Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಸಿಂದಗಿ ತಾಲೂಕ ಪಂಚಾಯತ್ ಸಭಾಭವನದಲ್ಲಿ ಅಕ್ಟೋಬರ್ ೯ ರಂದು ಬೆಳಿಗ್ಗೆ ೧೧ ಗಂಟೆಯಿಂದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕರು (ಮೊ:೯೩೬೪೦೬೨೫೨೮) ಉಪಾಧೀಕ್ಷಕರ (ಮೊ:೯೩೬೪೦೬೨೫೫೭), ಪೊಲೀಸ್ ಇನ್‌ಸ್ಪೆಕ್ಟರ್-೧ (ಮೊ:೯೩೬೪೦೬೨೬೪೦), ಪೊಲೀಸ್ ಇನ್ಸಪೆಕ್ಟರ್-೨ (ಮೊ:೯೩೬೪೦೬೨೬೩೯) ಇವರು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.ಅಹವಾಲು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಲಂಚದ ಬೇಡಿಕೆ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ-ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಯೋಗದಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಹಾಗೂ ಸರಕಾರಿ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ, ಸರಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ದೂರುಗಳಿಗಾಗಿ ಕಚೇರಿ ದೂರವಾಣಿ: ೦೮೩೫೨-೨೫೫೩೩೩, ೨೫೭೭೮೬,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಸಾಮಾನ್ಯ ವರ್ಗದ ರೈತರಿಗೆ ೫ ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲು ಅವಕಾಶವಿದ್ದು, ಮೊದಲನೇ ೨ ಹೆಕ್ಟೇರ್ ವರೆಗೆ ಶೇ.೯೦ ರಷ್ಟು ಹಾಗೂ ೨ ಹೆಕ್ಟೇರ್ ಮೇಲ್ಪಟ್ಟು ೫ ಹೆಕ್ಟೇರ್‌ವರೆಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಶೇ.೪೫ರಷ್ಟು ಸಹಾಯಧನ ಪಡೆದುಕೊಳ್ಳಲು ಅವಕಾಶ ವಿರುತ್ತದೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ ನೀರಾವರಿ ಘಟಕ ಹಾಳಾಗಿದ್ದಲ್ಲಿ ಅಥವಾ ಕಾರ್ಯ ನಿರ್ವಹಿಸದೇ ಇದ್ದಲ್ಲಿ ೦೭ ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಂಡಲ್ಲಿ ಸಹಾಯಧನ ಪಡೆದುಕೊಳ್ಳಲು ಅವಕಾಶವಿರುತ್ತದೆ. ರೈತರು ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯಪುರ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರಾಭಿವೃದ್ಧಿ ಇಲಾಖೆಯು ವಿಜಯಪುರ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿದೆ. ವಿಜಯಪುರ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆದು ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-೨ ತಂತ್ರಾಂಶದೊಂದಿಗೆ ಸಂಯೋಜಿಸಿ, ಅಕ್ಟೋಬರ್ ೦೭, ೨೦೨೪ ರಿಂದ ಜಾರಿಗೆ ಬರುವಂತೆ ಸರ್ಕಾರವು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಯನ್ನು ಅಕ್ಟೋಬರ್ ೦೭, ೨೦೨೪ ರಿಂದ ಜಿಲ್ಲಾ ವ್ಯಾಪ್ತಿಯ ಎಲ್ಲಾ ಉಪ ನೋಂದಣಿ ಕಛೇರಿಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ತಂತ್ರಾಂಶದಿಂದಲೇ ಇ-ಖಾತಾ ಪಡೆಯಬೇಕಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ, ಖಾತಾ ತಂತ್ರಾಂಶ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಂದಿಗೆ…

Read More

ಮಾತೋಶ್ರೀ ಬಂಗಾರಮ್ಮ ಸಜ್ಜನ ಕಲ್ಯಾಣ ಮಂಟಪ ಹಾಗೂ ಗೋ ಆಧಾರಿತ ಕೃಷಿ ತರಬೇತಿ ಕೇಂದ್ರ ಲೋಕಾರ್ಪಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲ್ಲೂಕಿನ ಕಗ್ಗೋಡದಲ್ಲಿರುವ ಶ್ರೀ ರಾಮನಗೌಡ ಬಾ.ಪಾಟೀಲ (ಯತ್ನಾಳ) ಗೋ ರಕ್ಷಾ ಕೇಂದ್ರವು ಗುರುವಾರ ವಿಶಿಷ್ಟ ಹಾಗೂ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.ಸಾರ್ವಜನಿಕರಿಗೆ ಮದುವೆ ಮತ್ತಿತರೆ ಶುಭ ಕಾರ್ಯಗಳ ಆಯೋಜನೆಗೆ ಹಾಗೂ ಗೋವು ಉತ್ಪನ್ನಗಳ ಬಗ್ಗೆ ತರಬೇತಿ ನೀಡಲು ಅನುಕೂಲವಾಗಲೆಂದು ಗೋ ರಕ್ಷಾ ಕೇಂದ್ರದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಮಾತೋಶ್ರೀ ಬಂಗಾರಮ್ಮ ಬಸಪ್ಪ ಸಜ್ಜನ ಕಲ್ಯಾಣ ಮಂಟಪ ಹಾಗೂ ಗೋ ಆಧಾರಿತ ಕೃಷಿ ತರಬೇತಿ ಕೇಂದ್ರವನ್ನು ಸಿಂಗಾರಗೊಂಡ ಐದು ಗೋಮಾತೆಗಳಿಗೆ ಪೂಜೆ ಸಲ್ಲಿಸಿ, ಒಳಪ್ರವೇಶ ಮಾಡಿಸುವ ಮೂಲಕ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಲೋಕಾರ್ಪಣೆಗೊಳಿಸಿದರು.ನಂತರ ಗೋಮಾತೆಯ ಕಲ್ಯಾಣ ಮಹೋತ್ಸವ (ಆಕಳು ಮತ್ತು ಹೋರಿ ಮದುವೆ) ನೆರವೇರಿಸಿ, ಕಲ್ಯಾಣ ಕಾರ್ಯವಾದ ಮದುವೆ ಮತ್ತಿತರೆ ಶುಭ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶೇಷವಾಗಿ ಚಾಲನೆ ನೀಡಲಾಯಿತು.ಇದೇ ವೇಳೆ ಸಿದ್ದೇಶ್ವರ ಸಂಸ್ಥೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪೌರಾಣಿಕ ಹಾಗೂ ಇತಿಹಾಸ ಪ್ರಸಿದ್ಧ ಗ್ರಾಮದೇವತೆಯರಾದ ಶ್ರೀ ಲಕ್ಷ್ಮೀ ಮತ್ತು ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಗುರುವಾರದಂದು ಸಂಭ್ರಮದಿಂದ ಜರುಗಿತು.ಸಾರವಾಡದ ಬಸವೇಶ್ವರ ಗೊಂಬೆ ಕುಣಿತ, ಅಜನಾಳದ ಕರಡಿ ಮಜಲು, ನಾಗಠಾಣ, ಗೂಗದಡ್ಡಿಯ ಡೊಳ್ಳು ಕುಣಿತ, ಅಥಣಿಯ ವಾದ್ಯಮೇಳ, ಗುಲಬರ್ಗಾದ ಪೋತರಾಜನ ಕುಣಿತ ಸೇರಿದಂತೆ ವಿವಿಧ ವಾದ್ಯವೈಭವ, ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಅಪಾರ ಭಕ್ತ ಸಮೂಹದೊಂದಿಗೆ ಜರುಗಿತು.