Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದ ಪದ್ಮಾ ಕೊಂತಿಕಲ್ಲ ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೂಲತಃ ಬಿದರಕುಂದಿ ಗ್ರಾಮದ ನಿವಾಸಿಯಾಗಿದ್ದ ಇವರು ಪಟ್ಟಣದ ಮಾರುತಿ ನಗರದಲ್ಲಿ ವಾಸವಾಗಿದ್ದರು. ಅ೩ ರಂದು ಮಧ್ಯಾಹ್ನ ೧ಗಂಟೆಗೆ ಬಯಲು ಶೌಚಕ್ಕೆ ಹೋಗಿ ಬರುವದಾಗಿ ಹೇಳಿ ಹೋದವಳು ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಪದ್ಮಾಳ ತಾಯಿ ಪಾರ್ವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More

ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ಸಿಬ್ಬಂದಿಗಳ ಕುಂದುಕೊರತೆಗಳ ಚರ್ಚೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತ, ವಿಜಯಪುರ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೆöÊಸ್ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯಮಟ್ಟದ ಅಡುಗೆ ಸಿಬ್ಬಂದಿಗಳಿಗೆ ಪುನಶ್ಚೇತನ ಕಾರ್ಯಾಗಾರವು ನಗರದ ಬುದ್ದವಿಹಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಪ್ಪ ಆಶಾಪೂರ ಇವರ ನೆರವೇರಿಸಿ ಮಾತನಾಡುತ್ತ, ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ಅಡುಗೆ ಸಿಬ್ಬಂದಿಗೆ ಏಜೆನ್ಸಿಯವರು ಕಾಲಕಾಲಕ್ಕೆ ವೇತನ, ಪಿ.ಎಫ್. ಇ.ಎಸ್.ಐ. ನೀಡಬೇಕು. ಇವರ ಮೂಲಭೂತ ಸೌಲಭ್ಯಗಳ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ ಹಾಗೂ ಏಜೆನ್ಸಿಯನ್ನು ತೆಗೆದು ಸೊಸೈಟಿಯ ಮುಖಾಂತರ ವೇತನ ನೀಡುವಂತೆ ಮಾಡಿರುವ ಸರಕಾರದ ಆದೇಶವು ಸ್ವಾಗತಾರ್ಹ ಎಂದು ತಿಳಿಸಿದರು.ರಾಜ್ಯಾದ್ಯಕ್ಷರಾದ ಭೀಮಶೆಟ್ಟಿ ಯಂಪಳ್ಳಿ…

