Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣ ಗೌಡರ ಬಣ) ಯಡ್ರಾಮಿ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ಗೌಡ ನಿಂಗನಗೌಡ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ಸೋಮವಾರ ಯಡ್ರಾಮಿ ತಾಲೂಕಿಗೆ 12ನೇ ತರಗತಿಯ ವಾರ್ಷಿಕ ಪರೀಕ್ಷೆ ಕೇಂದ್ರವನ್ನು ಮುಂದೆ ಬರುವ ಮಾರ್ಚ್ ತಿಂಗಳ ಒಳಗಾಗಿ ಪರೀಕ್ಷಾ ಕೇಂದ್ರವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಡಬೇಕೆಂದು ತಾಲೂಕು ದಂಡಾಧಿಕಾರಿಗಳ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೂ ಮತ್ತು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೂ ಮನವಿ ಪತ್ರ ಸಲ್ಲಿಸಲಾಯಿತು. ಇದಕ್ಕೂ ಮುನ್ನ,‌ ಸರ್ದಾರ್ ಶರಣಗೌಡ ಸರ್ಕಲ್ ದಿಂದ ನೂರಾರು ಕಾರ್ಯಕರ್ತರು ಸಾಮೂಹಿಕ ಬೈಕ್ ಸವಾರಿಯೊಂದಿಗೆ ಬಂದು ದಂಡಾಧಿಕಾರಿಗಳಿಗೆ ಮನವಿ ಪುತ್ರ ಸಲ್ಲಿಸಲಾಯಿತು.ಈ ವೇಳೆ ದೇವಿಂದ್ರಪ್ಪಗೌಡ ಮಾತನಾಡಿ, ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಸರ್ಕಾರಿ, ಖಾಸಗಿ ಸೇರಿದಂತೆ ಮೂರು ಪಿಯು ಕಾಲೇಜುಗಳಿವೆ. ಈಗಿರುವ ಪರೀಕ್ಷಾ ಕೇಂದ್ರ ಜೇವರ್ಗಿಗೆ ವಿದ್ಯಾರ್ಥಿಗಳು ಹೋಗಿ ಬರಲು ಅನಾನುಕೂಲ ಆಗುತ್ತಿದೆ . ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಕುರಿತು ಗಮನ ಹರಿಸಿ ಪಿಯು ಪರೀಕ್ಷಾ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ೨೦೨೪-೨೫ ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ನಡೆಸಲಾಗುವ ಸಹಪಠ್ಯ ಚಟುವಟಿಕೆ ಸ್ಪರ್ದೆಗಳನ್ನ ಅ.೨೫ ರಂದು ಬೆಳಿಗ್ಗೆ ೧೦:೩೦ ಕ್ಕೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು ಸ್ಪರ್ದೆಯಲ್ಲಿ ಭಾಗವಹಿಸಲು ಅರ್ಹರಿರುವದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ಅ.೨೨ ರಂದು ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುತ್ತಿರುವ ಕೋಮುವಾದಿ ಶಕ್ತಿಗಳ ವಿರುದ್ಧ ಜನಾಂದೋಲನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಈ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲ ದಲಿತ ಬಾಂಧವರು ಭಾಗಿಯಾಗಬೇಕು ಎಂದು ವಿವಿದ ದಲಿತಪರ ಸಂಘಟನೆಗಳ ಮುಖಂಡರು ವಿನಂತಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮುಖಂಡರು ದೇಶಕ್ಕೆ ಸ್ವತಂತ್ರö್ಯ ಬಂದು ಸಾಕಷ್ಟು ವರ್ಷಗಳು ಗತಿಸಿದರೂ ಕೋಮುವಾದಿ, ಮನುವಾದಿ ಶಕ್ತಿಗಳ ಕುತಂತ್ರ ಪರಂಪರೆ ಇನ್ನಷ್ಟು ಬಲಗೊಳ್ಳುತ್ತಲೇ ಮುಂದುವರೆಯುತ್ತಿದೆ. ಆಡಳಿತಾರೂಢ ಸರ್ಕಾರಗಳು ಪ್ರಜಾಪ್ರಭುತ್ವದ ಆಸಯಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಮೂಲಭೂತ ಹಕ್ಕುಗಳೂ ಮರೀಚಿಕೆಯಾಗಿಯೇ ಉಳಿದಿವೆ. ಜನಸಾಮಾನ್ಯರ ಬದುಕು ಅತಂತ್ರ ಸ್ಥಿತಿಯಲ್ಲಿದ್ದು ಸರ್ವಾಧಿಕಾರಿ ಪರಜಾಪ್ರಭುತ್ವದ ಅಡಿಯಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ ಎಲ್ಲ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಜನಾಂದೋಲನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಎಲ್ಲ ದಲಿತ ಬಾಂಧವರು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದರು. ಈ ವೇಳೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಡಾ. ಸಿದ್ದು ಸಾವಳಸಂಗ ಅವರು ತಮ್ಮ ಮನೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ತಮ್ಮ ಮೂರನೇ ಕವನ ಸಂಕಲನ “ಗೋಧೂಳಿ ಗಂಧ” ಕೃತಿ ಬಿಡುಗಡೆ ಮಾಡಿದರು.ಪುಸ್ತಕ ಬಿಡುಗಡೆ ಮಾಡಿದ ಕಾವ್ಯಶ್ರೀ ಎಸ್.ಸಾವಳಸಂಗ ಮಾತನಾಡಿ, “ಗ್ರಂಥಗಳು ಅಮೂಲ್ಯ ಸಂಪತ್ತು ಇದ್ದಂತೆ. ಸಹೃದಯ ಓದುಗರು ಅವುಗಳನ್ನು ಕೊಂಡು ಓದಿ, ಲೇಖಕರಿಗೆ ಪ್ರೋತ್ಸಾಹಿಸಿ ತನ್ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕು. ಕವಿ ಬರೆದ ಕೃತಿಗಳು ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ಕವಿಯ ಬರವಣಿಗೆಯ ಶ್ರಮ ಸಾರ್ಥಕವಾಗುತ್ತದೆ” ಎಂದು ಹೇಳಿದರು.ಕೃತಿಯ ಲೇಖಕ ಡಾ.ಸಿದ್ದು ಸಾವಳಸಂಗ ಸನ್ಮಾನ ಸ್ವೀಕರಿಸಿ ಮಾತನಾಡಿ, “ಗೋಧೂಳಿ ಗಂಧ ಇದು ನನ್ನ ಮೂರನೆಯ ಕವನ ಸಂಕಲನ. ಇದು ಅನೇಕ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಗ್ರಂಥಗಳು ಕಪಾಟನ್ನು ಅಲಂಕರಿಸದೆ ಜನರ ಮನವನ್ನು ಮುಟ್ಟಬೇಕು ಹಾಗೂ ತಟ್ಟಬೇಕು. ಕವಿ ತನ್ನ ಮನಸ್ಸಿಗೆ ಹೊಳೆದದ್ದನ್ನು ಬರೆಯುತ್ತಾರೆ. ಆದರೆ ಅದರ ನಿಜವಾದ ವಿಮರ್ಶಕರೆಂದರೆ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಬೋಸಲೆ ಪೆಟ್ರೋಲ್ ಪಂಪ್ ಬಳಿ ಇರುವ ಪಾನ್‌ಶಾಪ್ ಅದುರು ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಶಿವಾನಂದ ಲಾಡ ಮೇಲೆ ಪ್ರಕರಣ ದಾಖಲಾಗಿದ್ದು ಈತ ಯಾವುದೇ ಲೈಸನ್ಸ್ ವ, ಪರವಾನಗೆ ಹೊಂದದೆ ತನ್ನ ಪಾನ್‌ಶಾಪ್ ಎದುರು ಗ್ಲಾಸು, ನೀರು ಹಾಗೂ ತಿನಿಸು ಕೊಟ್ಟು ಮಧ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಾಗ ಸಿಕ್ಕಿದ್ದು ಈ ಬಗ್ಗೆ ಪಿಎಸ್‌ಐ ಸಂಜೀವ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More

