ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ವ್ಯವಸ್ಥಾಪಕ ಎಂ.ಎಸ್.ಅಂಗಡಿ ಅವರು ಶನಿವಾರ ಇಲ್ಲಿನ ಶಾಲಾ, ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿ ಶೈಕ್ಷಣಿಕ ವ್ಯವಸ್ಥೆ ಪರಿಶೀಲಿಸಿದರು.
ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆ, ಮಡಿವಾಳ ಮಾಚಿದೇವರ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಅಂಗಡಿ ಅವರು ಶಾಲೆಗಳಲ್ಲಿನ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿ ಮುಖ್ಯಸ್ಥರಿಂದ ಶೈಕ್ಷಣಿಕ ಪ್ರಗತಿಯ ಮಾಹಿತಿ ಪಡೆದರು. ಅಚ್ಚುಕಟ್ಟತನದ ವ್ಯವಸ್ಥೆಗೆ ಮೆಚ್ಚುಗೆ ಸೂಚಿಸಿದರು.
ಇದೇ ವೇಳೆ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಎಂ.ಎಸ್.ಅಂಗಡಿ ಅವರನ್ನು ಆತ್ಮೀಯವಾಗಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಐಟಿಐ ಕಾಲೇಜು ಪ್ರಿನ್ಸಿಪಾಲ್ ರಾಯಣ್ಣ ಸಣ್ಣಮನಿ, ವಿಶ್ರಾಂತ ಶಿಕ್ಷಕ ಬಸವರಾಜ ಅನಂತಪೂರ, ಸಿಬ್ಬಂದಿಗಳಾದ ಮಲ್ಲಯ್ಯ ಮಠಪತಿ, ಸದಾಶಿವ ಹೊಸಮನಿ, ಸಾವಂತ, ಸದಾಶಿವ ಬೊದ್ಲಾ, ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಗುರುಮಾತೆಯರಾದ ಕವಿತಾ ಅಂಬಿ, ಪ್ರಮೀಳಾ ತೇಲಸಂಗ, ಸಹನಾ ಹತ್ತಳ್ಳಿ ಮೊದಲಾದವರಿದ್ದರು.