Read More

ಆಲಮಟ್ಟಿ: ವಾಲಿಬಾಲ್ ಪಂದ್ಯಾಟದಲ್ಲಿ ರೋಚಕ ಗೆಲುವು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿನ ಶಾರದಾ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ತಂಡ ಎಂಟನೇ ಬಾರಿಗೆ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಪ್ರವೇಶ ಪಡೆದಿದೆ.ಜಿಲ್ಲೆಯ ದೇವರ ಹಿಪ್ಪರಗಿ ಬಳಿಯ ಮಣೂರ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಕೆ.ಎಸ್.ಎಲ್.ಎ.ಪ್ರೌಢಶಾಲೆ ಆಶ್ರಯದಲ್ಲಿ ಆಯೋಜನೆಗೊಂಡಿದ್ದ 2024-25 ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಲಮಟ್ಟಿ ಶಾರದಾ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ವೀರೋಚಿತ ಗೆಲುವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.ಈ ಶಾಲೆಯ ಬಾಲಕಿಯರ ವಾಲಿಬಾಲ್ ತಂಡವು ಹಲವಾರು ಬಾರಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಜಯ ಸಾಧಿಸುತ್ತಾ ಬಂದಿದೆ. ಇದೀಗ 8 ನೇ ಬಾರಿಗೆ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಐತಿಹಾಸಿಕವಾಗಿದೆ. ಈ ಶಾಲೆಯ ಮೂವರು ಬಾಲೆಯರು ಈಗಾಗಲೇ ಒಂದು ಬಾರಿ ವಿಭಾಗ ಮಟ್ಟದಲ್ಲಿ ಉತ್ತಮ ಆಟದ ಕೌಶಲ್ಯ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.ಈಗ ಪ್ರಸ್ತುತ ತಂಡದ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ತೇರದಾಳ ಪಟ್ಟಣದಲ್ಲಿ ನಿರ್ಮಿಸಲಾಗಿರುವ ನೂತನ ಅಲ್ಲಮ ಪ್ರಭುದೇವರ ದೇವಸ್ಥಾನದ ಉದ್ಘಾಟನೆ ನಿಮಿತ್ತ ನಡೆಯಲಿರುವ ಬಸವಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಿಮ್ಮಡ ಗ್ರಾಮದಿಂದ ಅಲ್ಲಮಪ್ರಭು ಪರಮಜ್ಯೋತಿಯನ್ನು ಪಂಚಶ್ರೀಗಳೊಂದಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಯಿತು.ಚಿಮ್ಮಡ ವಿರಕ್ತಮಠದ ಚನ್ನಬಸವ ಸಭಾ ಮಂಟಪದಲ್ಲಿ ಹಂದಿಗುಂದ ಆಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶೇಗುಣಶಿ ವಿರಕ್ತಮಠದ ಡಾ. ಮಹಾಂತ ಮಹಾಸ್ವಾಮಿಗಳು ಮಾತನಾಡಿ, ಈ ಪಾದಯಾತ್ರೆಯಲ್ಲಿರಬಕವಿ ಬ್ರಹ್ಮಾನಂದ ಮಠದ ಗುರುಸಿದ್ದ ಮಹಾಸ್ವಾಮಿಗಳು, ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಹಿರೇಮಠದ ವಿಶ್ವಪ್ರಭು ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದು ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪ್ರಭುವಿನ ಕೃಪೆಗೆ ಪಾತ್ರರಾಗಬೇಕೆಂದರು,ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ಅ.೧೪ರಂದು ಪ್ರಾರಂಭಗೊಳ್ಳಲಿರುವ ಪ್ರಭು ಪರಮಜ್ಯೋತಿಯೊಂದಿಗಿನ ಪಾದಯಾತ್ರೆಯು ಮುಂಜಾನೆ ೮ಘಂ.ಗೆ ಚಿಮ್ಮಡ ಗ್ರಾಮದಿಂದ ಹೊರಟು ಹೊಸೂರ, ಸಾಲಿಮನಿ, ರಬಕವಿ, ಹಣಗಂಡಿ ಮೂಲಕ ತೇರದಾಳಕ್ಕೆ ನಡೆಯಲಿದೆ ಎಂದರು.ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪಗೌಡ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಹಣಮಾಪುರ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜರುಗಿತು. ಅಧ್ಯಕ್ಷರಾಗಿ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷರಾಗಿ ಸರಸ್ವತಿ ನಿಂಗಪ್ಪ ಬಿರಾದಾರ ಅವಿರೋಧವಾಗಿ ಆಯ್ಕೆಯಾದರು.ಒಟ್ಟು 18 ಸದಸ್ಯರ ಬಲಾಬಲದ ಹಣಮಾಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ “ಬ”, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷರ ಸ್ಥಾನಕ್ಕೆ ಸರಸ್ವತಿ ನಿಂಗಪ್ಪ ಬಿರಾದಾರ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಸುನೀಲ ಮುದ್ದಿನ ಅಧ್ಯಕ್ಷರಾಗಿ ತೇಜಾ ಸಂಗಪ್ಪ ಕುಬಕಡ್ಡಿ, ಉಪಾಧ್ಯಕ್ಷರಾಗಿ ಸರಸ್ವತಿ ನಿಂಗಪ್ಪ ಬಿರಾದಾರ ಅವರನ್ನು ಅವಿರೋಧವಾಗಿ ಆಯ್ಕೆಯಾದರು ಎಂದು ಘೋಷಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ ಮುಖಂಡರಾದ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ. ಪಕಾಲಿ, ತಾನಾಜಿ ನಾಗರಾಳ, ಗುರುನಗೌಡ ಬಿರಾದಾರ, ಸಂಗಪ್ಪ ಕುಬಕಡ್ಡಿ, ಮಹೇಶ ತೋಟಗೇರ, ಶ್ರೀಕಾಂತ ಗಣಿ, ಮುತ್ತುಸಾಹುಕಾರ ಹಳ್ಳೂರ, ಸಂಗಮೇಶ ಚಲವಾದಿ ಹಾಗೂ ಇನ್ನಿತರರು ಇದ್ದರು.