ಧಾರವಾಡದಲ್ಲಿ ಪಂ.ಪುಟ್ಟರಾಜ ಸಾಹಿತ್ಯೋತ್ಸವದಲ್ಲಿ ಚನ್ನವೀರ ಶ್ರೀ ಆಗ್ರಹ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಡಾ.ಪಂಡಿತ ಪುಟ್ಟರಾಜ ಕವಿ ಗವಾಯಿಗಳವರು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ÷ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದು, ಸರಕಾರವೇ ಪೂಜ್ಯರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿ ಅವರ ಸಾಹಿತ್ಯ, ಜನ ಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಕಡಣಿ ಸಂಸ್ಥಾನ ಹಿರೇಮಠದ ವೇ. ಚನ್ನವೀರ ಸ್ವಾಮಿಗಳು ಗದಗ ಇವರು ಸರಕಾರಕ್ಕೆ ಒತ್ತಾಯಿಸಿದರು.ಅವರು ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯು ೨೦ ಅಕ್ಟೋಬರ್ ೨೦೨೪ ರಂದು ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಪಂ. ಪುಟ್ಟರಾಜ ಸಾಹಿತ್ಯೋತ್ಸವ-೨೪ ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪಂ.ಪುಟ್ಟರಾಜರ ಹುಟ್ಟು ಹಬ್ಬ ಆಚರಣೆಗೆ ಸರಕಾರ ಚಾಲನೆ ನೀಡಲಿ ಎಂದು ಒತ್ತಾಯಿಸಿದರು.ಕ.ವಿ.ವಿ.ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕ, ಸಾಹಿತಿ ಡಾ, ಎ.ಎಲ್.ದೇಸಾಯಿ, ದಾರವಾಡ ಇವರು ಪೂಜ್ಯರ ಸಮಗ್ರ ಸಾಹಿತ್ಯ ಸೇವೆಯ ಕುರಿತು ಮಾತನಾಡಿ, ಪಂ.ಪಂಚಾಕ್ಷರಿ ಗವಾಯಿಗಳವರ ನಾಟಕ ರಂಗಾಯಣದ ಮೂಲಕ ಪ್ರಯೋಗವಾಗಬೇಕು. ಈ ಕೆಲಸ ಧಾರವಾಡದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಹೊನವಾಡ ಗ್ರಾಮದ ೮೯ಕ್ಕೂ ಹೆಚ್ಚು ರೈತರ ಆಸ್ತಿಗಳನ್ನು ವಕ್ಫ್ ಆಸ್ತಿಗಳೆಂದು ಘೋಷಣೆ ಮಾಡುತ್ತಿರುವುದರಿಂದ ಆಗುತ್ತಿರುವ ಅನ್ಯಾಯಕ್ಕೆ, ನ್ಯಾಯ ಕಲ್ಪಿಸುವಂತೆ ಕೋರಿ ರೈತರು ತಮ್ಮ ದಾಖಲೆಗಳೊಂದಿಗೆ ನಗರ ಶಾಸಕರ ಸಾರ್ವಜನಿಕರ ಸಂಪರ್ಕ ಕಾರ್ಯಾಲಯಕ್ಕೆ ಶನಿವಾರ ಮನವಿ ಪತ್ರ ಸಲ್ಲಿಸಿದ್ದಾರೆ.ಹೊನವಾಡ ಗ್ರಾಮದ ನಿವಾಸಿಗಳು ನಾಲ್ಕೈದು ತಲೆಮಾರುಗಳಿಂದ ಸಾಗುವಳಿ ಮಾಡುತ್ತ ಬಂದಿರುವ ಸರ್ವೇ ನಂಬರ್ ೭೩೦, ೭೬೩, ೭೬೪, ೭೬೫, ೭೬೬/೧, ೭೬೯, ೭೭೦, ೭೭೧, ೭೭೨, ೭೭೩, ೭೭೪, ೭೭೬, ೭೭೭, ೭೮೯, ೭೯೯, ೮೦೦/೨, ೮೦೧, ೮೦೨, ೮೦೩, ೮೦೪, ೮೦೫, ೮೦೬/೧, ೮೦೭, ೮೦೯/೧, ೮೧೨/೨, ೮೧೩, ೮೧೪, ೭೬೦, ೭೬೧, ೭೬೨, ೭೬೭, ೭೬೮, ೭೯೦, ೭೬೨/೨, ೭೭೫/೧, ೮೦೬/೨, ೮೦೯/೨, ೮೧೨/೧, ೭೭೫/೨, ೭೭೫/೩, ೭೭೫/೪, ೭೭೫, ೭೫೭/೨ಎ, ೭೫೭/೨ಬಿ, ೭೫೭/ಬಿ, ೭೭೮, ೭೭೯, ೭೮೦, ೭೮೧, ೭೮೨, ೭೮೩, ೭೮೪, ೭೮೫, ೭೮೬, ೭೮೭, ೭೯೧, ೭೯೨, ೭೯೩, ೭೯೪,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಯಿತು.ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರರು ಸಿ.ಬಿ.