ಮೆರವಣಿಗೆ ದಾರಿಯುದ್ದಕ್ಕೂ ಹೆಣ್ಣು ಮಕ್ಕಳು ದೇವಿಯರಿಗೆ ಉಡಿ ತುಂಬಿಸುವುದು, ಹಣ್ಣು-ಕಾಯಿ ನೈವೇದ್ಯ, ವಿವಿಧ ಸೇವೆ ಹರಕೆ ಕಾಣಿಕೆ ಸಮರ್ಪಣೆ ನಡೆಯಿತು.500ಕ್ಕೂ ಅಧಿಕ ಮಹಿಳೆಯರಿಂದ ಕುಂಭಮೇಳ ಜರುಗಿದ್ದು, ಜಾತ್ರೆಯ ವಿಶೇಷವಾಗಿತ್ತು. ನಾಗಠಾಣ ಮತಕ್ಷೇತ್ರದ ಶಾಸಕ ವಿಠಲ ಕಟಕದೊಂಡ ಅವರು ಬೆಳಿಗ್ಗೆ 9.30ಕ್ಕೆ ಮೆರವಣಿಗೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಯುವ ಮುಖಂಡರಾದ ಚಂದ್ರಶೇಖರ ಅರಕೇರಿ, ಪ್ರಕಾಶ ಲೋಣಿ, ಜಾತ್ರಾ ಕಮಿಟಿಯ ಅಧ್ಯಕ್ಷ ಕಲ್ಯಾಣಿ ಪತ್ತಾರ, ಉಪಾಧ್ಯಕ್ಷ ಸಿದ್ದಪ್ಪ ಶಿರಕನಹಳ್ಳಿ, ಗ್ರಾಮಸ್ತರಾದ ಅಶೋಕ ಕತ್ನಳ್ಳಿ, ಬಾಬು ಕತ್ನಳ್ಳಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶ್ರೀ ಓಂಕಾರಿಣಿ ಆದಿಶಕ್ತಿ ತರುಣ ಮಂಡಳಿ ಕನಕದಾಸ ಬಡಾವಣೆಯಿಂದ ಈ ವರ್ಷದ ನವರಾತ್ರಿ ಉತ್ಸವ ದಿ.೧೭-೧೦-೨೦೨೪ರ ವರೆಗೆ ವಿಜ್ರಂಭಣೆಯಿಂದ ಜರುಗುವ ಕಾರ್ಯಕ್ರಮಗಳುಶುಕ್ರವಾರ ೦೪-೧೦-೨೦೨೪ ಶ್ರೀ ದೇವಿಯ ನಿತ್ಯೋಪಚಾರ ಮಹಾಪೂಜೆ ರಾತ್ರಿ ಛಬಿನಾಶನಿವಾರ ೦೫-೧೦-೨೦೨೪ ರಂದು ಶ್ರೀ ದೇವಿಯ ನಿತ್ಯೋಪಚಾರ ಮಹಾಪೂಜೆ ರಾತ್ರಿ ಛಬಿನಾರವಿವಾರ ೦೬-೧೦-೨೦೨೪ ರಂದು ಶ್ರೀದೇವಿಯ ದುರ್ಗಾ ಹೋಮ, ಮತ್ತು ಕುಂಕುಮಾರ್ಚನೆಸೋಮವಾರ ೦೭-೧೦-೨೦೨೪ ರಂದು ಲಲಿತಾ ಪಂಚಮಿ ಶ್ರೀ ದೇವಿಯ ನಿತ್ಯೋಪಚಾರ ಮಹಾಪೂಜೆ ಬೆಳಿಗ್ಗೆ ೯-೦೦ ಗಂಟೆಗೆ ಲಕ್ಷ ಕುಂಕುಮಾರ್ಚನೆ ರಾತ್ರಿ ಛಬಿನಾಮಂಗಳವಾರ ೦೮-೧೦-೨೦೨೪ ರಂದು ಶ್ರೀದೇವಿಯ ನಿತ್ಯೋಪಚಾರ ಮಹಾಪೂಜೆ, ಚಂಡಿಕಾ ಹೋಮ ೧೧ ಗಂಟೆಗೆ ಪೂರ್ಣಾಹುತಿಬುಧವಾರ ದಿ. ೦೯-೧೦-೨೦೨೪ ರಂದು ಶ್ರೀದೇವಿಯ ನಿತ್ಯೋಪಚಾರ ಮಹಾಪೂಜೆ ರಾತ್ರಿ ಛಬಿನಾಗುರುವಾರ ದಿ. ೧೦-೧೦-೨೦೨೪ ರಂದು ಶ್ರೀ ದೇವಿಯ ಭವಾನಿ ತಲವಾರ ಅಲಂಕಾರ ಮಹಾಪೂಜೆ ರಾತ್ರಿ ಛಬಿನಾಶುಕ್ರವಾರ ದಿ. ೧೧-೧೦-೨೦೨೪ ರಂದು ಶ್ರೀ ಮಹಿಷಾಸುರ ಮರ್ದಿನಿ ಅಲಂಕಾರ ಮಹಾಪೂಜೆ ಸಾಯಂಕಾಲ ೬-೦೦ ಗಂಟೆಗೆ ಕುಮಾರಿ ಮುತೈದೆಯರ ಉಡಿ ತುಂಬುವ…

Read More

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಕಾರ್ಯವೈಖರಿಗೆ ಸಚಿವ ಸಂತೋಷ ಲಾಡ್ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಈ ನಾಡಿನ ಮಕ್ಕಳಿಗಾಗಿ ಹಾಗೂ ಅದರಲ್ಲೂ ವಿಶೇಷವಾಗಿ ರಾಜ್ಯಾದ್ಯಂತ ಇರುವ ಬಾಲಮಂದಿರದ ಮಕ್ಕಳಿಗಾಗಿ ಹಮ್ಮಿಕೊಂಡಿರುವ ವಿಶೇಷ ಹೃದಯಸ್ಪರ್ಶಿ ಕಾರ್ಯಕ್ರಮಗಳನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸ್ನೇಹಿತರಾದ ಸಚಿವ ಎಂ.ಬಿ.ಪಾಟೀಲರು ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ನಮ್ಮ ಸರ್ಕಾರ ಸೂಕ್ತ ವ್ಯಕ್ತಿಯನ್ನು ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದೆ ಎಂದು ಸಚಿವ ಸಂತೋಷ ಲಾಡ್ ಶ್ಲಾಘಿಸಿದರು.