Read More

೬೮ ವರ್ಷಗಳಿಂದ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿರುವ ಕನ್ನಡ ಕಟ್ಟುವ ಕಾರ್ಯ ಉದಯರಶ್ಮಿ ದಿನಪತ್ರಿಕೆ – ಸಿದ್ರಾಮ ಮಾಳಿಚಡಚಣ: ಗಡಿಗ್ರಾಮ ಉಮರಜದಲ್ಲಿ ನವರಾತ್ರಿ ಉತ್ಸವ ಅತ್ಯಂತ ವಿಶಿಷ್ಟವಾದದ್ದು, ಇಲ್ಲಿ ನಾಡಹಬ್ಬವನ್ನು ಕನ್ನಡ ಭಾಷಾಭಿಮಾನ ಮೂಡಿಸುವ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ. ಕಳೆದ ೬೮ ವರ್ಷಗಳಿಂದಲೂ ಈ ಕಾರ್ಯ ಅತ್ಯಂತ ವೈಭವದಿಂದ ಸದ್ದಿಲ್ಲದೇ ನಡೆಯುತ್ತಿದೆ.ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಪ್ರಭಾತಪೇರಿ ಗಡಿ ಭಾಗದಲ್ಲಿ ಕನ್ನಡ ಭಾಷಾಭಿಮಾನ ಮೂಡಿಸುವ ‘ವೇದಿಕೆ’ಯಾಗಿದೆ. ನವರಾತ್ರಿಯ ಒಂಭತ್ತೂ ದಿನಗಳಲ್ಲಿ ಉಮರಜ ಗ್ರಾಮದಲ್ಲಿ ನಾಡು-ನುಡಿಯ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.೧೯೫೬ರಿಂದ ಪ್ರತಿವರ್ಷ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ರಾಷ್ಟ್ರಧ್ವಜ, ಭಾರತಮಾತೆಯ ಭಾವಚಿತ್ರದೊಂದಿಗೆ ಗ್ರಾಮಸ್ಥರು, ಮಕ್ಕಳೆಲ್ಲರೂ ಸೇರಿ ಹೆಜ್ಜೆ ಹಾಕುತ್ತಾರೆ. ದೇಶಾಭಿಮಾನ, ಧಾರ್ಮಿಕ ಮನೋಭಾವ ಮೂಡಿಸುವ ದೃಷ್ಟಿಯಿಂದ ನಡೆದುಕೊಂಡು ಬರುತ್ತಿರುವ ಈ ಪ್ರಭಾತಪೇರಿಯ ಸಂಪ್ರಯದಾಯವನ್ನು ಜನತೆ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಇಲ್ಲಿ ಒಂಬತ್ತು ದಿನಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾಡದೇವಿಯ ಪ್ರಭಾತ ಪೇರಿ ನಡೆಯುತ್ತದೆ. ಅದರಂತೆ ಈ ವರ್ಷವೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಗಿನ ಜಾವ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಈ ಭಾಗದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಸದಾಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವದರ ಜೊತೆಗೆ ಆಲಮೇಲ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯ ಪಟ್ಟಣವನ್ನಾಗಿ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಹೆಳಿದರು.ಬುಧುವಾರ ಪಟ್ಟಣದ ಡಾ,ಬಿ.ಆರ್.ಅಂಬೇಡ್ಕರ ವೃತ್ತ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು.ಸನ್ ೨೦೧೮-೧೯ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನದಡಿ ಡಾ,ಬಿ.ಆರ್.ಅಂಬೇಡ್ಕರ ವೃತ್ತ ಅಭಿವೃದ್ಧಿ ಕಾಮಗಾರಿಗೆ ೫೦ ಲಕ್ಷ ರೂಗಳನ್ನು ಮಂಜೂರಾತಿ ನೀಡಿ ಇಂದು ವೃತ್ತ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ನೇರವೇರಿಸಲಾಗಿದು, ಇದೇ ತರಹ ಪಟ್ಟಣದ ಪ್ರತಿ ಬಡಾವಣೆಗಳಲ್ಲಿ ಸುಮಾರು ೫ ಕೋಟಿ ರೂಗಳ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದು,ಹಂತ ಹಂತವಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳ್ಳಿಸಿ ಸುಂದರ ಪಟ್ಟಣವನ್ನಾಗಿ ಮಾಡಲಾಗುವದು.ಅದಕ್ಕಾಗಿ ಪಪಂ ಆಡಳಿತ ಮಂಡಳಿಯವರು ಗುತ್ತಿಗೆದಾರರಿಂದ ಸರಿಯಾದ ರೀತಿಯಲ್ಲಿ ಕಾಮಗಾರಿ ಕೆಲಸ ಪೂರ್ಣಗೊಳ್ಳಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಡಾ,ಬಿ.ಆರ್.ಅಂಬೇಡ್ಕರ ವೃತ್ತ ನಿರ್ಮಾಣ ಸಮಿತಿಯ ಅಧ್ಯಕ್ಷ ಹರೀಶ ಎಂಟಮಾನ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ…