ಚಿಕ್ಕಲಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಸಹಾಯಕ ಸಂಚಾರ ವ್ಯವಸ್ಥಾಪಕರು ಜೆ,ಕೆ. ಹುಗ್ಗೆನ್ನವರ್, ಕಾರ್ಮಿಕ ಇಲಾಖೆಯ ಸಜ್ಜನ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾರಾಷ್ಟ್ರದ ಜತ್ತ ತಾಲೂಕಿನ ಹುಲುಜಂತಿ ಗ್ರಾಮದಲ್ಲಿ ದಿನಾಂಕ ೨೮-೧೦-೨೦೨೪ರಿಂದ ೦೩-೧೧-೨೦೨೪೭ರವರೆಗೆ ಶ್ರೀ ಮಾಳಿಂಗರಾಯ ದೇವರ ಜಾತ್ರೆ ಜರಗುವ ನಿಮಿತ್ಯ ಕಕರಸಾ ವಿಜಯಪುರ ನಿಗಮದಿಂದ ಹೆಚ್ಚುವರಿ ಬಸ್‌ಗಳ ಕಾರ್ಯಚರಣೆ ಮಾಡಲಾಗುವುದು ಎಂದು ಕಕರಸಾ ನಿಗಮ ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ ೧ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೩), ಇಂಡಿ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೫), ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೭), ಬಸವನ ಬಾಗೇವಾಡಿ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೯), ವಿಜಯಪುರ ೨ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೪), ಸಿಂದಗಿ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೬), ತಾಳಿಕೋಟೆ ಘಟಕದ ವ್ಯವಸ್ಥಾಪಕರು(ಮೊ.೭೭೬೦೯೯೨೨೬೮), ಕೇಂದ್ರ ಬಸ್ ನಿಲ್ದಾಣದ ದೂ.೦೮೩೫೨-೨೫೧೩೪೪, ಮೊ.೭೭೬೦೯೯೨೨೫೮ಕ್ಕೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Read More

ವಿಜಯಪುರದಲ್ಲಿ ನಡೆದ ಪೊಲೀಸ್ ಹುತ್ಮಾತರ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಒತ್ತಡ ನಡುವೆಯೂ ಜನರ ಸುರಕ್ಷತೆಗೆಗಾಗಿ ಹಗಲಿರುಳೆನ್ನದೆ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕರ್ತವ್ಯ ನಿಷ್ಠೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಹೇಳಿದರು.ಸೋಮವಾರ ನಗರದ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಿಗೆ, ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.ಭಧ್ರತೆಯಲ್ಲಿ ಪ್ರಮುಖ ಪಾತ್ರವಹಿಸಿ ಸಮಾಜಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯಬದ್ಧತೆಯಿಂದ ಬಲಿದಾನದಂತಹ ಘಟನೆಗಳು ಜರುಗುತ್ತಿವೆ. ಬಲಿದಾನಗೈದ ಪೊಲೀಸರ ಶ್ರಮ ನೆನೆಯಬೇಕಾಗಿದೆ ಎಂದು ಅವರು ಹೇಳಿದರು.ಜಿಲ್ಲಾಧಿಕಾರಿ ಟಿ.ಭೂಲನ್ ಮಾತನಾಡಿ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಾ ಸಮಾಜದ ಭದ್ರತೆ ಹಾಗೂ ಸುರಕ್ಷತೆಗಾಗಿ ಪ್ರಾಣ ಮುಡುಪಾಗಿಟ್ಟ ಪೊಲೀಸ್ ಅವರನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು…

Read More