Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ಶಾಲೆಯಲ್ಲಿ ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದ ಸ್ಪರ್ಧೆಯಲ್ಲಿ ಕೆಜಿಎಸ್ ಶಾಲೆಯ 4ನೇ ವರ್ಗದ ರಂಜಿತಾ ವಾಘಮೋಡೆ-ಪ್ರಥಮ ಮತ್ತು 5ನೇ ವರ್ಗದ ವಿದ್ಯಾಶ್ರೀ ಜೊತಗೊಂಡ- ಪ್ರಥಮ ಸ್ಥಾನ ಪಡೆದು, ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರಿಗೆಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಿಸಲಾಯಿತು.ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಬಿ ಕುಲಕರ್ಣಿ, ಶ್ರದ್ಧಾ ಬಂಕಲಗಾ, ಎಸ್ ಡಿ ಬಿರಾದಾರ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಅತಿಥಿ ಶಿಕ್ಷಕ ಪ್ರಜ್ವಲ ಕುಲಕರ್ಣಿ ಸೇರಿದಂತೆ ಅನೇಕರು ಮಕ್ಕಳ ಸಾಧನೆಗೆ ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಇಂಡಿ: ಭೀಮಾ ನದಿ ಸೇತುವೆ ಬಳಿ ಲೋಕೋ ರೈಲು ಹಳಿತಪ್ಪಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.ತಾಲ್ಲೂಕಿನ ಪಡನೂರ ಗ್ರಾಮದ ಭೀಮಾ ಬ್ರಿಡ್ಜ್ ಹತ್ತಿರ ಘಟನೆ ನಡೆದಿದೆ.ರೈಲು ಹಳಿ ತಪ್ಪಿದ ಪರಿಣಾಮ ಈ ಭಾಗದ ರೈಲು ಸಂಚಾರ ರದ್ದು ಮಾಡಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರದಿಂದ ಕಲಬುರಗಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.ರೈಲು ಹಳಿತಪ್ಪಿರುವ ಹಿನ್ನೆಲೆಯಲ್ಲಿ ಕೆಲ ರೈಲು ಸಂಚರ ರದ್ದಾಗಿದೆ. ಮೈಸೂರು-ಪಂಢರಪುರ ನಡುವಿನ ರೈಲು ಸಂಖ್ಯೆ 16535 ರೈಲನ್ನು ಇಂದು ರದ್ದು ಮಾಡಲಾಗಿದೆ.ಫಂಡರಪುರ-ಮೈಸೂರು ನಡುವುನ ರೈಲು ಸಂಖ್ಯೆ 16536 ಸೆ.6ರ ಸಂಚಾರ ಪಂಢರಾಪುರ-ವಿಜಯಪುರ ನಡುವೆ ಭಾಗಶ: ರದ್ದಾಗಲಿದೆ ಎಂದು ತಿಳಿದುಬಂದಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತಾಗಿ ನಡೆದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ವರ್ಷ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಾಮ ನಿರ್ದೇಶಿತ ಸಮಿತಿ ಸದಸ್ಯ ರಫಿ ಭಂಡಾರಿ ಮಾತನಾಡಿ, ಕಳೆದ ವರ್ಷ ದೌಲತ್‌ಕೋಟೆಯಲ್ಲಿರುವ ಹಾನಿಗೊಳಗಾದ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ಕರೆದು ನಿರ್ದೇಶನ ನೀಡಬೇಕು. ಇನ್ನೋರ್ವ ಸದಸ್ಯರಾದ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ದ್ವಿದಳ ದಾನ್ಯ ಪೌಷ್ಟಿಕಾಂಶವಿರುವ ಆಹಾರ ನೀಡಬೇಕು. ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತಾಗಿ ನಡೆದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ವರ್ಷ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಾಮ ನಿರ್ದೇಶಿತ ಸಮಿತಿ ಸದಸ್ಯ ರಫಿ ಭಂಡಾರಿ ಮಾತನಾಡಿ, ಕಳೆದ ವರ್ಷ ದೌಲತ್‌ಕೋಟೆಯಲ್ಲಿರುವ ಹಾನಿಗೊಳಗಾದ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ಕರೆದು ನಿರ್ದೇಶನ ನೀಡಬೇಕು. ಇನ್ನೋರ್ವ ಸದಸ್ಯರಾದ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ದ್ವಿದಳ ದಾನ್ಯ ಪೌಷ್ಟಿಕಾಂಶವಿರುವ ಆಹಾರ ನೀಡಬೇಕು. ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ…
ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಶೇಷ ಘಟಕ ಯೋಜನೆಯ ಹಾಗೂ ಗಿರಿಜನ ಉಪಯೋಜನೆಯ ಅನುದಾನವನ್ನು ಲ್ಯಾಪ್ಸ್ ಆಗದಂತೆ ಸಮರ್ಪಕ ಬಳಕೆಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ೨೦೨೪-೨೫ನೇ ಸಾಲಿನ ವಿಶೇಷ ಘಟಕ ಯೋಜನೆಯ ಹಾಗೂ ಗಿರಿಜನ ಉಪಯೋಜನೆಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಆಗಸ್ಟ್-೨೦೨೪ರ ಮಾಹೆಯ ಅಂತ್ಯದವರೆಗೆ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈಗಾಗಲೇ ವಿವಿಧ ಇಲಾಖೆಗಳಿಗೆ ಅನುದಾನ ಬಿಡುಗಡೆಯಾಗಿದ್ದು ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವಂತೆ ಸೂಚಿಸಿದರು. ಬಾಕಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಪೌರ ಕಾರ್ಮಿಕರಿಗೆ ನೇಮಕಾತಿ ಸಂದರ್ಭದಲ್ಲಿ ಬೇಕಾದ ಪ್ರಮಾಣ ಪತ್ರ ನೀಡಿಕೆ ವಿಳಂಬ ಆಗುತ್ತಿದ್ದು, ಆದಷ್ಟು ಶೀಘ್ರವಾಗಿ ಪರಿಶೀಲನೆ ಮಾಡಿ ಪೌರ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಬೇಕು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹೊರಗುತ್ತಿಗೆ ಆಧಾರದಲ್ಲಿರುವ ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಇ.ಪಿ.ಎಫ್…
ಮುಡಾ ಹಗರಣ | ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ ಬೆಂಗಳೂರು: ಮುಡಾ ಹಗರಣ ಪ್ರಕರಣದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಹೈಕೋರ್ಟ್ ತೀರ್ಪು ಪಕ್ಷದ ಹೋರಾಟಕ್ಕೆ ಸಂದ ಜಯ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಹೈಕೋರ್ಟ್‌ನ ತೀರ್ಪು ಸಾಬೀತಾಗಿದೆ ಎಂದು ಹೇಳಿದ್ದಾರೆ.