Read More

ಸತೀಶ್ ಜಾರಕಿಹೊಳಿ – ಖರ್ಗೆ ಭೇಟಿ ಬಗ್ಗೆ ಊಹಾಪೋಹ ಬೇಡ | ವಿರೋಧ ಪಕ್ಷಗಳಿಂದ ಸುಳ್ಳು ಆರೋಪ | ತಪ್ಪು ಮಾಡದ ನಾನ್ಯಾಕೆ ರಾಜೀನಾಮೆ ಕೊಡಲಿ? ರಾಯಚೂರು: ವಿರೋಧ ಪಕ್ಷಗಳ ಸುಳ್ಳು ಆರೋಪಗಳನ್ನು ಆಧರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪುನರುಚ್ಚರಿಸಿದ್ದಾರೆ.ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ರಾಜಕೀಯ ಕಾರಣಕ್ಕೆ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನಾನು ಏಕೆ ರಾಜೀನಾಮೆ ನೀಡಬೇಕೇ? ಸುಳ್ಳು ಆರೋಪಗಳಿಗೆ ಉತ್ತರ ನೀಡುತ್ತೇವೆ. ನಾವು ಜನರಿಗೆ ಸತ್ಯವನ್ನು ಹೇಳುತ್ತೇವೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.ಇನ್ನು ಮುಡಾ ನಿವೇಶನ ಹಂಚಿಕೆ ಪ್ರಕರಣ ಬೆಳಕಿಗೆ ಬಂದ ನಂತರ ದಲಿತ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಕಾಂಗ್ರೆಸ್‌ ಹೈಕಮಾಂಡ್ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಜನರು ಅನಗತ್ಯವಾಗಿ ಊಹಾಪೋಹ ಸೃಷ್ಟಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಾರೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ, ಕವಿ ಪ್ರಕಾಶನ ಮತ್ತು ಚಿತ್ತಾರ ಕಲಾಬಳಗ ಆಶ್ರಯದಲ್ಲಿ ಅಕ್ಟೋಬರ್ 6ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ “ಜನಕಲಾ ಸಾಂಸ್ಜೃತಿಕ ಮೇಳಕ್ಕೆ ಕ್ಷಣಗಣನೆ ಆರಂಭವಾಗಿದೆ.ವಿಜಯಪುರ ಜಿಲ್ಲೆಯಲ್ಲಿ ಮೊಟ್ಡಮೊದಲ ಬಾರಿಗೆ ಹೋರಾಟದ ಹಾಡುಗಳ ಮೂಲಕ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುತ್ತಿರುವ ಪ್ರಜಾ ಗಾಯಕರ ಸಮಾಗಮವಾಗಲಿದೆ.