಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ

ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡಿ :ಸಲೀಮ್ ಮರ್ತೂರ್

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕ್ರಾಂತಿಕಾರಿ ಕವಿ ಸರ್ವಜ್ಞ
    In ವಿಶೇಷ ಲೇಖನ
  • ಕೊನೆಯಿರದ ಸಾಧನೆಗೆ ಸಮರ್ಪಣಾ ಭಾವ
    In ವಿಶೇಷ ಲೇಖನ
  • ವಿಳ್ಯದೆಲೆ-ಈರುಳ್ಳಿಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆ
    In (ರಾಜ್ಯ ) ಜಿಲ್ಲೆ
  • ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡಿ :ಸಲೀಮ್ ಮರ್ತೂರ್
    In (ರಾಜ್ಯ ) ಜಿಲ್ಲೆ
  • ಸಚಿವ ಸಂಪುಟದಲ್ಲಿ ಭೋವಿ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಿ :ಯಂಪೂರೆ
    In (ರಾಜ್ಯ ) ಜಿಲ್ಲೆ
  • ವಿಶೇಷ ಚೇತನರು ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆಯಬೇಕು
    In (ರಾಜ್ಯ ) ಜಿಲ್ಲೆ
  • ಜೂ.೧೮ರಿಂದ ಬಂಜಾರ ಯುವಕ-ಯುವತಿಯರಿಗೆ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ಉಪವಿಭಾಗ ಕಚೇರಿ ಆರಂಭಕ್ಕೆ ಒತ್ತಾಯಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಯೋಜನೆಗಳು ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿವೇತನ ಹಾಗೂ ಶುಲ್ಕ ಮರುಪಾವತಿ :ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.