ಧಾರವಾಡದ ಹೊರವಲಯ ಹಳ್ಳಿಗೇರಿಯ ಸಮೀಪದಲ್ಲಿರುವ ನೇಚರ್ ಫಸ್ಟ್ ಇಕೋ ವಿಲೇಜ್ ನಲ್ಲಿ ರಾಜ್ಯದ ಬಾಲಮಂದಿರದ ಮಕ್ಕಳಿಗಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಆಯೋಜಿಸಿರುವ ರಾಜ್ಯ ಮಟ್ಟದ ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಸಂಗಮೇಶ ರಂತಹ ತಾಯಿ ಹೃದಯದ ಗೆಳೆಯ ನನ್ನ ಸ್ನೇಹಿತರಾಗಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಉದಯರಶ್ಮಿ ದಿನಪತ್ರಿಕೆ ಬ್ರಹ್ಮಾನಂದಮ್ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ,ದ್ವಂದ್ವಾತೀತಂ ಗಗನ ಸದೃಶಂ ತತ್ವಮಸ್ಯಾಧಿಲಕ್ಷಂ ,ಏಕಮ್ ನಿತ್ಯಂ ವಿಮಲ ವಚನಂ ಸರ್ವಧಿ ಸಾಕ್ಷಿಭೂತಂಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ* ಸಚ್ಚಿದಾನಂದ ಅಂದರೆ ಸತ,ಚಿತ್ ಮತ್ತು ಆನಂದ ಸ್ವರೂಪಗಳನ್ನು ಹೊಂದಿರುವುದಕ್ಕೆ ಬ್ರಹ್ಮಾನಂದ ಎಂದು ಹೇಳುತ್ತಾರೆ. ಅಂತಹ ಪರಮ ಸುಖವನ್ನು ನೀಡುವ ಜ್ಞಾನಮೂರ್ತಿಯಾಗಿರುವ ದ್ವಂದ್ವಗಳಿಂದ ಅತೀತನಾಗಿರುವ ಆಕಾಶದಷ್ಟೇ ವಿಸ್ತಾರವಾದ ಜ್ಞಾನವನ್ನು ಉಳ್ಳವ, ಸದಾಚಾರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ನಿತ್ಯವೂ ಸತ್ಯ ಶುದ್ಧ ಮನಸ್ಸುಳ್ಳ ಏಕೈಕ ವ್ಯಕ್ತಿ ಗುರು. ಮಾತು ತಪ್ಪದವನು ಸರ್ವಕ್ಕೂ ಸಾಕ್ಷಿಭೂತನಾಗಿರುವವನು, ಭಾವ ಬಂಧನಗಳಿಗೆ ಒಳಗಾಗದವನು ಸತ್ವ, ರಜ ಮತ್ತು ತಮೋ ಗುಣಗಳನ್ನು ಮೀರಿದ ಎಲ್ಲ ತಾಮಸ ಗುಣಗಳಿಗೆ ಅತೀತನಾಗಿರುವ ಸದ್ಗುರುವಿಗೆ ನಮಸ್ಕಾರಗಳುನವರಾತ್ರಿ, ದಸರಾ ಎಂದು ಕರೆಯಲ್ಪಡುವ ಈ ಹಬ್ಬ ವನ್ನೂ ಆಚರಿಸುವ ಹಿನ್ನೆಲೆ, ಮತ್ತು ಉದ್ದೇಶದ ಕುರಿತು ಹೇಳುವುದಾದರೆ ನವರಾತ್ರಿ ಹಬ್ಬವನ್ನು ‘ದುಷ್ಟ ಶಿಕ್ಷಣ ಶಿಷ್ಟ ರಕ್ಷಣ’ ಎಂಬ ಮಹತ್ತರ ಆಶಯದೊಂದಿಗೆ ಆಚರಿಸುತ್ತಾರೆ.ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ,…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಇತ್ತಿಚೆಗೆ ಕಲಕೇರಿಯ ಎ.ಕೆ.ಸಿರಸಗಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ೭೦ ಕೆಜಿ ವಿಭಾಗದಲ್ಲಿ ಚಡಚಣದ ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಸಂಕೇತ ಅಲದಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಮನೋಜ ಕಟಗೇರಿ, ದೈಹಿಕ ಉಪನ್ಯಾಸಕ ಶಿವಾನಂದ ಜಿಗಜೇವಣ ಮತ್ತು ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More