ಹಗರಣ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಿಜೆಪಿ ತೀರ್ಮಾನಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದ ಆದೇಶವನ್ನು ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಸುದೀರ್ಘ ಚರ್ಚೆಯ ನಂತರ ಈ ಆದೇಶ ಬಂದಿದೆ. ಹಲವು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಏಜೆಂಟ್ ಎಂದು ಕರೆದಿದ್ದರು. ಕೋರ್ಟ್ ಆದೇಶ ನೀಡಿದ್ದು, ರಾಜ್ಯಪಾಲರ ಕ್ರಮಗಳನ್ನು ಹೈಕೋರ್ಟ್ ಮಾನ್ಯ ಮಾಡಿದೆ, ತನಿಖೆಗೆ ಆದೇಶಿಸಿರುವ ಅವರ ನಿರ್ಧಾರ ಕಾನೂನುಬದ್ಧತೆ ಮತ್ತು ಸಾಂವಿಧಾನಿಕ ತತ್ವಗಳನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರ ಸ್ವಚ್ಚತೆಯಿಂದ ಕೂಡಿರಬೇಕು ಜನರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ ಮತ್ತು ಮೂತ್ರಾಲಯ ಒದಗಿಸಬೆಕು ಎನ್ನುವ ನಿಟ್ಟಿನಲ್ಲಿ ೨೦೨೩-೨೪ನೇ ಸಾಲಿನ ಎಸ್.ಬಿಎಂ ೨.೦ ಯೋಜನೆ ಅಡಿಯಲ್ಲಿ ರೂ.೫೯.೧೦ಲಕ್ಷಗಳ ಮಿಸಲಿಟ್ಟು ನಗರ ಜನತೆಯ ಜೊತೆ ಗ್ರಾಮೀಣದಿಂದ ವ್ಯಾಪಾರ ಉದ್ಯೋಗಕ್ಕಾಗಿ ಆಗಮಿಸುತ್ತಿರುವ ಸಾರ್ವಜನಿಕರು, ರೈತಾಪಿ ವರ್ಗ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಯ್ಕೆಯಾದ ನಗರದ ೮ಸ್ಥಳಗಳಲ್ಲಿ ೪ಶೌಚಾಲಯ ಹಾಗೂ ೪ ಮೂತ್ರಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕನಕದಾಸ ವೃತ್ತದ ಹತ್ತಿರ ಸನ್ ೨೦೨೩-೨೪ನೇ ಸಾಲೀನ ಎಸ್‌ಬಿಎಂ ೨.೦ ಯೋಜನೆಯಡಿಯಲ್ಲಿ ರೂ ೫೯ಲಕ್ಷ ೧೦ಸಾವಿರ ರೂ.ವೆಚ್ಚದಲ್ಲಿ ೮ಶೌಚಾಲಯ ನಿರ್ಮಾಣದ ಭೂಮಿ ಪೂಜೆಯನ್ನು ನೇರವೇರಿಸಿ ಮಾತನಾಡಿದ ಅವರು, ಸಿಂದಗಿ ನಗರವನ್ನು ಸ್ವಚ್ಚತೆಯಿಂದ ಕೂಡಿರಬೇಕು ಎನ್ನುವ ನಿಟ್ಟಿನಲ್ಲಿ ಕನಕದಾಸ ವೃತ್ತ, ವಿದ್ಯಾನಗರ ಕ್ರೀಡಾಂಗಣ, ಬಸ್ ಡಿಪೋ ಆಶ್ರಯ ಕಾಲೋನಿ, ಗಾಂಧಿ ವೃತ್ತದ ಹತ್ತಿರ ೪ ಶೌಚಾಲಯ ಹಾಗೂ ಸಂಗಮ ಬಾರ್, ಕೆಇಬಿ, ಮೋರಟಗಿ ನಾಕಾ, ಕೋರ್ಟ ಹತ್ತಿರ ಒಟ್ಟು ೪ ಮೂತ್ರಾಲಯಗಳನ್ನು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿಯೂ ಆರೋಗ್ಯವನ್ನು ಸುಧಾರಿಸುವಲ್ಲಿ ಔಷಧಿಕಾರರ ಪಾತ್ರವನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಔಷದಾಲಯ ತಜ್ಞಾಧಿಕಾರಿ ಶ್ರೀಶೈಲ ಪರೀಟ್ ಹೇಳಿದರು.ಪಟ್ಟಣದ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಶ್ರೀ ಸಂಗಮೇಶ್ವರ ಪಾರ್ಮಸಿ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ವ ಔಷಧಿಕಾರರ ದಿನಾಚರಣೆಯ ಕಾರ್ಯಕ್ರಮವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಔಷದಾಲಯ ತಜ್ಞಾಧಿಕಾರಿ ಶ್ರೀಶೈಲ ಪರೀಟ್ ಉದ್ಘಾಟಿಸಿ ಮಾತನಾಡಿದ ಅವರು, ಔಷಧಿ ತಜ್ಞ ಎನ್ನುವುದು ಆರೋಗ್ಯ ರಕ್ಷಣೆ ವೃತ್ತಿಪರ ಪರವಾನಿಗೆಯಾಗಿದ್ದು, ಔಷಧಿಗಳನ್ನು ವಿತರಣೆ ಮಾಡುವುದು, ಲಸಿಕೆಗಳನ್ನು ನೀಡುವುದು, ಆಹಾರ ಪೂರಕಗಳ ಸರಿಯಾದ ಬಳಕೆಯ ರೋಗಿಗಳಿಗೆ ಸಲಹೆ ನೀಡುವುದು ಸೇರಿದಂತೆ ಕರ್ತವ್ಯಗಳೊಂದಿಗೆ ಔಷಧಾಲಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿ ಎಂ.ಎಂ.ಹಂಗರಗಿ, ಹಾಗೂ ಪತ್ರಕರ್ತ ಇಸ್ಮಾಯಿಲ್ ಶೇಖ್ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಬಳಗಾನೂರ ಪ್ರಾಥಮಿಕ ಆರೋಗ್ಯ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಸಮೀಪದ ರೇವತಗಾಂವ ಗ್ರಾಮದ ಮಲ್ಲಿಕಾರ್ಜುನ ಕಲ್ಲಪ್ಪ ಮಾನೆ ಅವರು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ)ದ ಮತಿಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಸದ್ಯ ಚಡಚಣ ಮಟ್ಟಣದ ಎಂ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ಶನಿವಾರದಂದು ಬೆಂಗಳೂರಿನ ಜ್ಞಾನ ಭಾರತಿ ಆವರಣದ ಪ್ರೊ.ಕೆ ವೆಂಕಟಗಿರಿ ಗೌಡ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ)ದ ರಾಜ್ಯಾಧ್ಯಕ್ಷ ಸುರೇಶ ಗೊಲ್ಲರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಸವಪೂರ್ವ ಆರೈಕೆ ಮುಂದುವರೆದ ವೈದ್ಯಕೀಯ ಶಿಕ್ಷಣ ಕುರಿತ ಕಾರ್ಯಾಗಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಸವ ಪೂರ್ವ ಆರೈಕೆ ಕಾರ್ಯಾಗಾರಗಳು ತಾಯಂದಿರು ಮತ್ತು ಶಿಶುಗಳ ಆರೈಕೆ ವೃತ್ತಿಪರರಿಗೆ ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಕೌಶಲ್ಯ ಅಳವಡಿಸಿಕೊಳ್ಳಲು ಅವಕಾಶ ನೆರವು ನೀಡುತ್ತವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಂಪತ್ ಗುಣಾರಿ ಹೇಳಿದ್ದಾರೆ.ಶನಿವಾರ ನಗರದ ಬಿ. ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಮೇರಿಕದ ಟಿ.ಎ.ಎಚ್.ಬಿ ಟೆಕ್ಸಾಸ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಸವಪೂರ್ವ ಆರೈಕೆ ಮುಂದುವರೆದ ವೈದ್ಯಕೀಯ ಶಿಕ್ಷಣ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ತಾಯಂದಿರು ಮತ್ತು ನವಜಾತ ಶಿಶುಗಳ ಆರೈಕೆ ಬಹುಮುಖ್ಯವಾಗಿದೆ. ಈ ಕೆಲಸದಲ್ಲಿ ಕಾರ್ಯ ನಿರ್ವಹಿಸುವ ವೃತ್ತಿಪರರಿಗೆ ಬದಲಾಗುತ್ತಿರುವ ಇಂದಿನ ಆಧುನಿಕ ವೈಜ್ಞಾನಿಕ ಪದ್ಧತಿಯಲ್ಲಿ ತಾಂತ್ರಿಕ ಕೌಶಲ್ಯ ಮತ್ತು ವೃತ್ತಿಕೌಶಲ್ಯ ಅಗತ್ಯವಾಗಿದೆ. ತರಬೇತಿ ಶಿಬಿರಗಳು ಮತ್ತು ಕಾರ್ಯಾಗಾರಗಳು ಈ ವೃತ್ತಿಪರರಿಗೆ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ನೆರವು ನೀಡುತ್ತವೆ ಎಂದು ಡಾ.ಗುಣಾರಿ ಹೇಳಿದರು.ಟೆಕ್ಸಾಸ್ ನ ಟಿ.ಎ.ಬಿ.ಎಚ್. ಪ್ರತಿನಿಧಿ ಡಾ.ಪ್ರಕಾಶ ಕಬ್ಬೂರ ಅವರು ವಿಶ್ವಾದ್ಯಂತ…