ಅಕ್ಟೋಬರ್ 6ರಂದು ಮುಂಜಾನೆ 10-30 ಗಂಟೆಗೆ ಮೇ ಕಲಾ ಮಂಡಳಿಯಿಂದ ಹೋರಾಟದ ಹಾಡಿನ ಮೂಲಕ ಪ್ರಾರಂಭಗೊಳ್ಳುವ ಮೇಳವನ್ನು ಮದುವೆ, ಸೋಬಾನೆ, ನಾಮಕರಣ ಮುಂತಾದ ಸಂದರ್ಭಗಳಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಎದೆಯೊಳಗಿಟ್ಟುಕೊಂಡು, ತಾವೇ ಹಾಡು ಕಟ್ಟಿ, ಹಲವು ದಶಕಗಳಿಂದ ಹಾಡುತ್ತ ಬರುತ್ತಿರುವ ಹಿರಿಯ ಜೀವಗಳಾದ ಬಸಮ್ಮ ಪೀರಪ್ಪ ನಡುವಿನಮನಿ, ಆದಮ್ಮ ಚಂದಪ್ಪ ಕದ್ರಿ, ಸಾವಿತ್ರಿಬಾಯಿ ನಿಡೋಣಿ, ರಮಾಬಾಯಿ ಸಂಗಪ್ಪ ಬೆಳ್ಳೆನವರ, ಪದ್ಮಾವತಿ ಸಂಗಪ್ಪ‌ ವಾಘಮೋರೆ ಅವರು ತಮ್ಮ ಹಾಡುಗಳ ಮೂಲಕ ಉದ್ಘಾಟಿಸಲಿದ್ದಾರೆ.ಖ್ಯಾತ ಜನಪರ ಗಾಯಕರಾದ ಜನಾರ್ಧನ (ಜೆನ್ನಿ) ಮೈಸೂರು, ಲಕ್ಷ್ಮಿಪತಿ ಕೋಲಾರ ದಿಕ್ಸೂಚಿ‌ ಮಾತುಗಳನ್ನಾಡಲಿದ್ದಾರೆ. ಬೇರು-ಬೆವರು ಕಲಾ…

Read More

ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ ಅವರು ಶನಿವಾರ ಇಲ್ಲಿನ ಶಾಲಾ, ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ ಪರಿಶೀಲಿಸಿದರು.ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ, ಮಡಿವಾಳ ಮಾಚಿದೇವರ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಅಂಗಡಿ ಅವರು ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಮುಖ್ಯಸ್ಥರಿಂದ ಶೈಕ್ಷಣಿಕ ಪ್ರಗತಿಯ ಮಾಹಿತಿ ಪಡೆದರು. ಅಚ್ಚುಕಟ್ಟತನದ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದರು.ಇದೇ ವೇಳೆ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಎಂ.ಎಸ್.ಅಂಗಡಿ ಅವರನ್ನು ಆತ್ಮೀಯವಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಐಟಿಐ ಕಾಲೇಜು ಪ್ರಿನ್ಸಿಪಾಲ್ ರಾಯಣ್ಣ ಸಣ್ಣಮನಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಸಿಬ್ಬಂದಿಗಳಾದ ಮಲ್ಲಯ್ಯ ಮಠಪತಿ, ಸದಾಶಿವ ಹೊಸಮನಿ, ಸಾವಂತ, ಸದಾಶಿವ ಬೊದ್ಲಾ, ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಗುರುಮಾತೆಯರಾದ ಕವಿತಾ ಅಂಬಿ, ಪ್ರಮೀಳಾ ತೇಲಸಂಗ, ಸಹನಾ ಹತ್ತಳ್ಳಿ ಮೊದಲಾದವರಿದ್ದರು.

Read More